ವಾರ್-2 ಸಿನಿಮಾದಲ್ಲಿ ಹೃತಿಕ್-ತಾರಕ್ ನಡುವೆ ವಾರ್ ನಡೆದ್ರೂ ಸಹ, ಅದರ ರಿಲೀಸ್‌ನಿಂದಾಗಿ ಬಾಕ್ಸ್ ಆಫೀಸ್ ವಾರ್ ನಡೆಯಲಿದೆ. ಯೆಸ್.. ತಲೈವಾ ರಜನೀಕಾಂತ್‌ರ ಕೂಲಿ ಎದುರು ಬರ್ತಿರೋ ವಾರ್-2ನಿಂದಾಗಿ ಥಿಯೇಟರ್ ಕ್ಲ್ಯಾಶ್ ಆಗಲಿದೆ. ಈ ಕುರಿತ ಕಂಪ್ಲೀಟ್ ಕಹಾನಿ ಇಲ್ಲಿದೆ.
- 6500 ಸ್ಕ್ರೀನ್ಸ್‌ಗೆ ವಾರ್.. ಹೃತಿಕ್-ತಾರಕ್ ನ್ಯೂ ರೆಕಾರ್ಡ್
- ತಲೈವಾ ಕೂಲಿ ವರ್ಸಸ್ ವಾರ್ ಬಾಕ್ಸ್ ಆಫೀಸ್ ದಂಗಲ್
- ಒಂದು ಲೋಕಲ್.. ಮತ್ತೊಂದು ಇಂಟರ್ನ್ಯಾಷನಲ್ ಕಥೆ
- 90Cr ದಾಖಲೆ ಮೊತ್ತಕ್ಕೆ ವಾರ್ ಆಂಧ್ರ ಡಿಸ್ಟ್ರಿಬ್ಯೂಷನ್ ರೈಟ್ಸ್
ಒಂದ್ಕಡೆ ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್ ಚಿತ್ರ ವಾರ್-2. ಮತ್ತೊಂದ್ಕಡೆ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಕೂಲಿ. ಇವೆರಡೂ ಸಹ ಇದೇ ಆಗಸ್ಟ್ 14ರಂದು ಪ್ರೇಕ್ಷಕರ ಮುಂದೆ ಬರ್ತಿದ್ದು, ಬಾಕ್ಸ್ ಆಫೀಸ್ ಕಾಳಗಕ್ಕೆ ಸಜ್ಜಾಗ್ತಿವೆ. ಬಿಗ್ ಸ್ಟಾರ್‌ಗಳ ಬಿಗ್ ಮೂವೀಸ್ ಹೀಗೆ ಒಂದೇ ದಿನ ರಿಲೀಸ್ ಆಗೋದ್ರಿಂದ ಅದು ಕಲೆಕ್ಷನ್ ಮೇಲೆ ನೇರವಾಗಿ ಪರಿಣಾಮ ಬೀರಲಿದೆ.
ಅಂದಹಾಗೆ ಜೂನಿಯರ್ ಎನ್‌ಟಿಆರ್ ಹಾಗೂ ಹೃತಿಕ್ ರೋಷನ್ ನಟನೆಯ ವಾರ್-2 ಸಿನಿಮಾ ವಾರ್ ಸೀಕ್ವೆಲ್ ಆಗಿದ್ದು, ಪೇಟ್ರಿಯಾಟಿಕ್ ಎಲಿಮೆಂಟ್ಸ್ ಜೊತೆ ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನ ಹೊಂದಿರಲಿದೆ. ಟೀಸರ್ ಜೊತೆ ಟ್ರೈಲರ್ ಹಾಗೂ ಕಿಯಾರಾ-ಹೃತಿಕ್ ನಡುವಿನ ಹಾಟ್ ಸಾಂಗ್‌ನಿಂದ ಸಿನಿಮಾ ಅತೀವ ನಿರೀಕ್ಷೆ ಮೂಡಿಸಿದೆ. ಸಿನಿಮಾನ ಬರೀ ಭಾರತ ಒಂದರಲ್ಲೇ 6500ಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ರಿಲೀಸ್ ಮಾಡೋಕೆ ಸಜ್ಜಾಗಿದ್ದಾರೆ ನಿರ್ಮಾಪಕರು.
ಜೂನಿಯರ್ ಎನ್‌ಟಿಆರ್‌ಗೆ ಆಂಧ್ರದಲ್ಲಿ ಹೆವಿ ಫ್ಯಾನ್ ಫಾಲೋಯಿಂಗ್ ಇರೋದ್ರಿಂದ ಸಿತಾರಾ ಎಂಟರ್‌ಟೈನ್ಮೆಂಟ್ಸ್ ಬ್ಯಾನರ್ ಸುಮಾರು 90 ಕೋಟಿ ದಾಖಲೆ ಮೊತ್ತಕ್ಕೆ ಡಿಸ್ಟ್ರಿಬ್ಯೂಷನ್ ರೈಟ್ಸ್ ತನ್ನದಾಗಿಸಿಕೊಂಡಿದೆ. ತ್ರಿಬಲ್ ಆರ್ ಸಿನಿಮಾದಿಂದ ತಾರಕ್‌ಗೆ ಗ್ಲೋಬಲ್ ಆಡಿಯೆನ್ಸ್ ಇದ್ದು, ಗ್ರೀಕ್ ಗಾಡ್ ಹೃತಿಕ್ ಕೂಡ ಚಿತ್ರದ ಭಾಗವಾಗಿರೋದ್ರಿಂದ ವಾರ್-2 ಗಲ್ಲಾ ಪೆಟ್ಟಿಗೆಯಲ್ಲಿ ಕನಿಷ್ಟ ಸಾವಿರ ಕೋಟಿ ಗಳಿಸೋ ಸೂಚನೆ ಇದೆ.
ಇನ್ನು ವರ್ಲ್ಡ್‌ವೈಡ್ ಸುಮಾರು 700ಕ್ಕೂ ಅಧಿಕ ಸ್ಕ್ರೀನ್ಸ್‌ನಲ್ಲಿ ಕೂಲಿ ಸಿನಿಮಾನ ರಿಲೀಸ್ ಮಾಡೋಕೆ ಸಜ್ಜಾಗಿರೋ ಸನ್ ಪಿಕ್ಚರ್ಸ್ ಬ್ಯಾನರ್, ಟ್ರೈಲರ್‌ನಿಂದ ಕೂಲಿ ಪವರ್ ತೋರಿಸಿದೆ. ರಜನೀಕಾಂತ್ ಜೊತೆ ಆಮೀರ್ ಖಾನ್, ಉಪೇಂದ್ರ ಹಾಗೂ ನಾಗಾರ್ಜುನ್‌ರಂತಹ ಘಟಾನುಘಟಿ ಕಲಾವಿದರಿರೋ ಮಲ್ಟಿಸ್ಟಾರರ್ ಕೂಲಿ, ಲೋಕಲ್ ಫ್ಲೇವರ್‌ನಲ್ಲಿ ಕೂಲಿಗಳಿಗೆ ಕನೆಕ್ಟ್ ಆಗಲಿದೆ.
ಲೋಕೇಶ್ ಕನಕರಾಜ್ ಮೇಕಿಂಗ್ ಹಾಗೂ ಕಥೆ ಮೇಲೆ ಪ್ರೇಕ್ಷಕರಿಗೆ ಭರವಸೆ ಇದೆ. ಆದ್ರೆ ಈ ಬಾರಿ ಕೂಲಿ ಟ್ರೈಲರ್ ಕೊಂಚ ಸಪ್ಪೆ ಅನಿಸಿದೆ. ಅನಿರುದ್ದ್ ಬ್ಯಾಗ್ರೌಂಡ್ ಮ್ಯೂಸಿಕ್ ಮಜಾ ಕೊಡ್ತಿಲ್ಲ. ಜೊತೆಗೆ ಟ್ರೈಲರ್ ಕಟ್ ಕೂಡ ಅಷ್ಟು ಇಂಪ್ರೆಸ್ಸೀವ್ ಆಗಿಲ್ಲ. ಆದ್ರೆ ಬಹುಭಾಷಾ ಸೂಪರ್ ಸ್ಟಾರ್‌ಗಳ ಸಮಾಗಮದಿಂದ ಟಾಕ್ ಅಫ್ ದಿ ಟೌನ್ ಆಗಿದೆ. ತಲೈವಾ ರಜನಿಯ ವರ್ಚಸ್ಸಿನಿಂದಲೇ ನೂರಾರು ಕೋಟಿ ಗಳಿಸೋದ್ರಲ್ಲಿ ಡೌಟೇ ಇಲ್ಲ. ಸೋ.. ಬಾಕ್ಸ್ ಆಫೀಸ್ ಅಸಲಿ ವಾರ್ ಆಗಸ್ಟ್ 14ಕ್ಕೆ ಶುರುವಾಗಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್