ರಾಮಾಯಣ ಬಳಿಕ ನಮ್ಮ ರಾಕಿಂಗ್ ಸ್ಟಾರ್ ಯಶ್ ನೆಕ್ಸ್ಟ್ ವೆಂಚರ್ ಯಾವುದು..? ಯಾವ ಡೈರೆಕ್ಟರ್ ಜೊತೆ ಕೈ ಜೋಡಿಸ್ತಾರೆ ರಾಕಿಭಾಯ್ ಅನ್ನೋ ಚರ್ಚೆಗಳು ಬಹಳ ಜೋರಾಗಿ ನಡೆಯುತ್ತಿವೆ. ಅದಕ್ಕೆ ಉತ್ತರ ಕೂಡ ಸಿಕ್ಕಿದ್ದು, ಬಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಆದಿತ್ಯ ಧಾರ್ ಅನ್ನೋ ಮುನ್ಸೂಚನೆ ಸಿಕ್ಕಿದೆ. ಇವರಿಬ್ಬರೂ ಒಂದಾದ್ರೆ ಬಾಕ್ಸ್ ಆಫೀಸ್‌ಗೆ ಸುನಾಮಿ, ಸುಂಟರಗಾಳಿ ಒಟ್ಟೊಟ್ಟಿಗೆ ಬಂದಪ್ಪಳಿಸೋದ್ರಲ್ಲಿ ಯಾವುದೇ ಡೌಟ್ ಇಲ್ಲ.
ಯಶ್‌ಗೆ ಜೈ ಎಂದ ಧುರಂಧರ್ ಡೈರೆಕ್ಟರ್.. ನೆಕ್ಸ್ಟ್ ಪ್ರಾಜೆಕ್ಟ್..?!
ರಾಮಾಯಣ ನಂತ್ರ ನಮ್ಮ ಯಶ್‌ಗೆ ಆದಿತ್ಯ ಧಾರ್ ಡೈರೆಕ್ಷನ್
ರಾಕಿಭಾಯ್ ಆಯ್ಕೆ KGF-3ನಾ ಅಥ್ವಾ ಬಾಲಿವುಡ್ ಡೈರೆಕ್ಟರ್?
ಟಾಕ್ಸಿಕ್ ನೋಡಿ ಫಿದಾ ಆದ ಸೆನ್ಸೇಷನಲ್ ನಿರ್ದೇಶಕ ಪೋಸ್ಟ್
ಧುರಂಧರ್-2.. ಈ ವರ್ಷ 1800ಕ್ಕೂ ಅಧಿಕ ಕೋಟಿ ಗಳಿಸಿದ ಬಾಲಿವುಡ್ ಮೂವಿ. ಧುರಂಧರ್ ರಿಲೀಸ್ ದಿನವೇ ನಮ್ಮ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಕೂಡ ತೆರೆಗೆ ಬರಬೇಕಿತ್ತು. ಆದ್ರೆ ಸಿನಿಮಾ ಇನ್ನೂ ಸಿದ್ಧವಾಗಿರದ ಹಿನ್ನೆಲೆ ರಿಲೀಸ್ ಪೋಸ್ಟ್‌ಪೋನ್ ಆಗಿತ್ತು. ಜನ ಎಲ್ಲಾ ಧುರಂಧರ್‌ಗೆ ಹೆದರಿ ರಿಲೀಸ್ ಮುಂದೂಡಿಕೆ ಮಾಡಿಕೊಂಡ್ರು ಅಂತೆಲ್ಲಾ ಮಾತಾಡಿದ್ರು. ಆದ್ರೆ ಯಶ್ ಅದಕ್ಕೆ ಆಪ್ ಕಿ ಅದಾಲತ್ ವೇದಿಕೆಯಲ್ಲಿ ತಕ್ಕ ಉತ್ತರ ನೀಡಿದ್ರು.
ಈಗ ಮ್ಯಾಟರ್ ಅದಲ್ಲ.. ಧುರಂಧರ್ ಸೀರೀಸ್ ಸಿನಿಮಾಗಳಿಂದ ಇಂಡಿಯಾದ ಸೆನ್ಸೇಷನಲ್ ಡೈರೆಕ್ಟರ್ ಅನ್ನೋ ಖ್ಯಾತಿ ಪಡೆದ ಬಾಲಿವುಡ್ ನಿರ್ದೇಶಕ ಆದಿತ್ಯ ಧಾರ್ ನಮ್ಮ ಯಶ್ ಕುರಿತು ಪೋಸ್ಟ್ ಹಾಕಿದ್ದಾರೆ. ಅದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಯಶ್ ಫೋಟೋ ಹಾಕಿ ಒಂದು ರೆಡ್ ಹಾರ್ಟ್ ಸಿಂಬಲ್ ಜೊತೆ ಬೈಸೆಪ್ ತೋರಿಸುವ ಎಮೋಜಿಯೊಂದಿಗೆ ಅದನ್ನ ರಾಕಿಂಗ್ ಸ್ಟಾರ್ ಯಶ್ ಹೆಸರು ಕೂಡ ಮೆನ್ಷನ್ ಮಾಡಿ ಇನ್ಸ್‌ಟಾ ಸ್ಟೋರಿ ಹಾಕಿದ್ದಾರೆ ಧುರಂಧರ್ ಡೈರೆಕ್ಟರ್.
ಇದರ ಅರ್ಥ ಅವರು ಟಾಕ್ಸಿಕ್ ಸಿನಿಮಾ ನೋಡಿ ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ.. ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಸ್ವ್ಯಾಗ್, ಆ್ಯಕ್ಟಿಂಗ್‌ಗೆ ಕ್ಲೀನ್ ಬೋಲ್ಡ್ ಕೂಡ ಆಗಿದ್ದಾರೆ. ಅದೇ ಕಾರಣದಿಂದ ಯಶ್ ಅವ್ರ ಆ ಹಾನೆಸ್ಟ್ ಎಫರ್ಟ್ ಹಾಗೂ ಪ್ರಯತ್ನಕ್ಕೆ ಒಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅದೂ ಇಷ್ಟು ಓಪನ್ ಆಗಿ ಇನ್ಸ್‌ಟಾ ಮೂಲಕ ಅನ್ನೋದು ಇಂಟರೆಸ್ಟಿಂಗ್. ಇದು ಅಷ್ಟೇ ಅಲ್ಲ ಗುರು.. ಯಶ್ ನೆಕ್ಸ್ಟ್ ಸಿನಿಮಾಗೆ ಆದಿತ್ಯ ಧಾರ್ ಅವ್ರೇ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಮಾತುಗಳು ಕೂಡ ಕೇಳಿಬರ್ತಿವೆ. ಹೌದು.. ರಾಮಾಯಣ ನಂತ್ರ ಯಶ್ ಕೆಜಿಎಫ್-3 ಅಥ್ವಾ ಆದಿತ್ಯ ಧಾರ್ ಚಿತ್ರ ಆರಿಸಿಕೊಳ್ಳಲಿದ್ದಾರೆ ಅನ್ನೋದು ಟಾಕ್. ಹಾಗೆ ಆದಲ್ಲಿ ಬಾಕ್ಸ್ ಆಫೀಸ್‌ಗೆ ಸುನಾಮಿ ಸುಂಟರಗಾಳಿ ಒಟ್ಟೊಟ್ಟಿಗೆ ಬಂದಪ್ಪಳಿಸುವುದರಲ್ಲಿ ಯಾವುದೇ ಸಂದೇಹ ಇಲ್ಲ.
