‘ಮನದ ಕಡಲು’ ಸಿನಿಮಾ ನಿರ್ದೇಶನ ಮಾಡಿದ್ದು ಯೋಗರಾಜ್ ಭಟ್ ಮತ್ತು ಈ ಕೃಷ್ಣಪ್ಪ ನಿರ್ಮಾಣದ ಮಾಡಿರುವ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ನಟ ಯಶ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಯಾವ ಸಿನಿಮಾ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದ ನಟ ಯಶ್ ಇಂದು ‘ಮನದ ಕಡಲು’ ಸಿನಿಮಾ ಕಾರ್ಯಕ್ರಮಕ್ಕೆ ಬಂದಿರುವುದು ಬಲು ವಿಶೇಷ.
ವೀಕೆಂಡ್ ನೈಟ್ ಲುಲು ಮಾಲ್ ಆವರಣದ ಝಗಮಗಿಸುವ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ನಟ ಯಶ್ ಮಿಂಚು ಹರಿಸಿದ್ದಾರೆ. ಮನದ ಕಡಲು ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ಭಾಗಿಯಾದ ರಾಕಿಂಗ್ ಸ್ಟಾರ್ ನೋಡಲು ಅಪಾರ ಅಭಿಮಾನಿಗಳು ಸೇರಿದ್ದರು.
ರಾಕಿಂಗ್ ಸ್ಟಾರ್ ಯಶ್ ಅವರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇಷ್ಟು ಎತ್ತರಕ್ಕೆ ಬೆಳೆದರೂ ಅವರು ಮೊದಲು ಅವಕಾಶ ಕೊಟ್ಟ ನಿರ್ಮಾಪಕರನ್ನು ಎಂದಿಗೂ ಮರೆತಿಲ್ಲ. ‘ಮನದ ಕಡಲು’ ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಯಶ್ ಅವರು ಸಿನಿಮಾ ನಿರ್ಮಾಪಕರ ಬಗ್ಗೆ ಮಾತನಾಡಿದ್ದಾರೆ. ನನಗೆ ಮೊದಲು ಅವಕಾಶ ನೀಡಿದ್ದಕ್ಕೆ ಧನ್ಯವಾದ ಎಂದಿದ್ದಾರೆ.
ಹಿಟ್ ಸಿನಿಮಾ ಕೊಟ್ಟ ಜೋಡಿ ಜೊತೆ ಯಶ್ಗೆ ಒಳ್ಳೆಯ ಒಡನಾಟ ಇದೆ. ಯಶ್ ಅವರು ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ. ‘ಮೊಗ್ಗಿನ ಮನಸು’ ಸಿನಿಮಾಗೂ ಮೊದಲು ಯಶ್ ಅವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಆಗ ಅವರಿಗೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಎಲ್ಲರೂ ಆಫರ್ನೇನೋ ನೀಡುತ್ತಿದ್ದರು. ಆದರೆ, ಕಥೆ ಕೇಳಿದರೆ ‘ಅವಕಾಶ ಕೊಡುತ್ತಿರುವುದೇ ಹೆಚ್ಚು, ಕಥೆ ಬೇರೆ ಹೇಳಬೇಕಂತೆ.
‘ಮೊಗ್ಗಿನ ಮನಸು’ ಸಿನಿಮಾದಲ್ಲಿ ರಾಧಿಕಾ ಪಂಡಿತ್ ನಟಿಸಿದ್ದು ಯಶ್ಗೆ ಗೊತ್ತೇ ಇತ್ತು. ಆ ಸಮಯದಲ್ಲಿ ಅವರಿಗೆ ಯಶ್ ಆಲ್ ದಿ ಬೆಸ್ಟ್ ಹೇಳಿದ್ದರು. ‘ರಾಧಿಕಾ ಒಂದು ವಾರ ಶೂಟ್ ಮಾತ್ರ ಇದೆ ಎಂದಿದ್ದರು. ಆದರೆ, ಇಲ್ಲಿನೋಡಿದ್ರೆ ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಿದ್ದಾರೆ. ಯಾರೋ ಸುಮ್ಮನೆ ಆಟ ಆಡಿಸುತ್ತಿದ್ದಾರೆ ಎಂದು ಸುಮ್ಮನಾದೆ. ಆ ಬಳಿಕ ಮತ್ತೆ ಕರೆ ಬಂತು. ನಾನು ಹೋದೆ. ಹೀರೋಗೆ ಕಾಲು ಪೆಟ್ಟಾಗಿದ್ದರಿಂದ ಆ ಆಫರ್ ನಂಗೆ ಸಿಕ್ಕಿತು. ನಿರ್ದೇಶಕ ಶಶಾಂಕ್ ಕಥೆ ಹೇಳಿದರು, ಹಾಡುಗಳನ್ನು ಕೇಳಿಸಿದರು. ನಿರ್ಮಾಪಕ ಕೃಷ್ಣಪ್ಪ ನೀವು ಧಾರಾವಾಹಿಗಳಲ್ಲಿ ನಟಿಸೋ ಹುಡುಗ ಅಲ್ವ? ಒಳ್ಳೆದಾಗಲಿ ಎಂದು ಹಾರೈಸಿದರು.
ಯಶ್ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾಗಳನ್ನು ನೋಡದೆ ಇರುವಿಕೆಗೆ ಕಾರಣಗಳನ್ನು ಚರ್ಚಿಸಿ, ಉತ್ತಮ ಸಿನಿಮಾ ನಿರ್ಮಾಣದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಹೊಸಬರಿಗೆ ಅವಕಾಶ ನೀಡುವುದು ಮತ್ತು ಉದ್ಯಮದಲ್ಲಿ ಸ್ವಾಭಿಮಾನದಿಂದ ಕೆಲಸ ಮಾಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.
ಯಶ್ ಅವರ ಅಭಿಮಾನಿಗಳಿಗೆ ವಿಶೇಷ ಪ್ರೀತಿ ಇದೆ. ಈ ಬಗ್ಗೆ ಅವರು ಮಾತನಾಡಿದ್ದು, ‘ನಮ್ಮ ಅಭಿಮಾನಿಗಳ ಋಣ ಹೇಗೆ ತೀರಿಸಬೇಕೋ ಗೊತ್ತಾಗುತ್ತಿಲ್ಲ. ನಿಮ್ಮ ಧ್ವನಿ ನನಗೆ ದೊಡ್ಡಸ್ತಿಕೆ ತಂದುಕೊಡಲ್ಲ, ಜವಾಬ್ದಾರಿ ತಂದು ಕೊಡುತ್ತದೆ’ ಎಂದಿದ್ದಾರೆ.