ಬರ್ತಿದ್ದಾಳೆ ಜೈ ಲಲಿತಾ.. ನಿಮ್ಮ ಸ್ಟಾರ್ ಸುವರ್ಣದಲ್ಲಿ ಇದೇ ಸೋಮವಾರದಿಂದ ರಾತ್ರಿ 9.30 ಕ್ಕೆ..!

Untitled design 2025 12 06T160348.715

ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿ ಪ್ರಸ್ತುತಪಡಿಸುತ್ತಿರುವ ಹೊಸ ಧಾರಾವಾಹಿ “ಜೈ ಲಲಿತಾ” ಇದೇ ಸೋಮವಾರ (ಡಿಸೆಂಬರ್ 8) ರಿಂದ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ವಿಭಿನ್ನ ಕಥೆ ಜನರ ಮನಸ್ಸನ ಗೆಲ್ಲುವ ಪಾತ್ರಗಳೊಂದಿಗೆ ಬರಲಿದೆ ಈ ಸೀರಿಯಲ್.

ಭೈರವಪುರ ಹಳ್ಳಿಯ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆಯುವ ಲಲಿತಾ ಒಬ್ಬ ಸರಳ, ಮುಗ್ದ ಹುಡುಗಿ. ಬಿ.ಎ. ಪಾಸಾಗಿ ಉದ್ಯೋಗ ಸಿಕ್ಕರೆ ಸಾಕು, ಒಳ್ಳೆಯ ಮದುವೆ ಆದರೆ ಸಾಕು ಅನ್ನುವುದು ಇವಳ ಸಾಮಾನ್ಯ ಕನಸು. ಆದರೆ, ಇವಳು ರಾಕಿಂಗ್ ಸ್ಟಾರ್ ಯಶ್ ಅವರ ಉಗ್ರ ಅಭಿಮಾನಿ! ಸಿನಿಮಾ ಎಂದರೆ ಇವಳಿಗೆ ಪಂಚಪ್ರಾಣ. ಊರಿನ ಎಲ್ಲರಿಗೂ ಇವಳು ಮುದ್ದಿನ ಮಗಳು.

ಅದೇ ಊರಿನ ಪ್ರಭಾವಿ ರಾಜಕಾರಣಿ ದೇವರಾಜ್ ಚಕ್ರವರ್ತಿ . ಅವರ ಎರಡನೇ ಮಗ ಜೈರಾಜ್ (ಶಿವಾಂಕ್). ತಂದೆಯ ಹಠಕ್ಕೆ ಎಂದೂ ಬಗ್ಗದ, ಸ್ವತಂತ್ರ ಮನಸ್ಸಿನ ಯುವಕ. ಆಕಸ್ಮಿಕವಾಗಿ ಪಂಚಾಯತ್ ಚುನಾವಣೆಗೆ ದಾಖಲಾಗಿ, ಊರಿನವರ ಪ್ರೀತಿ-ವಿಶ್ವಾಸ ಗೆದ್ದು ಲಲಿತಾ ಅಧ್ಯಕ್ಷೆಯಾಗ್ತಾಳೆ.

ದೇವರಾಜ್ ತನ್ನ ರಾಜಕೀಯ ಉದ್ದೇಶಕ್ಕಾಗಿ ಒಂದು ಮೋಸದ ಯೋಜನೆ ರೂಪಿಸಿ, ಲಲಿತಾಳನ್ನು ತನ್ನ ಮನೆತನದ ಸೊಸೆಯಾಗಿ ಮಾಡಿಕೊಳ್ಳುತ್ತಾರೆ. ಈ ಮದುವೆ ಜೈರಾಜ್ಗೆ ಇಷ್ಟವಿಲ್ಲ ಎಂಬ ಸತ್ಯ ಅವಳಿಗೇ ತಿಳಿಯದು. ಮದುವೆ ಬಗ್ಗೆ ದೊಡ್ಡ ಕನಸು ಕಂಡಿದ್ದ ಲಲಿತಾ, ಅತ್ತೆ-ಮಾವಂದಿರ ಹಠ ಮತ್ತು ಗಂಡನ ನಡುವೆ ಸಿಕ್ಕಿಹಾಕಿಕೊಳ್ಳುತ್ತಾಳೆ.

ಈ ಮೋಸದ ಮದುವೆಯ ಸತ್ಯ ಲಲಿತಾ ಎದುರಿಗೆ ಬರಬಹುದೆ ? ಮುದ್ದು ಬಜಾರಿಯಿಂದ ಬಂದ ಲಲಿತಾ, ಚಕ್ರವರ್ತಿಯ ಮನೆತನದ ಕಟ್ಟುಪಾಡುಗಳನ್ನು ಎದುರಿಸಿ, ಅತ್ತೆಯ ಮನಸ್ಸನ್ನು ಗೆದ್ದು ನಿಜವಾದ ಸ್ಥಾನವನ್ನು ಪಡೆಯಬಹುದೆ ? ಅವಳ ಮುಗ್ಧತೆ ಮತ್ತು ಧೈರ್ಯಕ್ಕೆ ಜೈರಾಜ್  ಮನಸೋಲುತ್ತಾನಾ..? ಎಂಬುದನ್ನ ಕಥೆಯಲ್ಲಿ ನೋಡಬೇಕಿದೆ. 

ಶ್ರೀನಿಧಿ ಡಿ.ಎಸ್. ಅವರ ‘ಶ್ರೀ ಭ್ರಾಮರೀ ಕ್ರಿಯೇಶನ್ಸ್’ ನಿರ್ಮಾಣದ ಈ ಧಾರಾವಾಹಿಯನ್ನು ದರ್ಶಿತ್ ನಿರ್ದೇಶಿಸುತ್ತಿದ್ದಾರೆ. ನಾಯಕ-ನಾಯಕಿಯರೊಂದಿಗೆ, ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ, ರಶ್ಮಿತಾ, ಶ್ವೇತಾ ರಾವ್ ಮುಂತಾದ ಅನುಭವಿ ಕಲಾವಿದರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗ್ರಾಮೀಣ ಹಿನ್ನೆಲೆ, ರಾಜಕೀಯ ತಂತ್ರಗಳನ್ನ ಹೊಂದಿರುವ ಈ ಧಾರಾವಾಹಿ, ಕನ್ನಡಿಗರಿಗ ಮನಸ್ಸು ಗೆಲ್ಲೋ ನಿರೀಕ್ಷೆ ಇದೆ. ಪೂರ್ಣ ಕಥೆ ತಿಳಿಯಲು ಇದೇ ಸೋಮವಾರದಿಂದ ಪ್ರತಿ ರಾತ್ರಿ 9.30ಕ್ಕೆ, ಸ್ಟಾರ್ ಸುವರ್ಣ ವೀಕ್ಷಿಸಿ.

Exit mobile version