ಟಾಕ್ಸಿಕ್, ರಾಮಾಯಣ ನಡುವೆ ಯಶ್ ಮಗಳ ಬರ್ತ್ ಡೇ..!

7ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಐರಾ ಯಶ್ ಫುಲ್ ಮಿಂಚು

1111

ಫ್ಯಾಮಿಲಿಮ್ಯಾನ್ ಸೀರೀಸ್‌‌ಗೆ ಮನೋಜ್ ಬಾಜ್ಪಾಯಿ ಹೀರೋ ಇರಬಹುದು. ಆದ್ರೆ ಹಂಡ್ರೆಡ್ ಪರ್ಸೆಂಟ್ ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ಮಿಂಚ್ತಿರೋದು ಮಾತ್ರ ರಾಕಿಂಗ್ ಸ್ಟಾರ್ ಯಶ್. ಯೆಸ್.. ಟಾಕ್ಸಿಕ್, ರಾಮಾಯಣದಂತಹ ಬಿಗ್ಗೆಸ್ಟ್ ಸಿನಿಮಾಗಳ ಕೆಲಸ, ಕಾರ್ಯಗಳ ನಡುವೆ ಮಗಳ ಬರ್ತ್ ಡೇನ ಬಹಳ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ರಾಕಿಭಾಯ್ ಯಶ್.. ಇಂಡಿಯಾದ ಯಂಗೆಸ್ಟ್ ಸೂಪರ್ ಸ್ಟಾರ್. ಅಟ್ ದಿ ಸೇಮ್ ಟೈಂ ಪಕ್ಕಾ ಫ್ಯಾಮಿಲಿಮ್ಯಾನ್. ಸಿನಿಮಾಗಾಗಿ ಮಹತ್ವದ ರೂಪರೇಷೆಗಳನ್ನ ಸಿದ್ದಗೊಳಿಸೋ ಯಶ್ ಸಕ್ಸಸ್ ರೇಟ್ 100 ಪರ್ಸೆಂಟ್ ಹೇಗಿದೆಯೋ, ವೈಯಕ್ತಿಕ ಜೀವನ ಕೂಡ ಅವರದ್ದು ಅಷ್ಟೇ ಸುಂದರವಾಗಿದೆ. ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗೆ ಯಥರ್ವ್ ಹಾಗೂ ಐರಾ ಅನ್ನೋ ಗಂಡು-ಹೆಣ್ಣು ಮಕ್ಕಳಿದ್ದಾರೆ.

ಹಬ್ಬ ಹರಿದಿನಗಳ ವೇಳೆ ಅವರುಗಳೊಂದಿಗೆ ಯಶ್ ಸಮಯ ಕಳೆಯುತ್ತಾರೆ. ಪತ್ನಿ, ಮಕ್ಕಳ ಸಮೇತ ಟೂರ್‌‌‌ ಮಾಡ್ತಿರ್ತಾರೆ. ಅಷ್ಟೇ ಯಾಕೆ ಅವರುಗಳ ಬರ್ತ್ ಡೇಗಳನ್ನ ಚಾಚೂ ತಪ್ಪದೆ ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಾರೆ. ಇತ್ತೀಚೆಗೆ ಮಗನ ಬರ್ತ್ ಡೇ ಆಚರಿಸಿದ್ದ ಯಶ್-ರಾಧಿಕಾ ಪಂಡಿತ್ ಜೋಡಿ, ಇದೀಗ ಮಗಳು ಐರಾ ಯಶ್‌ರ 7ನೇ ಬರ್ತ್ ಡೇನ ಬಹಳ ಅವಿಸ್ಮರಣೀಯವಾಗಿ ಸೆಲೆಬ್ರೇಟ್ ಮಾಡಿದ್ದಾರೆ.

ಮಕ್ಕಳಿಗೆ ಪ್ರತಿ ವರ್ಷ ಒಂದೊಂದು ಥೀಮ್‌‌ನಲ್ಲಿ ಹುಟ್ಟು ಹಬ್ಬವನ್ನು ಆಚರಿಸೋ ಯಶ್ ಈ ವರ್ಷ ಐರಾಗೆ ಡಿಫರೆಂಟ್ ಥೀಮ್‌ನೊಂದಿಗೆ ಸೆಲೆಬ್ರೇಟ್ ಮಾಡಿರೋದು ಇಂಟರೆಸ್ಟಿಂಗ್. ಅಲ್ಲಿ ಐರಾ ಫ್ರೆಂಡ್ಸ್ ಹಾಗೂ ಅವರ ಪೇರೆಂಟ್ಸ್ ಜೊತೆಗೆ ಯಶ್-ರಾಧಿಕಾ ಪಂಡಿತ್‌ರ ಗೆಳೆಯರು, ಹಿತೈಷಿಗಳು, ಅತ್ಯಾಪ್ತರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಅದ್ರ ವಿಡಿಯೋನ ಸ್ವತಃ ರಾಧಿಕಾ ಪಂಡಿತ್ ಅವರೇ ಇನ್ಸ್‌ಟಾ ಪೇಜ್‌‌ನಲ್ಲಿ ಹಂಚಿಕೊಂಡಿದ್ದಾರೆ.

ಅಚ್ಚರಿ ಏನಪ್ಪಾಂದ್ರೆ ಆ ವಿಡಿಯೋದಲ್ಲಿ ಯಶ್ ಅವರ ತಂದೆ-ತಾಯಿಯೇ ಇಲ್ಲ. ಕೆಲಸದ ಒತ್ತಡಗಳಿಂದ ಬರಲಿಲ್ಲವೋ ಏನೋ ಗೊತ್ತಿಲ್ಲ. ಆದ್ರೆ ಎಲ್ಲೆಡೆ ಪುಷ್ಪ ಫೈಯರ್ ಬ್ರ್ಯಾಂಡ್ ರೀತಿ ಮಿಂಚು ಹರಿಸುತ್ತಿದ್ದಾರೆ. ಹೀಗಿರುವಾಗ ಪುಷ್ಪ ಇಲ್ಲದೆ ಮೊಮ್ಮಗಳು ಐರಾ ಯಶ್ ಜನುಮ ದಿನದ ಸಂಭ್ರಮಾಚರಣೆ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಅದೇನೇ ಇರಲಿ, ಸೂಪರ್ ಸ್ಟಾರ್‌ಗಳು ಕೆಲಸದ ಒತ್ತಡಗಳಲ್ಲಿ ಮಕ್ಕಳ ಕಡೆ ಗಮನ ಹರಿಸಲ್ಲ. ಆದ್ರೆ ಯಶ್ ಅದಕ್ಕೆ ತದ್ವಿರುದ್ದ. ಫ್ಯಾಮಿಲಿ ಫಸ್ಟ್.. ಉಳಿದಿದ್ದೆಲ್ಲಾ ನೆಕ್ಸ್ಟ್ ಅಂತ ಫ್ಯಾಮಿಲಿಮ್ಯಾನ್‌ ಆಗಿ ಈ ತರಹದ ಬ್ಯೂಟಿಫುಲ್ ವಿಡಿಯೋಗಳಿಂದ ಮಾದರಿ ಅನಿಸಿಕೊಳ್ತಾರೆ.

ರಾಮಾಯಣ ಹಾಗೂ ಟಾಕ್ಸಿಕ್‌‌ನಂತಹ ಪ್ಯಾನ್ ವರ್ಲ್ಡ್‌ ಸಿನಿಮಾಗಳ ಶೂಟಿಂಗ್, ಡಬ್ಬಿಂಗ್, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳ ನಡುವೆ ಕುಟುಂಬಕ್ಕೂ ಸಮಯ ಕೊಡುವ ಯಶ್‌‌ ನಿಜಕ್ಕೂ ಮಿಸ್ಟರ್ ಪರ್ಫೆಕ್ಟ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version