ಮಚ್ಚು ಹಿಡಿದು ರೀಲ್ ಮಾಡಿದ ವಿಡಿಯೋ ವಿವಾದದಿಂದ ಜೈಲು ಸೇರಿದ್ದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರನ್ನು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ ಮಾಡಿದೆ. ಯುಗಾದಿ ಹಬ್ಬದ ಮುನ್ನ ಪರಪ್ಪನ ಅಗ್ರಹಾರ ಜೈಲಿನಿಂದ ಈ ಇಬ್ಬರು ಬಿಡುಗಡೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ, ಅಪಾಯಕಾರಿ ಹೊಡೆತದ ದೃಶ್ಯ ತೋರಿಸಿದ್ದಕ್ಕಾಗಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ನಂತರ, ವಿನಯ್ ಗೌಡ ಮಾಧ್ಯಮಗಳ ಮುಂದೆ ಮಾತಾಡಿದ ವಿನಯ್ ಗೌಡ, ತಮ್ಮ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ” ಎಲ್ಲರೂ ಸೇರ್ಕೊಂಡು ಮಾತಾಡೋಣ. ಎಲ್ಲರಿಗೂ ಧನ್ಯವಾದಗಳು, ನೀವು ಮಾಡಿರುವ ಬೆಂಬಲ ಅಮೂಲ್ಯ,” ಎಂದು ಬಿಡುಗಡೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದರು.
ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ, ವಿನಯ್ ಗೌಡ ವಿಶೇಷವಾಗಿ ತಮ್ಮ ಅಭಿಮಾನಿಗಳು, ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರ ಎದುರು ಕ್ಷಮೆಯಾಚಿಸಿದ್ದಾರೆ. ತಮ್ಮ ವಿಡಿಯೋದಲ್ಲಿ ಮಾತನಾಡಿದ್ದು, “ನಮಸ್ಕಾರ, ನಾನು ನಿಮ್ಮ ವಿನಯ್ ಗೌಡ. ಕಳೆದ ನಾಲ್ಕು ದಿನಗಳಿಂದ ಮಚ್ಚು ಹಿಡಿದು ರೀಲ್ಸ್ ಮಾಡಿದ ಕಾರಣದಿಂದ ಒಂದು ವಿವಾದ ನಡೆಯುತ್ತಿದೆ. ನಾನು ಇಲ್ಲಿ ಎಲ್ಲರಿಗೂ, ವಿಶೇಷವಾಗಿ ನನ್ನ ಕುಟುಂಬ, ಸ್ನೇಹಿತರು, ಮಾಧ್ಯಮ ಮಿತ್ರರು ಹಾಗೂ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತಿದ್ದೇನೆ. ನನ್ನಿಂದ ಈ ತಪ್ಪು ಆಗಿದೆ.”
ವಿನಯ್ ತಮ್ಮ ವಿಡಿಯೋದಲ್ಲಿ, ತಮ್ಮ ತಪ್ಪಿನಿಂದಾಗಿ ಕುಟುಂಬಕ್ಕೆ ಎದುರಾದ ತೊಂದರೆಯನ್ನು ಉಲ್ಲೇಖಿಸಿದ್ದಾರೆ. “ನನ್ನ ಹೆಂಡತಿ, ಮಗನಿಗೆ ಈ ಘಟನೆ ತೊಂದರೆ ತಂದಿದೆ. ನನ್ನ ಸ್ನೇಹಿತರು, ಪೋಷಕರು, ಅಭಿಮಾನಿಗಳು ನನ್ನ ನೆರವಿಗಾಗಿ ರಾತ್ರಿ ದಿನ ಕಾದಿದ್ದಾರೆ. ಅವರ ಬೆಂಬಲ ನನ್ನಿಗೆ ಬಹಳ ಸಹಾಯವಾಗಿದೆ. ನಾನು ಎಲ್ಲರ ಮುಂದೆ ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ,” ಎಂದಿದ್ದಾರೆ.
ತಮ್ಮ ವಿಡಿಯೋದಲ್ಲಿ, ತನಿಖೆ ನಡೆಸಿದ ಪೊಲೀಸರ ಮೇಲೂ ಅವರು ನಿಷ್ಠೆಯಿಂದ ಮಾತು ಹೇಳಿದರು. “ಪೊಲೀಸರು ಕೂಡ ಕಾಮನ್ ಮ್ಯಾನ್ ಗೆ ಹೇಗೆ ತನಿಖೆ ನಡೆಸುತ್ತಾರೋ, ಹಾಗೆಯೇ ನಮಗೂ ವಿಚಾರಣೆ ಮಾಡಿದ್ದಾರೆ. ಅವರು ತಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದಾರೆ. ದಯವಿಟ್ಟು ಅವರ ವಿರುದ್ಧ ಯಾವುದೇ ಆರೋಪ ಮಾಡಬೇಡಿ,” ಎಂದು ವಿನಂತಿಸಿದ್ದಾರೆ.
ಇನ್ನು ಈ ಮೂಲಕ ವಿನಯ್ ಗೌಡ ತಮ್ಮ ಕ್ಷಮೆಯಾಚನೆಯ ಮೂಲಕ, ತಮ್ಮ ತಪ್ಪನ್ನು ಒಪ್ಪಿಕೊಂಡು, ಮುಂದೆ ಎಚ್ಚರಿಕೆಯಿಂದ ಇರುವುದಾಗಿ ಭರವಸೆ ನೀಡಿದ್ದಾರೆ.