ಬೇರ್ ಬಾಡಿಯಲ್ಲಿ ಯಶ್..ಖಾನ್ಸ್‌‌ ಮೀರಿಸೋ ಮೈಕಟ್ಟು..!!

ಅಬ್ಬಬ್ಬಾ.. ರಾಕಿಭಾಯ್ ಶರ್ಟ್‌ಲೆಸ್‌ ವಿಡಿಯೋ ನೋಡಿದ್ರಾ?

Untitled design (70)

ಸ್ವಂತ ಟ್ಯಾಲೆಂಟ್‌‌ನಿಂದ ಕೋಟೆ ಕಟ್ಟಿ ಮರೆಯುತ್ತಿರೋ ಸೆಲ್ಫ್ ಮೇಡ್ ಶಹಜಾದ್ ಅಂದ್ರೆ ಅದು ಒನ್ ಅಂಡ್ ಓನ್ಲಿ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಬಳಿಕ ಟಾಕ್ಸಿಕ್‌ಗೆ ಕೈ ಹಾಕಿರೋ ರಾಕಿಭಾಯ್, ಇದೀಗ ಬಾಲಿವುಡ್ ಖಾನ್ಸ್‌‌ ಕೂಡ ಹುಬ್ಬೇರಿಸೋ ರೇಂಜ್‌ಗೆ ಬಾಡಿ ಬಿಲ್ಡ್ ಮಾಡಿದ್ದಾರೆ. ಬೇರ್ ಬಾಡಿಯಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಡೋಕೆ ಸಜ್ಜಾಗಿದ್ದಾರೆ. ವಿಪರ್ಯಾಸ ಅಂದ್ರೆ ಆ ವಿಡಿಯೋ ಲೀಕ್ ಆಗಿ ಬಿಟ್ಟಿದೆ.

ಟಾಕ್ಸಿಕ್.. ಕೆಜಿಎಫ್ ಬಳಿಕ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಮಾಡ್ತಿರೋ ಮತ್ತೊಂದು ಮಹತ್ವದ ಸಿನಿಮಾ. ಹೌದು.. ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರೋ ಯಶ್, ಈ ಬಾರಿ ಹಾಲಿವುಡ್‌ಗೆ ಕಾಂಪೀಟ್ ಮಾಡುವಂತಹ ಪ್ರಾಜೆಕ್ಟ್ ಜೊತೆ ಬರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಗೋವಾ ಡ್ರಗ್ ಮಾಫಿಯಾ ಕುರಿತ ಬಿಗ್ ಸ್ಕೇಲ್ ಮೂವಿಯಲ್ಲಿ ಯಶ್ ಕಮಾಲ್ ಮಾಡಲಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಯಶ್ ಕೂಡ ನಿರ್ಮಾಣ ಮಾಡ್ತಿರೋ ಟಾಕ್ಸಿಕ್ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳ್ತಿದ್ದು, ಟೀಸರ್ ಮೇಕಿಂಗ್‌‌ಗೆ ಇಡೀ ಸಿನಿದುನಿಯಾ ಥಂಡಾ ಹೊಡೆದಿದೆ. ಇದೀಗ ಟಾಕ್ಸಿಕ್ ಚಿತ್ರದ ಸೀನ್ ಒಂದು ಲೀಕ್ ಆಗಿದ್ದು, ಯಶ್‌‌ ಬೇರ್ ಬಾಡಿಯಲ್ಲಿ ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದುತ್ತಿರೋ ದೃಶ್ಯ ನೋಡುಗರ ಕಣ್ಣು ಕುಕ್ಕುವಂತೆ ಮಾಡಿದೆ. ಯೆಸ್.. ಇದು ಟಾಕ್ಸಿಕ್ ಚಿತ್ರದ ಶೂಟಿಂಗ್ ವೇಳೆ ಯಾರೋ ಕಿಡಿಗೇಡಿಗಳು ಮೊಬೈಲ್‌‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾಗೆ ಸೋರಿಕೆ ಮಾಡಿದ್ದಾರೆ.

ಅಂದಹಾಗೆ ಯಶ್ ಬೇರ್ ಬಾಡಿ ನೋಡಿ ಚಿತ್ರಪ್ರೇಮಿಗಳು ಬಾಯ್ಮೇಲೆ ಬೆರಳಿಡುವಂತಾಗಿದೆ. ಹೆಣ್ಮಕ್ಕಳು, ಅದ್ರಲ್ಲೂ ಕಾಲೇಜ್ ಹುಡ್ಗಿಯರು ಓ ಮೈ ಗಾಡ್ ಅಂತ ಹುಬ್ಬೇರಿಸಿದ್ರೆ, ಬಾಲಿವುಡ್ ಮಂದಿ ಕೂಡ ವ್ಹಾವ್ ಅಂತ ಕಣ್ಣು, ಬಾಯಿ ಬಿಟ್ಕೊಂಡು ನೋಡುವಂತಾಗಿದೆ. ಅಂದಹಾಗೆ ಅಲ್ಲಿ ಬರೀ ಯಶ್ ಬೇರ್ ಬಾಡಿ ಹೈಲೈಟ್ ಆಗಿಲ್ಲ. ಸಿಗರೇಟ್ ಸೇದುವ ಸ್ವ್ಯಾಗ್ ಕೂಡ ನೆಕ್ಸ್ಟ್ ಲೆವೆಲ್‌ಗಿದೆ. ಹಾಗಂತ ನೋಡುಗರು ಸಿಗರೇಟ್‌ ಸೇದಬಾರದು. ಅದು ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ. ಕ್ಯಾನ್ಸರ್ ಸಂಭವಿಸಲಿದೆ.

ಇನ್ನು ಬಾಲಿವುಡ್‌‌ನ ಖಾನ್‌‌ಗಳು ಕೂಡ ಇಂಡಿಯನ್ ಸಿಇಓ ರಾಕಿಭಾಯ್‌ ಸಿಕ್ಸ್ ಪ್ಯಾಕ್ ಬಾಡಿ ನೋಡಿ ದಂಗಾಗಿದ್ದಾರಂತೆ. ಹೌದು.. ಶರ್ಟ್‌ಲೆಸ್‌‌ ಸೀನ್‌‌ಗಳನ್ನ ಮಾಡುವುದರಲ್ಲಿ ಸಲ್ಮಾನ್ ಖಾನ್ ಎತ್ತಿದ ಕೈ. ಶಾರೂಖ್ ಖಾನ್ ಹಾಗೂ ಆಮೀರ್ ಖಾನ್ ಕೂಡ ಸಾಕಷ್ಟು ಚಿತ್ರಗಳಲ್ಲಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. ಬೇರ್ ಬಾಡಿಯಲ್ಲಿ ತಮ್ಮ ಕಟ್ಟುಮಸ್ತಾದ ದೇಹವನ್ನು ಎಕ್ಸ್‌ಪೋಸ್ ಮಾಡಿದ್ದಾರೆ.

ಕನ್ನಡದ ಸಿನಿಮಾನ ಬಾಲಿವುಡ್ ಚಿತ್ರಗಳಿಗೆ ಕಾಂಪೀಟ್ ಮಾಡುವ ರೇಂಜ್‌ಗೆ ತೆಗೆದುಕೊಂಡು ಹೋಗಿದ್ದ ಯಶ್, ಅವರ ಸ್ವ್ಯಾಗ್‌ನ ರಣ್‌ವೀರ್ ಸಿಂಗ್ ಸೇರಿದಂತೆ ಬಾಲಿವುಡ್ ಸ್ಟಾರ್ಸ್‌ ಫಾಲೋ ಮಾಡುವಂತೆ ಮಾಡಿದ್ರು. ಇದೀಗ ಯಶ್ ರೀತಿ ಚಿತ್ರರಂಗದ ಇತರೇ ಸ್ಟಾರ್ಸ್‌ ಕೂಡ ಬೇರ್ ಬಾಡಿಯಲ್ಲಿ ಕಮಾಲ್ ಮಾಡೋಕೆ ಸ್ಫೂರ್ತಿ ಆಗಲಿದ್ದಾರೆ. ಸಿನಿಮಾಗಾಗಿ ನೆಕ್ಸ್ಟ್ ಲೆವೆಲ್ ಡೆಡಿಕೇಷನ್ ತೋರಿಸುವ ರಾಕಿಂಗ್ ಸ್ಟಾರ್ ಎಲ್ಲಾ ವಿಷಯದಲ್ಲಿ ರಾಕ್ ಮಾಡ್ತಾರೆ ಅನ್ನೋದನ್ನ ಇದೊಂದು ಲೀಕೇಜ್ ಆಗಿರೋ ದೃಶ್ಯ ಸಾಕ್ಷಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version