ಶಿಲ್ಪಾ ಗಣೇಶ್ ಕಾಮಿಡಿ ಟೈಂ.. ಪಿಕ್ಚರ್ ಗುಟ್ಟು ಟ್ರೈಲರ್‌‌ನಲ್ಲಿ ರಟ್ಟು

Untitled design (36)

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಗಾಯಕಿ ಆಗಿಯೂ ಕಮಾಲ್ ಮಾಡ್ತಿದ್ದಾರೆ. ಆಗಸ್ಟ್ 7ಕ್ಕೆ ತೆರೆಗಪ್ಪಳಿಸೋಕೆ ಸಜ್ಜಾಗಿರೋ ಈ ಪಿಕ್ಚರ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕಾಮಿಡಿ ಎಲಿಮೆಂಟ್ಸ್‌ನಿಂದ ದೊಡ್ಡ ಭರವಸೆ ಹುಟ್ಟಿಹಾಕಿದೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಏನು ಅದ್ರ ಹೈಲೈಟ್ಸ್ ಇಲ್ಲಿದೆ ನೋಡಿ.

ಇದು ಕನ್ನಡ ಹಾಗೂ ತುಳು ಭಾಷೆಯಲ್ಲಿ ತಯಾರಾಗಿರೋ ಪಿಕ್ಚರ್ ಚಿತ್ರದ ಟ್ರೈಲರ್ ಝಲಕ್. ಯೆಸ್.. ಸಾಂಗ್ಸ್‌ನಿಂದ ಎಲ್ಲರ ಗಮನ ಸೆಳೆದಿದ್ದ ಈ ಸಿನಿಮಾ, ಇದೀಗ ಟ್ರೈಲರ್‌ನಿಂದ ಭರವಸೆ ಮೂಡಿಸಿದೆ. ಹೊಡಿ, ಬಡಿ, ಕಡಿ ಚಿತ್ರಗಳ ನಡುವೆ ನೋಡುಗರ ಮನಸ್ಸುನ್ನು ಹಗುರಾಗಿಸೋ ಔಟ್ & ಔಟ್ ಕಾಮಿಡಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿದೆ. ಯೆಸ್.. ಸಿನಿಮಾ ಇದೇ ಆಗಸ್ಟ್ 7ಕ್ಕೆ ಥಿಯೇಟರ್‌ಗೆ ಕಾಲಿಡ್ತಿದ್ದು, ಟ್ರೈಲರ್‌ನಿಂದ ಕುತೂಹಲ ಹೆಚ್ಚಿಸಿದೆ.

ಗೋಲ್ಡನ್ ಮೂವೀಸ್ ಬ್ಯಾನರ್‌ನಡಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ ಈ ಸಿನಿಮಾಗೆ ಸಂದೀಪ್ ಬೆದ್ರ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸಿರೋ ಫ್ಯಾಮಿಲಿ ಕಮ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಮನರಂಜನೆಯೇ ಪ್ರಧಾನವಾಗಿದೆ. ಸಂತೋಷ್ ರೈ ಪಾತಾಜೆ ಹಾಗೂ ಚಂದ್ರಶೇಖರ್ ಕೆ. ಎಸ್ ಕ್ಯಾಮೆರಾ ವರ್ಕ್, ರಾಜು ಆರ್ಯನ್ ಎಡಿಟಿಂಗ್, ಧನಂಜಯ್. ಬಿ – ಶ್ರೀರಾಜು ಕೊರಿಯೋಗ್ರಫಿ, ರಾಧೇಶ್ – ಸಂತೋಷ್ ಪೂಜಾರಿ ಆರ್ಟ್ ಹಾಗೂ ಥ್ರಿಲ್ಲರ್ ಮಂಜು ಸ್ಟಂಟ್ಸ್ ಈ ಚಿತ್ರಕ್ಕಿದೆ.

ಮೋಹನ್ ಭಟ್ಕಳ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದು, ಸ್ಯಾಮುಯೆಲ್ ಅಭಿ ಸಂಗೀತ ನೀಡಿರೋ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ನಿರ್ಮಾಪಕಿ ಶಿಲ್ಪಾ ಗಣೇಶ್ ಗೋಕುಲದ ರಾಧೆ ಹಾಡನ್ನ ಹಾಡಿರೋದು ವಿಶೇಷ. ನಿತ್ಯಪ್ರಕಾಶ್ ಬಂಟ್ವಾಳಗೆ ಅಮೃತ ಸುದು ಜೋಡಿಯಾಗಿ ಬಣ್ಣ ಹಚ್ಚಿದ್ದು, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್,  ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಪೂಜಾರ್, ಜಯಶೀಲ ಮರೊಲಿ, ರೂಪ ವರ್ಕಾಡಿ ಮುಂತಾದ ಅತ್ಯದ್ಭುತ ತುಳು ಕಲಾವಿದರ ದಂಡು ಈ ಚಿತ್ರದಲ್ಲಿದೆ. ರಾಜ್ ಶೆಟ್ರ ಸು ಫ್ರಮ್ ಸೋ ಚಿತ್ರದ ರೀತಿ ಇದು ಕೂಡ ನೋಡುಗರ ದಿಲ್ ದೋಚಲಿದ್ದು, ಇದ್ರ ಗೆಲುವು ನಿರ್ಮಾಪಕಿ ಶಿಲ್ಪಾ ಗಣೇಶ್ ಸಿನಿಮೋತ್ಸಾಹ ಇಮ್ಮಡಿಗೊಳಿಸುವಂತಾಗಲಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version