ತ್ರಿಬಲ್ ಆರ್ ಸಿನಿಮಾದಲ್ಲಿ ಚರಣ್-ತಾರಕ್ ಬಡಿದಾಟಕ್ಕಿಂತ ಜೋರಿದೆ ವಾರ್-2 ಟ್ರೈಲರ್. ಯೆಸ್.. ಜೂನಿಯರ್ ಎನ್‌ಟಿಆರ್ ಚೊಚ್ಚಲ ಬಾಲಿವುಡ್ ಸಿನಿಮಾದ ಟ್ರೈಲರ್ ನೋಡುಗರನ್ನ ನಿಬ್ಬೆರಗಾಗಿಸಿದೆ. 400 ಕೋಟಿ ಬಜೆಟ್‌ನಲ್ಲಿ ತಯಾರಾಗಿರೋ ವಾರ್-2 ಪ್ರೇಕ್ಷಕರ ಮುಂದೆ ಬರೋಕೆ ತುದಿಗಾಲಲ್ಲಿ ನಿಂತಿದೆ. ಹೃತಿಕ್- ತಾರಕ್ ಡೆಡ್ಲಿ ವಾರ್ ಎಷ್ಟು ಹೈ ವೋಲ್ಟೇಜ್‌ನಿಂದ ಕೂಡಿದೆ ಅನ್ನೋದನ್ನ ನೀವೇ ನೋಡಿ.
- ಹೃತಿಕ್-ತಾರಕ್ ಡೆಡ್ಲಿ ವಾರ್.. 400Cr ವಿಶ್ಯುವಲ್ ಟ್ರೀಟ್
- ಇಬ್ಬರು ಬ್ರಿಲಿಯೆಂಟ್ ಏಜೆಂಟ್‌ಗಳ ನಡುವಿನ ಕಾದಾಟ..!
- ಇದು ಯಶ್ ರಾಜ್ ಫಿಲಂಸ್ ಸ್ಪೈ ಯೂನಿವರ್ಸ್ ಫ್ರಾಂಚೈಸ್
- ಆಗಸ್ಟ್ 14ಕ್ಕೆ ಮೈಂಡ್ ಬ್ಲೋಯಿಂಗ್ ಪೇಟ್ರಿಯಾಟಿಕ್ ಮೂವಿ
ಟೀಸರ್‌ನಿಂದಲೇ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಮಂತ್ರ ಮುಗ್ಧಗೊಳಿಸಿದ್ದ ವಾರ್-2 ಸಿನಿಮಾ, ಇದೀಗ ಜಬರ್ದಸ್ತ್ ಮೇಕಿಂಗ್‌ನ ಹೈ ವೋಲ್ಟೇಜ್ ಟ್ರೈಲರ್‌ನಿಂದ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಮಾಡಿದೆ. ಯೆಸ್.. ಯಶ್ ರಾಜ್ ಫಿಲಂಸ್ ಸ್ಪೈ ಯೂನಿವರ್ಸ್ ಫ್ರಾಂಚೈಸ್ ಇದಾಗಿದ್ದು, ಈ ಬಾರಿ ವಾರ್‌ಗೆ ಇಳಿಯುತ್ತಿರೋದು ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್.
ಯೆಸ್.. ಈ ಸೌತ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್‌ಗಳ ಮಹಾ ಸಂಗಮಕ್ಕೆ ಆದಿತ್ಯ ಚೋಪ್ರಾ ವೇದಿಕೆ ಮಾಡಿಕೊಟ್ಟಿದ್ದು, ವಾರ್ ಸೀಕ್ವೆಲ್ ವಾರ್-2ಗೆ ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುಮಾರು 400 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗಿರೋ ಈ ಸಿನಿಮಾ ಸಿಕ್ಕಾಪಟ್ಟೆ ರಿಚ್ ಆಗಿ ಮೂಡಿಬಂದಿದೆ. ಮೇಕಿಂಗ್ ನಿಜಕ್ಕೂ ಮೈಂಡ್ ಬ್ಲೋಯಿಂಗ್ ಆಗಿದ್ದು, ಸ್ಟಂಟ್ಸ್ ನೆಕ್ಸ್ಟ್ ಲೆವೆಲ್‌ಗಿವೆ.
ಇಂಡಿಯಾದ ಇಬ್ಬರು ಸ್ಪೈ ಏಜೆಂಟ್‌ಗಳು ಸೆಣಸಾಡುವ ವಾರ್-2ನಲ್ಲಿ ಅವರಿಬ್ಬರ ಕಾದಾಟ ನೋಡೋಕೆ ಎರಡು ಕಣ್ಣು ಸಾಲದಂತಿದೆ. ಇನ್ನು ಹೃತಿಕ್‌ಗೆ ಜೋಡಿಯಾಗಿ ಕಿಯಾರಾ ನಟಿಸಿದ್ದು, ಆಕೆ ಕೂಡ ಗ್ಲಾಮರ್ ಜೊತೆ ಏಜೆಂಟ್ ಪಾತ್ರದಲ್ಲಿ ಮಾಸ್ ಖದರ್ ತೋರಲಿದ್ದಾರೆ. ಅದನ್ನ ಟ್ರೈಲರ್ ಝಲಕ್‌ನಲ್ಲಿ ನೋಡಬಹುದಾಗಿದೆ.
ಅಶುತೋಷ್ ರಾಣಾ, ಅನಿಲ್ ಕಪೂರ್ ಚಿತ್ರದ ತಾರಾಗಣದಲ್ಲಿದ್ದು, ಆಲಿಯಾ ಭಟ್ ಹಾಗೂ ಟೈಗರ್ ಶ್ರಾಫ್ ಕೂಡ ಸ್ಪೆಷಲ್ ಅಪಿಯರೆನ್ಸ್ ನೀಡಲಿದ್ದಾರಂತೆ. ನಾನೀಗ ಮನುಷ್ಯನಲ್ಲ. ಒಂದು ಆಯುಧ. ಸಾಯ್ತೀನಿ ಇಲ್ಲ ಸಾಯಿಸ್ತೀನಿ ಅನ್ನೋ ಜೂನಿಯರ್ ಎನ್‌ಟಿಆರ್ ಡೈಲಾಗ್ ಸಖತ್ ಇಂಟೆನ್ಸ್ ಆಗಿದೆ. ಇನ್ನು ತನ್ನ ವ್ಯವಸ್ಥೆಯೇ ತನ್ನ ವಿರುದ್ಧ ತಿರುಗಿ ಬಿದ್ದಾಗ ಹೃತಿಕ್ ಕಂಪ್ಲೀಟ್ ಐಡೆಂಟಿಟಿ ಬಿಟ್ಟು, ನೆರಳಂತೆ ಹೊಸ ಬದುಕು ಕಟ್ಟಿಕೊಂಡು ದೇಶದ ವಿರುದ್ಧವೇ ವಾರ್‌ಗೆ ಸಜ್ಜಾಗ್ತಾರೆ.
ಏಜೆಂಟ್ ಕಬೀರ್‌ಗೆ ದೇಶ ಮಾಡಿದ ದ್ರೋಹ ಏನು..? ಅದು ಆತನನ್ನ ದೇಶದ ವಿರುದ್ಧ ತಿರುಗಿ ಬೀಳುವಂತೆ ಮಾಡಿತಾ..? ಆ ಕಬೀರ್‌ನ ಹಿಡಿಯೋ ಮತ್ತೊಬ್ಬ ಏಜೆಂಟ್ ವಿಕ್ರಮ್ ಅದಕ್ಕಾಗಿ ಏನೆಲ್ಲಾ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಅಂದಹಾಗೆ ಸಿನಿಮಾ ಇದೇ ಆಗಸ್ಟ್ 14ಕ್ಕೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ದೋಚುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್