ತ್ರಿಶಾ ಮನೆಯಲ್ಲಿ ವಿಜಯ್..ಫೋಟೋ ಹಿಂದಿನ ಸತ್ಯವೇನು?

4112 (3)

ಕಾಲಿವುಡ್‌ನ ಸೂಪರ್‌ಸ್ಟಾರ್ ವಿಜಯ್ ಮತ್ತು ನಟಿ ತ್ರಿಶಾ ಕುರಿತಾದ ವದಂತಿಗಳು ಕಳೆದ ಒಂದು ವರ್ಷದಿಂದ ಸುದ್ದಿಯಲ್ಲಿವೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ತಮಿಳು ಚಿತ್ರರಂಗದಲ್ಲಿ ಹರಿದಾಡಿದ್ದವು. ಕೆಲವು ತಿಂಗಳು ತಣ್ಣಗಾದ ಈ ವದಂತಿಗಳಿಗೆ ಇದೀಗ ತ್ರಿಶಾ ಪೋಸ್ಟ್ ಮಾಡಿರುವ ಒಂದು ಫೋಟೋ ಮತ್ತೆ ಜೀವ ತುಂಬಿದೆ.

ಜೂನ್ 22ರಂದು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ದಳಪತಿ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಕೀರ್ತಿ ಸುರೇಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದರು. ಆದರೆ, ತ್ರಿಶಾ ‘ಹ್ಯಾಪಿ ಬರ್ತ್‌ ಡೇ ಟು ದಿ ಬೆಸ್ಟ್’ ಎಂದು ಶೀರ್ಷಿಕೆಯಿಟ್ಟು, ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ಸಾಕುನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ಈ ಫೋಟೋ ವಿಜಯ್ ತ್ರಿಶಾ ಮನೆಯಲ್ಲಿರುವಂತೆ ಕಾಣುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇದು ಇತ್ತೀಚಿನ ಚಿತ್ರವೇ, ಅಥವಾ ಹಳೆಯದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ಕೀರ್ತಿ ಸುರೇಶ್‌ರ ಮದುವೆಗೆ ವಿಜಯ್ ಮತ್ತು ತ್ರಿಶಾ ಒಟ್ಟಿಗೆ ಪ್ರೈವೇಟ್ ಜೆಟ್‌ನಲ್ಲಿ ತೆರಳಿದ್ದರು. ಆಗಲೂ ಇಂತಹ ಊಹಾಪೋಹಗಳು ಹರಿದಾಡಿದ್ದವು. ಆದರೆ, ವಿಜಯ್ ಆಗಲೀ, ತ್ರಿಶಾ ಆಗಲೀ ಈ ವದಂತಿಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲ.

ವಿಜಯ್‌ ಅವರು ಈಗ ‘ಜನ ನಾಯಗನ್’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಇದು ಅವರ ಕೊನೆಯ ಚಿತ್ರವೆಂದು ಹೇಳಲಾಗಿದೆ, ಏಕೆಂದರೆ ವಿಜಯ್ ರಾಜಕೀಯಕ್ಕೆ ಪೂರ್ಣಾವಧಿ ಪ್ರವೇಶಿಸಿದ್ದಾರೆ. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ಸ್ಪರ್ಧಿಸಲಿದ್ದಾರೆ.

ತ್ರಿಶಾ 40 ವರ್ಷ ದಾಟಿದರೂ ಅವರು ಇನ್ನೂ ಮದುವೆಯಾಗಿಲ್ಲ. ಒಮ್ಮೆ ಉದ್ಯಮಿಯೊಬ್ಬರೊಂದಿಗೆ ನಿಶ್ಚಿತಾರ್ಥವಾಗಿದ್ದು, ಕಾರಣಾಂತರಗಳಿಂದ ಅದು ರದ್ದಾಯಿತು. ಚಿತ್ರರಂಗದಿಂದ ದೂರವಾಗುತ್ತಾರೆ ಎಂಬ ಮಾತುಗಳ ನಡುವೆ, ’96’ ಚಿತ್ರದ ಮೂಲಕ ತ್ರಿಶಾ ಭರ್ಜರಿಯಾಗಿ ಕಂಬ್ಯಾಕ್ ಮಾಡಿದರು. ‘ಪೊನ್ನಿಯಿನ್ ಸೆಲ್ವನ್’ ಎರಡು ಭಾಗಗಳು, ‘ಲಿಯೋ’, ‘ವಿದಾಮುಯರ್ಚಿ’, ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಗಳಲ್ಲಿ ಅವರ ನಟನೆ ಗಮನ ಸೆಳೆಯಿತು.

Exit mobile version