ಕನಸು ಕಾಣೋದು ಬೇರೆ. ಆ ಕನಸುಗಳ ಬೆನ್ನತ್ತಿ ಅವುಗಳನ್ನ ಸಾಕಾರಗೊಳಿಸೋದು ಬೇರೆ. ಸದ್ಯ ಯಶ್ ನುಡಿದಂತೆ ನಡೆದ ಛಲದಂಕಮಲ್ಲನಾಗಿ ರೋಲ್ ಮಾಡೆಲ್ ಅನಿಸಿದ್ದಾರೆ. ಅವರು ವೇದಿಕೆಗಳಲ್ಲಿ ಆಡಿದ್ದಂತಹ ಒಂದೊಂದು ಸ್ಟೇಟ್ಮೆಂಟ್ ಕೂಡ ಇಂದು ಮುಟ್ಟಿ ನೋಡಿಕೊಳ್ಳುವಂತಿವೆ. ಇದು ಸೆಲ್ಫ್ ಮೇಡ್ ಶಹಜಾದ ಯಶ್ ಸುವರ್ಣ ಯುಗ. ಬೆಳೆದರೆ ಯಶ್ ರೀತಿ ಬೆಳೆಯಬೇಕು. ಅವ್ರ ರೀತಿ ಎಕ್ಸಾಂಪಲ್ ಸೆಟ್ ಮಾಡ್ಬೇಕು. ಇದರ ಫುಲ್ ಡಿಟೇಲ್ಸ್ ಇಲ್ಲಿದೆ…
- ನುಡಿದಂತೆ ನಡೆಯುತ್ತಿರೋ ಗೇಮ್ ಚೇಂಜರ್ ಯಶ್
- ಕನ್ನಡ ಚಿತ್ರರಂಗದ ದಿಕ್ಕು, ದೆಸೆ ಬದಲಿಸಿದ ಮಾನ್‌ಸ್ಟರ್
- ಅಟೆನ್ಷನ್ ಪ್ಲೀಸ್.. ಈತ ನಮ್ಮ ಇಂಡಸ್ಟ್ರಿ ಮಾಸ್ಟರ್‌ಪೀಸ್
- ವಿಷನ್, ಪ್ಯಾಷನ್ ಜೊತೆ ಮುನ್ನುಗ್ಗೋ ಛಲದಂಕಮಲ್ಲ..!
ಉದ್ದೇಶಗಳು ಕರೆಕ್ಟ್ ಆಗಿದ್ದಾಗ ವಿಧಿ ಕೂಡ ಕೈ ಹಿಡಿದು ನಡೆಸುಬಿಡುತ್ತೆ. ಅದೃಷ್ಠ ಜೊತೆ ಪ್ರಯತ್ನ ಇದ್ರೆ ಸಾಲಲ್ಲ. ಆ ಪ್ರಯತ್ನ ಬಹಳ ಪ್ರಾಮಾಣಿಕವಾಗಿರಬೇಕಾಗುತ್ತೆ. ಬಹುಶಃ ನಮ್ಮ ಕನ್ನಡ ಚಿತ್ರರಂಗದ ಸದ್ಯದ ಕಾಲಘಟ್ಟದ ಹೀರೋಗಳಲ್ಲಿ ನಟ ಯಶ್‌ಗೆ ಇರೋ ದೂರದೃಷ್ಠಿ, ವಿಷನ್ ಹಾಗೂ ಪ್ಯಾಷನ್ ಬೇರೆ ಯಾರಲ್ಲೂ ಕಾಣ್ತಿಲ್ಲ. ಅದೇ ಕಾರಣದಿಂದ ಯಶ್ ಹಂತ ಹಂತವಾಗಿ ಮುಗಿಲೆತ್ತರಕ್ಕೆ ಬೆಳೆಯುತ್ತಾ ಹೋಗ್ತಿದ್ದಾರೆ.
ಕೆಲಸದ ಬಗ್ಗೆ ಅವರಿಗಿರೋ ಬದ್ಧತೆ, ಶ್ರದ್ಧೆ ಹಾಗೂ ಭಕ್ತಿ ಎಲ್ಲವೂ ಅವ್ರ ಸಕ್ಸಸ್‌ಗೆ ಪೂರಕವಾಗಿ ಸಾಥ್ ಕೊಡ್ತಿವೆ. ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಯಶ್ ಹಾಸನದಲ್ಲಿ 100 ಎಕರೆ ಜಮೀನು ಖರೀದಿಸಿದ್ದಾರೆ. ಬೆಂಗಳೂರು, ಮುಂಬೈ, ದುಬೈ, ಅಮೆರಿಕಾದಲ್ಲಿ ಮನೆಗಳನ್ನ ಮಾಡಿದ್ದಾರೆ. ದುಬಾರಿ ಕಾರ್‌ಗಳಿವೆ. ಇವೆಂಟ್‌ಗಳಲ್ಲಿ ಕೈಗಳಿಗೆ ಹುಬ್ಬೇರಿಸೋ ಕೋಟ್ಯಂತರ ರೂಪಾಯಿ ದುಬಾರಿ ವಾಚ್‌ಗಳನ್ನ ಧರಿಸುತ್ತಾರೆ. ಅವ್ರ ಒಂದೊಂದು ನಡೆ ಕೂಡ ಇಂಪ್ರೆಸ್ಸೀವ್, ಇಂಟರೆಸ್ಟಿಂಗ್.
ಹಾಗಂತ ಬರೀ ಕೆಲಸದ ಬಗ್ಗೆ ಮಾತ್ರ ಗಮನ ಹರಿಸೋ ವರ್ಕೋಹಾಲಿಕ್ ಅಲ್ಲ ಯಶ್. ಹಂಡ್ರೆಡ್ ಪರ್ಸೆಂಟ್ ಪಕ್ಕಾ ಫ್ಯಾಮಿಲಿಮ್ಯಾನ್ ಕೂಡ ಹೌದು. ಮಗ, ಮಗಳು ಹಾಗೂ ಪತ್ನಿ ಜೊತೆ ಹಬ್ಬ ಹರಿದಿನಗಳು, ಔಟಿಂಗ್, ಬರ್ತ್ ಡೇ ಪಾರ್ಟಿ.. ಹೀಗೆ ಸಾಕಷ್ಟು ಕೌಟುಂಬಿಕ ಕಾರ್ಯಗಳಲ್ಲೂ ಭಾಗಿಯಾಗ್ತಾರೆ. ಈ ರೀಲ್ ಹೀರೋ ತನ್ನ ರಿಯಲ್ ಲೈಫ್‌ನಲ್ಲಿ ಒಳ್ಳೆಯ ಗಂಡ, ಮಗ ಹಾಗೂ ತಂದೆಯ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಿದ್ದಾರೆ. ಸ್ನೇಹಿತರಿಗೂ ಸಮಯ ಕೊಡೋ ಯಶ್, ಅದೆಷ್ಟೋ ಮಂದಿ ಆಪ್ತಮಿತ್ರರ ಕಷ್ಟಗಳಿಗೆ ಕೈ ಜೋಡಿಸಿದ್ದಾರೆ.
ಈತ ಕನ್ನಡ ಚಿತ್ರರಂಗದ ಪಾಲಿಗೆ ಸಿಕ್ಕ ಸ್ವಾತಿಮುತ್ತು. ಆಲ್ ಟೈಂ ಮಾಸ್ಟರ್‌ಪೀಸ್ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ನಮ್ಮ ಮಾರುಕಟ್ಟೆ ಬಹಳ ಚಿಕ್ಕದು, ನಮ್ಮ ಚಿತ್ರಗಳು ಬೇರೆ ಕಡೆ ಓಡಲ್ಲ. ಹಾಗೆ ಹೀಗೆ ಅಂತ ಕೊಂಕು ಮಾತಾಡೋ ಸಮಯದಲ್ಲಿ ಆ ಬೌಂಡರಿಗಳನ್ನ ದಾಟಿ ದಾಖಲೆಗಳನ್ನ ನಿರ್ಮಿಸಬಹುದು ಅನ್ನೋದನ್ನ ಮೊದಲು ತೋರಿಸಿಕೊಟ್ಟವರು ನಮ್ಮ ಯಶ್.
ಒಮ್ಮೆ ಝೀ ಕನ್ನಡದ ವೇದಿಕೆಯಲ್ಲಿ ನಿಂತು ಅದನ್ನೇ ಹೇಳಿದ್ರು. ನಾನು ಹೇಳ್ತಿರೋ ಈ ಮಾತುಗಳು ನಾಲ್ಕೈದು ವರ್ಷಗಳ ನಂತ್ರ ಪ್ಲೇ ಆಗ್ಬೇಕು. ನನಗೆ ಈ ತರಹದ ಒಂದು ಕನಸು ಇತ್ತು ಅಂತ. ಯಾರೂ ಮಾಡದೇ ಇರೋದನ್ನ ನಾನೇನು ಮಾಡ್ತೀನಿ ಅಂತ ಹೇಳ್ತಿಲ್ಲ. ಆದ್ರೆ ಕಾಲ ಕಾಲಕ್ಕೆ ಯಾರೋ ಒಬ್ರು ಆ ಜವಾಬ್ದಾರಿ ಹೊರಬೇಕಾಗುತ್ತೆ. ಅದನ್ನ ಹೊರೋಕೆ ನಾನು ರೆಡಿಯಾಗಿ ನಿಂತಿದ್ದೀನಿ. ಶಕ್ರತಿ ನೀವು ತುಂಬಿ ಅಂತ ಕೇಳಿಕೊಂಡಿದ್ರು ಯಶ್. ಅದೀಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳಿಂದ ನಿಜವಾಗ್ತಿದೆ.
- ರಾಮಾಚಾರಿ ವೇಳೆ ಫಾರಿನ್‌ನಲ್ಲಿ ಡೆಡ್ಲೈನ್ ಫಿಕ್ಸ್ ಆಯ್ತು
- ಕನ್ನಡ ಸಿನಿಮಾ ಕಡಿಮೆ ಅಲ್ಲ.. ಯಶ್ ಕೊಟ್ಟಿದ್ರು ‘ಗ್ಯಾರಂಟಿ’
ಮಿಸ್ಟರ್ & ಮಿಸೆಸ್ ರಾಮಾಚಾರಿ ಹಾಗೂ ಮಾಸ್ಟರ್‌ಪೀಸ್ ಸಿನಿಮಾಗಳ ರಿಲೀಸ್ ವೇಳೆ ಫಾರಿನ್‌ನಲ್ಲಿ ಸ್ಪೆಷಲ್ ಪ್ರೀಮಿಯರ್ ಶೋ ನಡೆಸಿದ್ರು ಯಶ್. ಅಂದೇ ಅಲ್ಲಿರೋ ನಮ್ಮ ಕನ್ನಡದ ಆಡಿಯೆನ್ಸ್‌ಗೆ ಒಂದು ಮಾತು ಹೇಳಿದ್ರು. ನಮ್ಮ ಕನ್ನಡ ಚಿತ್ರಗಳು ಪರಭಾಷಿಗರಿಗೆ ಹೋಲಿಸಿದ್ರೆ ಕಡಿಮೆ, ಚಿಕ್ಕದು ಅನ್ನೋದನ್ನ ಮೊದಲು ನಿಮ್ಮ ತಲೆಯಿಂದ ತೆಗೆದುಬಿಡಿ. ಅದನ್ನ ಬಸಲಿಸೋಣ ಅಂದಿದ್ರು. ಅದಕ್ಕೆ ನಾನೇ ಗ್ಯಾರಂಟಿ ಕೊಡ್ತೀನಿ. ನಮ್ಮ ಕನ್ನಡ ಸಿನಿಮಾ ಯಾವುದೇ ಕಾರಣಕ್ಕೂ ಕಡಿಮೆ ಅಲ್ಲವೇ ಅಲ್ಲ ಅಂದಿದ್ರು ಯಶ್.
ಯಶ್ ಅಂದು ಆಡಿತೋ ಈ ಮಾತುಗಳನ್ನ ಕೇಳ್ತಿದ್ರೆ.. ಅರೇ ಹೌದಲ್ವಾ ಅವರು ಹೇಳಿದ್ರು ನಿಜ. ಕೊಟ್ಟ ಮಾತು ನಿಜವಾಗಿಸ್ತಿದ್ದಾರೆ ಅನಿಸದೇ ಇರಲ್ಲ.
- ಕಳ್ಳರ ಸಂತೆ ಚಿತ್ರಕ್ಕಾಗಿ ಆಟೋ ಡ್ರೈವರ್ ಆಗಿ ಪ್ರಮೋಷನ್
- ಇಂದು ಹಾಲಿವುಡ್ ವೇದಿಕೆ.. ಬಾಲಿವುಡ್ ಸ್ಟಾರ್ಸ್ ಸಾಥ್
ಕಿರುತೆರೆ ನಟನಾಗಿದ್ದ ಯಶ್ ಆ ನಂತ್ರ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ದಿನಗಳಲ್ಲಿ ಕಳ್ಳರಸಂತೆ ಸಿನಿಮಾ ಬಿಡುಗಡೆ ಆಗಿತ್ತು. ಅದ್ರ ಪ್ರಮೋಷನ್ಸ್‌ಗಾಗಿ ರಾಕಿಂಗ್ ಸ್ಟಾರ್, ಆಟೋ ಓಡಿಸಿ, ಆಟೋ ಡ್ರೈವರ್ ಆಗಿ ಕಾಣಿಸಿಕೊಂಡಿದ್ರು. ಆದ್ರೆ ಇಂದು ತಮ್ಮ ಸಿನಿಮಾಗಳನ್ನ ಹಾಲಿವುಡ್ ವೇದಿಕೆಗಳಲ್ಲಿ ಬಾಲಿವುಡ್ ಸ್ಟಾರ್ಸ್ ಜೊತೆ ಹೋಗಿ ಪ್ರಮೋಟ್ ಮಾಡ್ತಿದ್ದಾರೆ. ಇದಲ್ಲವೇ ಬೆಳವಣಿಗೆ..? ಇದಲ್ಲವೇ ಸ್ಫೂರ್ತಿ..?
ವೇದಿಕೆಗೆ ಯಶ್ ಬಂದ್ರೆ ಕಪೂರ್ ಫ್ಯಾಮಿಲಿಯ ಸೂಪರ್ ಸ್ಟಾರ್ ರಣ್‌ಬೀರ್ ಕಪೂರ್ ಕೂಡ ಎದ್ದು ನಿಲ್ಲುತ್ತಿದ್ದಾರೆ ಅಂದ್ರೆ ನಮ್ಮ ಕನ್ನಡಿಗನ ಗತ್ತು, ಗೈರತ್ತು ಎಂಥದ್ದು ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಯಶ್ ನಿಜಕ್ಕೂ ಗೇಮ್ ಚೇಂಜರ್. ಅಕ್ಷರಶಃ ಮಾನ್‌ಸ್ಟರ್ ಅನ್ನೋದು ಪದೇ ಪದೆ ಪ್ರೂವ್ ಆಗ್ತಿದೆ.
- ಬೆಂಗಳೂರಿನಲ್ಲಿ ನಡೆಯಲಿದೆ ಟಾಕ್ಸಿಕ್ ಟ್ರೈಲರ್ ಇವೆಂಟ್
- ಹಾಲಿವುಡ್, ಬಾಲಿವುಡ್ ಮಂದಿ ಕರುನಾಡಿನತ್ತ ಕಮಿಂಗ್
ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಸಿಲ್ವರ್ ಸ್ಕ್ರೀನ್‌ಗೆ ಲಗ್ಗೆ ಇಡೋಕೆ ಸಜ್ಜಾಗಿರೋ ಟಾಕ್ಸಿಕ್ ಸಿನಿಮಾ, ಅದಕ್ಕೂ ಮೊದಲು ಟ್ರೈಲರ್ ಲಾಂಚ್ ಇವೆಂಟ್‌ನಿಂದ ಗಮನ ಸೆಳೆಯಲಿದೆ. ಅಂದು ಯಶ್ ಹೇಳಿದಂತೆ ಹಾಲಿವುಡ್ ಟೆಕ್ನಿಷಿಯನ್ಸ್‌ನಿಂದ ಹಿಡಿದು, ಬಾಲಿವುಡ್ ಸ್ಟಾರ್‌ಗಳ ತನಕ ಎಲ್ಲರನ್ನ ನಮ್ಮ ಕನ್ನಡದ ಮಣ್ಣಿಗೆ ಕರೆಸಿ, ಇವೆಂಟ್ ಮಾಡಲಿದ್ದಾರೆ. ಇದು ನಿಜಕ್ಕೂ ಒಬ್ಬ ಕನ್ನಡಿಗನ ತಾಕತ್ತು. ಅಸಲಿ ಗತ್ತು.
ಟೀಸರ್ ಹಾಗೂ ಸಾಂಗ್ಸ್‌ನಂದ ಟಾಕ್ಸಿಕ್ ಕ್ರೇಜ್ ಎಲ್ಲೆಡೆ ಮುಗಿಲು ಮುಟ್ಟಿದೆ. ಸಿನಿಮಾ ಅದ್ರ ನೂರು ಪಟ್ಟು ಜೋರಿರಲಿದ್ದು, ಯಶ್ ನಮ್ಮ ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ಅಂಗಳದಲ್ಲಿ ಮಾನ್ಯತೆ ದೊರಕಿಸಿಕೊಡಲಿದ್ದಾರೆ. ಸೋ.. ಟಾಕ್ಸಿಕ್ ಹಾಗೂ ರಾಮಾಯಣ ಎರಡೂ ಚಿತ್ರಗಳು ಭಾರತೀಯ ಚಿತ್ರರಂಗದ ಗೇಮ್ ಚೇಂಜರ್ ಚಿತ್ರಗಳಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
