ವಂಡರ್ಗಳ ಮೇಲೆ ವಂಡರ್ಗಳನ್ನ ಸೃಷ್ಟಿಸ್ತಿರೋ ನಮ್ಮ ಯಶ್ ನಟಿಸಿ, ನಿರ್ಮಿಸಿರೋ ರಾಮಾಯಣ ಸಿನಿಮಾ.. ಸದ್ಯ ಆಸ್ಕರ್ ಅಕಾಡೆಮಿ ರೇಸ್ನಲ್ಲಿ ಮಿಂಚು ಹರಿಸುತ್ತಿದೆ. ಹಾಲಿವುಡ್ನ ಅವೆಂಜರ್ಸ್, ಡ್ಯೂನ್ ಸಿನಿಮಾಗಳ ಜೊತೆ ಅಖಾಡದಲ್ಲಿ ಹುಬ್ಬೇರಿಸುತ್ತಿದೆ. ಹಾಗಾದ್ರೆ ಅದ್ಯಾವ ಕೆಟಗರಿಯಲ್ಲಿ..? ಬೇರೆ ಯಾವೆಲ್ಲಾ ಸಿನಿಮಾಗಳು ಸ್ಪರ್ಧೆಯಲ್ಲಿವೆ..? ಪಟ್ಟಿಯಲ್ಲಿ ನಮ್ಮ ರಾಮಾಯಣ ಯಾವ ಮಟ್ಟದಲ್ಲಿದೆ ಅನ್ನೋದ್ರ ಎಕ್ಸ್ಕ್ಲೂಸಿವ್ ರಿಪೋರ್ಟ್ ನಿಮ್ಮ ಮುಂದೆ.
- ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್.. ಆಸ್ಕರ್ ರೇಸ್ನಲ್ಲಿ ‘ರಾಮಾಯಣ’
- ವರ್ಲ್ಡ್ ಟಾಪ್ 20 ಫಿಲ್ಮ್ಸ್ ಪಟ್ಟಿ.. 14ನೇ ಸ್ಥಾನದಲ್ಲಿ ಯಶ್ ಚಿತ್ರ
- ಅವೆಂಜರ್ಸ್ ಡೂಮ್ಸ್ಡೇ, ಡ್ಯೂನ್: ಪಾರ್ಟ್ 3 ಜೊತೆ ಸ್ಪರ್ಧೆ
- ಹಾಲಿವುಡ್ ಹುಬ್ಬೇರಿಸಿರೋ ಭಾರತೀಯರ ವಿಶ್ಯುವಲ್ ಎಫೆಕ್ಟ್ಸ್
99ನೇ ಆಸ್ಕರ್ ಅಕಾಡೆಮಿ ಅವಾರ್ಡ್ಸ್ಗೆ ಎಂಟ್ರಿಗಳು ಶುರುವಾಗಿ ಆಗಿದೆ. ಇತ್ತೀಚೆಗೆ ತೆರೆಕಂಡ ನಮ್ಮ ಭಾರತೀಯ ಚಿತ್ರರಂಗದ ಮಾಹಾದೃಶ್ಯಕಾವ್ಯ ರಾಮಾಯಣ ಕೂಡ ಈಗಾಗ್ಲೇ ಆಸ್ಕರ್ ಅಖಾಡಕ್ಕೆ ನಾಮನಿರ್ದೇಶನಗೊಂಡಿತ್ತು. ಇದೀಗ ಬೆಸ್ಟ್ ವಿಶ್ಯುವಲ್ ಎಫೆಕ್ಟ್ ಕೆಟಗರಿಯಲ್ಲಿ ವರ್ಲ್ಡ್ನ ಟಾಪ್ 20 ಮೂವೀಸ್ ಲಿಸ್ಟ್ನಲ್ಲಿ ರಾಮಾಯಣ ರಾರಾಜಿಸ್ತಿದೆ. ಸದ್ಯ ಇದು ವರ್ಲ್ಡ್ ನ್ಯೂಸ್ ಆಗಿ ಪರಿಣಮಿಸಿದ್ದು.. ಕನ್ನಡಿಗರಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಷಯವಾಗಿದೆ.
ಹೌದು.. ಅವೆಂಜರ್ಸ್ ಡೂಮ್ಸ್ಡೇ, ಡ್ಯೂನ್ ಪಾರ್ಟ್ 3 ಅಂತಹ ಹಾಲಿವುಡ್ನ ವರ್ಲ್ಡ್ ಕ್ಲಾಸ್ ಸಿನಿಮಾಗಳ ಜೊತೆ ಸ್ಪರ್ಧೆಯಲ್ಲಿರೋ ರಾಮಾಯಣ ಹಾಲಿವುಡ್ ಮಂದಿಯ ಹುಬ್ಬೇರಿಸಿದೆ. ಯಾಕಂದ್ರೆ ರಾಮಾಯಣ ಚಿತ್ರ ಅಕ್ಷರಶಃ ವಿಶ್ಯುವಲ್ ಟ್ರೀಟ್. ಅದರಲ್ಲೂ ಜಟಾಯು-ರಾವಣನ ನಡುವಿನ ಫೈಟ್ ನೋಡುಗರನ್ನ ಮಂತ್ರಮುಗ್ಧಗೊಳಿಸಿದೆ. ಅಲ್ಲದೆ.. ರಾಕ್ಷಸರು-ರಾಮ ಲಕ್ಷ್ಮಣ ಸೀತೆ ನಡುವಿನ ಸಾಹಸ ದೃಶ್ಯಗಳು ಕೂಡ ಸಖತ್ ರಿಯಲಿಸ್ಟಿಕ್ ಆಗಿ ಮೂಡಿಬಂದಿವೆ. ಹಾಗಾಗಿಯೇ ಅವು ಬರೀ ಪ್ರೇಕ್ಷಕರನ್ನಷ್ಟೇ ಅಲ್ಲದೆ.. ಆಸ್ಕರ್ ಜ್ಯೂರಿ ಕಮಿಟಿಯ ದಿಲ್ ಕೂಡ ದೋಚಿದೆ.
ಇಲ್ಲಿಯ ತನಕ ಸುಮಾರು 8 ಬಾರಿ ಆಸ್ಕರ್ ಅವಾರ್ಡ್ಗಳನ್ನ ಪಡೆದಂತಹ DNEG ಸಂಸ್ಥೆ ವರ್ಲ್ಡ್ನ ಬೆಸ್ಟ್ ವಿಎಫ್ಎಕ್ಸ್ ಕಂಪನಿಯಾಗಿ ಹೊರಹೊಮ್ಮಿದೆ. ಅದ್ರ ಮಾಲೀಕರು ರಾಮಾಯಣದ ಒನ್ ಆಫ್ ದಿ ಪ್ರೊಡ್ಯೂಸರ್ ನಮಿತ್ ಮಲ್ಹೋತ್ರಾ. ಆದ್ರೆ ಆತ 8 ಆಸ್ಕರ್ ಬಂದರೂ ತೃಪ್ತರಾಗಿಲ್ಲ. ಅದಕ್ಕೆ ಕಾರಣ ವಿದೇಶಿ ಚಿತ್ರಗಳಿಗೆ ಆಸ್ಕರ್ ಬಂದಿರೋದು. ಅದೇ ಕಾರಣದಿಂದ ನಮ್ಮ ನೆಲದ ಕಥೆಗೆ ಆಸ್ಕರ್ ಅಂಗಳದಲ್ಲಿ ಆಸ್ಕರ್ ಹೊಡೆಯಲೇಬೇಕು ಅನ್ನೋ ಹಠದಿಂದ ಯಶ್ ಜೊತೆ ಕೈ ಜೋಡಿಸಿ ರಾಮಾಯಣ ದೃಶ್ಯ ವೈಭವ ನೀಡಿದ್ರು. ಅದೀಗ ಫಲಿಸುವ ಸಮಯ ಸನ್ನಿಹಿತವಾಗಿದೆ.
ನಿತೇಶ್ ತಿವಾರಿ ಡೈರೆಕ್ಷನ್.. ರಣ್ಬೀರ್ ಕಪೂರ್-ಸಾಯಿ ಪಲ್ಲವಿ ನಟನೆ ಸೇರಿದಂತೆ ನಮ್ಮ ಯಶ್ ಔಟ್ ಸ್ಟ್ಯಾಂಡಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಒಂದ್ಕಡೆ ಮಾಸ್ ಎಲಿಮೆಂಟ್ಸ್, ಮತ್ತೊಂದ್ಕಡೆ ಎಮೋಷನ್ಸ್.. ರಾಮಾಯಣದ ಆ ಎಸೆನ್ಸ್ಗೆ ಚ್ಯುತಿ ಆಗದಂತೆ.. ಅದರ ಚೌಕಟ್ಟಿನಲ್ಲೇ ಅದ್ಭುತ ಸೃಷ್ಠಿಸಿರೋ ಯಶ್-ನಮಿತ್ ಮಲ್ಹೋತ್ರಾ-ನಿತೇಶ್ ತಿವಾರಿ.. ಭಾರತೀಯ ಚಿತ್ರರಂಗಕ್ಕೆ ಬಹುದೊಡ್ಡ ನೇಮು, ಫೇಮು ತಂದುಕೊಡೋ ಧಾವಂತದಲ್ಲಿದ್ದಾರೆ. ಒಂದು ವೇಳೆ ರಾಮಾಯಣ ಆಸ್ಕರ್ ಗೆದ್ರೆ.. ರಾಜಮೌಳಿಯ ತ್ರಿಬಲ್ ಆರ್ ಸಿನಿಮಾದ ನಾಟು ನಾಟು ಸಾಂಗ್ ಬೆನ್ನಲ್ಲಿ ಮತ್ತೊಂದು ಆಸ್ಕರ್ ಗರಿ ಪಡೆದ ಸಿನಿಮಾ ಆಗಿ ವರ್ಲ್ಡ್ವೈಡ್ ಹೆಡ್ಲೈನ್ಸ್ ಆಗಲಿದೆ. ಅದು ಆಗಲಿ ಅನ್ನೋದು ಅಸಂಖ್ಯಾತ ಚಿತ್ರಪ್ರೇಮಿಗಳ ಹಾಗೂ ಭಾರತೀಯರ ಆಶಯವೂ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
