ತಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರಂತೆ ಅವ್ರ ಮಗ ವಿನೀಶ್ ಕೂಡ ಆರಡಿ ಕಟೌಟ್. ಅಷ್ಟೇ ಅಲ್ಲ, ನಟನೆ ಅನ್ನೋದು ಬ್ಲಡ್‌ನಲ್ಲೇ ಬಂದುಬಿಟ್ಟಿದೆ. ಈಗಾಗ್ಲೇ ಸಣ್ಣಪುಟ್ಟ ರೋಲ್‌ಗಳಲ್ಲಿ ತಂದೆ ದರ್ಶನ್ ಜೊತೆ ಕಾಣಿಸಿಕೊಳ್ತಿದ್ದ ವಿನೀಶ್, ಇದೀಗ ಹೀರೋ ಆಗಿ ಲಾಂಚ್ ಆಗೋ ಮುನ್ಸೂಚನೆ ನೀಡಿದ್ದಾರೆ. ಬಿಜಿಎಸ್ ಉತ್ಸವದಲ್ಲಿ ಮೈಂಡ್ ಬ್ಲೋಯಿಂಗ್ ಪರ್ಫಾಮೆನ್ಸ್ ನೀಡಿ, ಎಲ್ಲರ ಹುಬ್ಬೇರಿಸಿದ್ದಾರೆ ಜೂನಿಯರ್ ದರ್ಶನ್.
ವಿನೀಶ್ ದರ್ಶನ್.. ಥೇಟ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೀತಿ ಕಾಣೋ ಆರಡಿ ಕಟೌಟ್. ಇನ್ನೂ ಪಿಯು ಓದುತ್ತಿರೋ ವಿನೀಶ್, ಅಪ್ಪನಿಗಿಂತ ಉದ್ದ ಬೆಳೆದು ನಿಂತಿದ್ದಾರೆ. ಇನ್ನು ನಟನೆ ಅನ್ನೋದು ಅವ್ರ ಬ್ಲಡ್‌ನಲ್ಲೇ ಇರೋದ್ರಿಂದ, ಈಗಾಗ್ಲೇ ಐರಾವತ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ತಂದೆ ದಚ್ಚು ಜೊತೆ ವಿನೀಶ್ ಬಣ್ಣ ಹಚ್ಚಿದ್ದರು.
ಲೈಮ್ ಲೈಟ್‌ಗೆ ವಿನೀಶ್.. Jr. ದರ್ಶನ್ ಸ್ಟೇಜ್ ಪರ್ಫಾಮೆನ್ಸ್
BGS ಉತ್ಸವದಲ್ಲಿ ಡಿಬಾಸ್ ದರ್ಶನ್ ಮಗನ ಡ್ಯಾನ್ಸ್ ಹೈಲೈಟ್
ದರ್ಶನ್ ಎಲ್ಲೇ ಹೋದ್ರೂ ಬಂದ್ರೂ ಸಹ ವಿನೀಶ್‌ನ ಕೂಡ ಜೊತೆಯಲ್ಲೇ ಕರೆದೊಯ್ಯುತ್ತಿದ್ದರು. ಆದ್ರೀಗ ದರ್ಶನ್ ಕುಟುಂಬದ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನೂ ಪಿಯು ವ್ಯಾಸಂಗ ಮಾಡ್ತಿರೋ ಒಬ್ಬನೇ ಮುದ್ದಿನ ಮಗ ವಿನೀಶ್ ಅದ್ರಿಂದ ಸಾಕಷ್ಟು ಕುಗ್ಗಿದ್ದಾರೆ. ಹಾಗಂತ ಓದು, ಆಟ, ಪಾಠಕ್ಕೆ ಮೋಸ ಮಾಡ್ತಿಲ್ಲ. ಬಿಜಿಎಸ್ ಕೆಂಗೇರಿಯಲ್ಲಿ ಓದುತ್ತಿರೋ ವಿನೀಶ್, ಇತ್ತೀಚೆಗೆ ನಡೆದ ಬಿಜಿಎಸ್ ಉತ್ಸವ 2025ನಲ್ಲಿ ಸ್ಟೇಜ್ ಪರ್ಫಾಮೆನ್ಸ್ ನೀಡಿ, ಎಲ್ಲರ ಹುಬ್ಬೇರಿಸಿದ್ದಾರೆ.
ನೇಚರ್, ಪ್ರಾಣಿ, ಪಕ್ಷಿಗಳ ಕುರಿತು ಸಂದೇಶ ಸಾರುವಂತಹ ಹಾಡೊಂದಕ್ಕೆ ಪರ್ಫಾಮ್ ಮಾಡಿದ ವಿನೀಶ್ ವಿಡಿಯೋಗಳು ಸದ್ಯ ಎಲ್ಲೆಡೆ ವೈರಲ್ ಆಗ್ತಿವೆ. ಮಗನ ಪರ್ಫಾಮೆನ್ಸ್‌ನ ಕಣ್ತುಂಬಿಕೊಳ್ಳೋಕೆ ಸ್ವತಃ ವಿಜಯಲಕ್ಷ್ಮೀ ದರ್ಶನ್ ಅವರೇ ಬಂದು ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಕಾಶನಾಥ ಸ್ವಾಮೀಜಿಗಳ ಪಕ್ಕ ಕೂತಿದ್ದರು. ಅವರಲ್ಲಿ ಒಂದು ಸಾರ್ಥಕ ಭಾವ ಎದ್ದು ಕಾಣ್ತಿತ್ತು. ತಂದೆ ಜೈಲಲ್ಲಿದ್ರೂ ಸಹ, ಮಗ ತೂಗುದೀಪ ಕುಟುಂಬದ ಹೆಸರು ಉಳಿಸೋ ಕಾರ್ಯ ಮಾಡ್ತಿದ್ದಾನೆ ಅನ್ನೋ ಪಾಸಿಟಿವ್ ಮಾತುಗಳು ಕೇಳಿಬರ್ತಿವೆ.
ತಂದೆ ಜೊತೆ ನಟನೆ.. ಹೀರೋ ಆಗೋ ಹಿಂಟ್ ಕೊಟ್ರಾ ವಿನೀಶ್ ?
ಮಗನ ಪರ್ಫಾಮೆನ್ಸ್‌ಗೆ ವಿಜಯಲಕ್ಷ್ಮೀ ದರ್ಶನ್ ಸಾರ್ಥಕ ಭಾವ
ತಂದೆಯಂತೆ ವಿನೀಶ್ ಕೂಡ ಪ್ರಾಣಿ, ಪಕ್ಷಿ ಪ್ರಿಯ. ಅಪ್ಪನ ಜೊತೆ ರೋಡ್ ಟ್ರಿಪ್ಸ್ ಕೂಡ ಹೋಗ್ತಿದ್ದ. ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮಾಡ್ತಿದ್ದ. ಇದೀಗ ಒಳ್ಳೆಯ ಡ್ಯಾನ್ಸರ್ ಆಗಿ ಗುರ್ತಿಸಿಕೊಂಡಿದ್ದಾರೆ. ಈ ಮೂಲಕ ಸದ್ಯದಲ್ಲೇ ಹೀರೋ ಆಗಿ ಲಾಂಚ್ ಆಗುವ ಮುನ್ಸೂಚನೆ ನೀಡಿದ್ದಾರೆ ವಿನೀಶ್. ಅಂದಹಾಗೆ ಮಗನ ಈ ಸ್ಟೇಜ್ ಪರ್ಫಾಮೆನ್ಸ್ ನೋಡೋಕೆ ದರ್ಶನ್ ಇದ್ದಿದ್ರೆ ಇನ್ನೆಷ್ಟು ಚೆನ್ನಾಗಿರ್ತಿತ್ತು ಅಲ್ವಾ..?
ಒಟ್ಟಾರೆ ಅಮ್ಮ ವಿಜಯಲಕ್ಷ್ಮೀಗೆ ವಿನೀಶ್ ಒಂಥರಾ ಆನೆಬಲ. ಆಕೆಯ ಕಷ್ಟ ಸುಖಗಳಲ್ಲಿ ಜೊತೆಗೆ ನಿಂತು, ಎಲ್ಲವನ್ನ ನಿಭಾಯಿಸ್ತಿರೋ ವಿನೀಶ್ ನಿಜಕ್ಕೂ ಗ್ರೇಟ್. ದರ್ಶನ್ ಆದಷ್ಟು ಬೇಗ ಹೊರಬರಲಿ. ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮಿಂಚಲಿ ಅಂತ ಕಾಯ್ತಿರೋ ಅವ್ರ ಕುಟುಂಬ, ಅಸಂಖ್ಯಾತ ಅಭಿಮಾನಿ ಬಳಗ ಹಾಗೂ ಚಿತ್ರರಂಗದ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.
