31 DAYS ಸಿನಿಮಾ.. ಯುವ ಮನಸ್ಸುಗಳ ಪ್ರೇಮಕಥೆ

1 (6)

ಲವ್ ಸ್ಟೋರಿ ಹೊಂದಿರುವ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿವೆ. ಸದ್ಯ ಈ ಟ್ರೆಂಡಿಂಗ್ ಲಿಸ್ಟ್ ಸೇರೋಕೆ 31 Days ಸಿನಿಮಾ ಸಜ್ಜಾಗಿದೆ. 31 ದಿನಗಳಲ್ಲಿ ನಡೆಯುವ ಹೈ ವೋಲ್ಟೇಜ್‌ ಲವ್‌ ಸ್ಟೋರಿಯಲ್ಲಿ ನಿರಂಜನ್ ಶೆಟ್ಟಿ ನಾಯಕನಾಗಿ ಅಭಿನಯಿಸಿದ್ದಾರೆ.

ಪ್ರಸ್ತುತ ಜನರೇಷನ್ ನಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಥೆ 31 days ಸಿನಿಮಾ. “ಜಾಲಿಡೇಸ್” ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ಹಾಗೂ  ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ 31 DAYS ರಿಲೀಸ್ ಗೆ ರೆಡಿಯಾಗಿದೆ.

ಈಗಾಗಲೇ ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಜನರ ಮನಸಿಗೆ ಹತ್ತಿರವಾಗಿರುವ ಈ ಚಿತ್ರದ ಟೀಸರ್ ಹಾಗೂ ಬಿಡುಗಡೆ ದಿನಾಂಕವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅನಾವರಣ ಮಾಡಿದರು.

ಟೀಸರ್ ನೋಡಿ ಸಂತೋಷ್ ಎಸ್ ಲಾಡ್ ತಂಡಕ್ಕೆ ಶುಭ ಹಾರೈಸಿದ್ರು. ಇನ್ನು ನಿರಂಜನ್ ನಟಿಸಿರುವ 8 ನೇ ಚಿತ್ರ ಹಾಗೂ ವಿ. ಮನೋಹರ್ ಸಂಗೀತ ನೀಡಿರುವ 150ನೇ ಚಿತ್ರಾಕ್ಕೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. N ಸ್ಟಾರ್ ಬ್ಯಾನರ್ ನಲ್ಲಿ ನಾಗವೇಣಿ ನಿರ್ಮಾಣದ ಸಿನಿಮಾಗೆ ರಾಜ ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಿನಿಮಾ ಗೆ ವಿನುತ್. ಕೆ ಛಾಯಾಗ್ರಹಣ ಧನು ಕುಮಾರ್, ತ್ರಿಭುವನ್, ನೃತ್ಯ, ಸನತ್, ರವಿತೇಜ್ , ನಿಶ್ಚಿತ್    ಪೂಜಾರಿ  ರವರ ಸಂಕಲನ, ಲಕ್ಕಿ ನಾಗೇಶ್ ನಿರ್ವಹಣೆ ಇದೆ. ಒಟ್ಟು 11ಹಾಡುಗಳು ಇದ್ದು ವಿ ಮನೋಹರ್ ಸಂಗೀತ ಸಂಯೋಜಸಿದ್ದಾರೆ. ಅಂದಹಾಗೆ ಸೆಪ್ಟೆಂಬರ್ 05 ರಂದು ಬೆಂಗಳೂರಿನ  ಕೆಜಿ ರಸ್ತೆಯ ಸ್ವಪ್ನ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ  100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version