ಗ್ಲಾಮರ್ ಪ್ರಪಂಚದಲ್ಲಿ ಒಮ್ಮೆ ಮಿಂಚಿದ ಬಣ್ಣದ ಬೆಡಗಿಯರು ಆಮೇಲೆ ಏನಾದ್ರು? ಸಿನಿಮಾ ಆಫರ್ ತಗ್ಗಿದ ತಕ್ಷಣ ಮದುವೆ ಅಂತ ಸೈಲೆಂಟ್ ಆಗ್ಬಿಡ್ತಾರೆ ಅನ್ನೋದು ಜನರ ಕಲ್ಪನೆ. ಆದ್ರೆ, ಈ ಸೌತ್ ಇಂಡಿಯನ್ ಹೀರೋಯಿನ್ ಮಾಡಿದ್ದು ಮಾತ್ರ ಸಂಪೂರ್ಣ ಡಿಫರೆಂಟ್. ಕ್ಯಾಮೆರಾ ಮುಂದೆ ಕ್ಯೂಟ್ ಎಕ್ಸ್‌ಪ್ರೆಷನ್ ಕೊಡ್ತಿದ್ದ ಈ ನಟಿ, ಇವತ್ತು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸೋ ಧೀರ ವಕೀಲೆ. ಯಾರು ಆ ನಟಿ..? ಸಿನಿರಂಗದಿಂದ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಅವರ ಜರ್ನಿ ಹೇಗಿತ್ತು..? ಇಲ್ಲಿದೆ ನೋಡಿ ಒಂದು ಎಕ್ಸ್‌ಕ್ಲೂಸಿವ್ ರಿಪೋರ್ಟ್
ಒಮ್ಮೆ ಸೌತ್‌ನ ಗ್ಲಾಮರ್ ಗರ್ಲ್.. ಇಂದು ಸುಪ್ರೀಂ ಕೋರ್ಟ್ ಲಾಯರ್
ಸಿನಿಮಾ ಆಫರ್ ಕಡಿಮೆಯಾಯ್ತು.. ಕೆರಿಯರ್ ಬದಲಿಸಿಕೊಂಡ ನಟಿ!
ಸಿನಿಮಾ ರಂಗ ಅಂದ್ರೆನೇ ಅಲ್ಲಿ ದಿನಕ್ಕೊಬ್ಬರು ಹೊಸಬರು ಬರ್ತಾರೆ, ಮಿಂಚಿ ಮರೆಯಾಗ್ತಾರೆ. ಆದ್ರೆ ೨೦೧೨ರಲ್ಲಿ ತೆರೆಕಂಡ ‘ಈ ರೋಜುಲ್ಲೋ’ ಅನ್ನೋ ಯೂತ್‌ಫುಲ್ ತೆಲುಗು ಸಿನಿಮಾದ ಮೂಲಕ ಸೌತ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಟಿ ರೇಷ್ಮಾ ರಾಥೋಡ್, ತಮ್ಮ ಮೊದಲ ಚಿತ್ರದಲ್ಲೇ ಚುರುಕಾದ ಅಭಿನಯದಿಂದ ಯುವಕರ ನಿದ್ದೆಗೆಡಿಸಿದ್ದ ರೇಷ್ಮಾ, ರಾತ್ರೋರಾತ್ರಿ ಬ್ಲಾಕ್‌ಬಸ್ಟರ್ ಹೀರೋಯಿನ್ ಆಗಿ ಹೊರಹೊಮ್ಮಿದ್ರು. ವೆಂಕಟೇಶ್ ಅವರ ಬಾಡಿಗಾರ್ಡ್ ಚಿತ್ರದ ಸಣ್ಣ ಪಾತ್ರದ ಮೂಲಕ ಶುರುವಾದ ಇವರ ಕಲಾಪಯಣ, ‘ಈ ರೋಜುಲ್ಲೋ’ ಹಿಟ್ ಆಗ್ತಿದ್ದಂತೆ ಕಮರ್ಷಿಯಲ್ ಸಿನಿಮಾಗಳಿಗೆ ಸಾಲು ಸಾಲು ಬಾಗಿಲು ತೆರೆಯಿತು.
ಚಿತ್ರರಂಗದಲ್ಲಿ ಸುಮಾರು 5 ವರ್ಷಗಳ ಕಾಲ ಸಕ್ರಿಯರಾಗಿದ್ದ ರೇಷ್ಮಾ, ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿಕೊಂಡ್ರು. ‘ಜೈ ಶ್ರೀರಾಮ್’, ‘ಲವ್ ಸೈಕಲ್’, ಹಾಗೂ ಅತ್ಯಾಚಾರ ಸಂತ್ರಸ್ತೆಯ ಪಾತ್ರದಲ್ಲಿ ಗಂಭೀರ ಅಭಿನಯ ನೀಡಿದ ಪ್ರತಿಘಾತನಾ ಚಿತ್ರಗಳು ಇವರಿಗೆ ನಟಿಯಾಗಿ ಒಳ್ಳೆಯ ಹೆಸರು ತಂದುಕೊಟ್ಟವು. ೨೦೧೫ರಲ್ಲಿ ಮಲಯಾಳಂನ ಅಪ್ಪವುಮ್ ವೀಂಜುಮ್ ಹಾಗೂ ೨೦೧೭ರಲ್ಲಿ ತಮಿಳಿನ ಅಧಗಪ್ಪಟ್ಟತು ಮಗಜನಂಗಳೇ ಚಿತ್ರಗಳಲ್ಲಿ ಅಭಿನಯಿಸಿ, ಮೂರೂ ಸೌತ್ ಇಂಡಸ್ಟ್ರಿಗಳಲ್ಲಿ ೨೦೧೨ ರಿಂದ ೨೦೧೭ ರವರೆಗೆ ಒಟ್ಟು ೫ ವರ್ಷಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿದ್ರು.
ಆದ್ರೆ, ೨೦೧೭ರ ನಂತರ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದಾಗ ರೇಷ್ಮಾ ತಮ್ಮ ಕೆರಿಯರ್‌ಗೆ ಬಿಗ್ ಟ್ವಿಸ್ಟ್ ಕೊಟ್ರು. ಬಣ್ಣದ ಲೋಕದ ಗ್ಲಾಮರ್, ಲೈಮ್‌ಲೈಟ್ ಎಲ್ಲವನ್ನೂ ಬದಿಗೊತ್ತಿ, ವಾರಂಗಲ್‌ನ ಕಾಕತೀಯ ಯೂನಿವರ್ಸಿಟಿಯಲ್ಲಿ LL.B ಪದವಿ ಪೂರ್ಣಗೊಳಿಸಿದ್ರು. ತಾಯಿಯ ಹಾದಿಯಲ್ಲೇ ಕಾನೂನು ವೃತ್ತಿ ಆಯ್ದುಕೊಂಡ ರೇಷ್ಮಾ, ಇವತ್ತು ದೇಶದ ಅತ್ಯುನ್ನತ ನ್ಯಾಯಾಲಯವಾದ ನವದೆಹಲಿಯ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿ ಕಪ್ಪು ಕೋಟ್ ಧರಿಸಿ ವಾದ ಮಂಡಿಸುತ್ತಿದ್ದಾರೆ. ಸಿನಿಮಾದ ಬಣ್ಣದ ಲೋಕದಿಂದ ಕೋರ್ಟ್ ಹಾಲ್‌ನ ಕಠಿಣ ಸವಾಲುಗಳನ್ನು ಸ್ವೀಕರಿಸಿದ ರೇಷ್ಮಾ ರಾಥೋಡ್ ಜರ್ನಿ ಈಗ ಅನೇಕರಿಗೆ ಸ್ಫೂರ್ತಿಯಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
