ಸ್ಪೈ ಲವ್ಸ್ ಡಾಕ್ಟರ್.. ದೇವರಕೊಂಡ ರೊಮ್ಯಾನ್ಸ್ ಕಂಟಿನ್ಯೂ!

ರಶ್ಮಿಕಾ ಮದ್ವೆಗೂ ಮುನ್ನ ಮತ್ತೊಬ್ಬ ಬ್ಯೂಟಿ ಜೊತೆ ಲಿಪ್‌‌ಲಾಕ್

Untitled design 2025 05 03t164829.305

ವಿಜಯ್ ದೇವರಕೊಂಡನ ಕಂಡ್ರೆ ಹುಡ್ಗಿಯರಿಗಷ್ಟೇ ಅಲ್ಲ, ಹುಡ್ಗರಿಗೂ ರೊಮ್ಯಾನ್ಸ್ ಮಾಡ್ಬೇಕು ಅನಿಸುತ್ತೆ. ಅಷ್ಟರ ಮಟ್ಟಿಗೆ ಕ್ರೇಜ್ ಇರೋ ಸ್ಟಾರ್ ಆತ. ಅಂದಹಾಗೆ ರಶ್ಮಿಕಾನ ಮದ್ವೆ ಆಗೋಕೆ ಮುನ್ನ ಹೊಸ ಕಿಂಗ್‌ಡಮ್ ಕಟ್ಟುತ್ತಿರೋ ದೇವರಕೊಂಡ, ಮತ್ತೊಬ್ಬ ಹುಡ್ಗಿ ಜೊತೆ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡ್ತಿದ್ದಾರೆ. ಆಕೆ ಯಾರು..? ಮ್ಯಾಟರ್ ಏನು ಅನ್ನೋದಕ್ಕೆ ಈ ಸ್ಟೋರಿ ನೋಡಿ.

ರಣಭೂಮಿಯನ್ನ ಸೀಳಿಕೊಂಡು ಬರೋ ರಾಜನಿಕೋಸ್ಕರ.. ಕಾಲಚಕ್ರವನ್ನೇ ಬದಲಿಸಿ ಪುನರ್ಜನ್ಮವೆತ್ತ ನಾಯಕನಿಗೋಸ್ಕರ ದೇವರಕೊಂಡ ಸ್ಥಾಪಿಸ್ತಿದ್ದಾರೆ ಹೊಚ್ಚ ಹೊಸ ಕಿಂಗ್‌ಡಮ್. ಯೆಸ್.. ಇದು ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಅಪ್‌ಕಮಿಂಗ್ ಸಿನಿಮಾದ ಟೀಸರ್ ಝಲಕ್. ಗೌತಮ್ ತಿನ್ನನೂರಿ ನಿರ್ದೇಶನದ ಈ ಸಿನಿಮಾದ ಮೇಕಿಂಗ್ ಅರ್ಜುನ್ ರೆಡ್ಡಿಯಷ್ಟೇ ರಾ & ರಗಡ್ ಆಗಿದೆ. ಕಲ್ಟ್ ಕ್ಲಾಸಿಕ್ ಫೀಲ್ ಕೊಡ್ತಿದೆ.

ಇದೇ ಮೇ 30ಕ್ಕೆ ತೆರೆಗಪ್ಪಳಿಸುತ್ತಿರೋ ಕಿಂಗ್‌ಡಮ್ ಮೂವಿ ಹತ್ತು, ಹಲವು ವಿಶೇಷತೆಗಳಿಂದ ಕೂಡಿದ್ದು, ಸದ್ಯ ರಿಲೀಸ್ ಆಗಿರೋ ಹಾಡಿನಿಂದ ನೋಡುಗರ ಹುಬ್ಬೇರಿಸಿದೆ. ಅದರಲ್ಲೂ ಭಾಗ್ಯಲಕ್ಷ್ಮೀ ಜೊತೆಗಿನ ದೇವರಕೊಂಡ ರೊಮ್ಯಾನ್ಸ್ ನೆಕ್ಸ್ಟ್ ಲೆವೆಲ್‌ಗೆ ಕಿಕ್ ಕೊಡ್ತಿದೆ. ಹೌದು.. ರೊಟೀನ್ ಸಾಂಗ್ಸ್‌‌‌ನಂತೆ ಈ ಹಾಡನ್ನ ಡಿಸೈನ್ ಮಾಡಿಲ್ಲ ಮೇಕರ್ಸ್‌. ಹಾಗಾಗಿಯೇ ಸಂಥಿಂಗ್ ಸ್ಪೆಷಲ್ ಅನಿಸ್ತಿದೆ.

ಹೆಂಗೆಳೆಯರ ಮನಸ್ಸುಗಳಿಗೆ ಲಗ್ಗೆ ಇಡುವಂತಹ ದೃಶ್ಯಗಳು ಈ ಹಾಡಿನ ಬಂಡವಾಳ ಆಗಿದೆ. ಅದರಲ್ಲೂ ನಾಯಕ-ನಾಯಕಿಯ ಲಿಪ್‌ಲಾಕ್ ಸೀನ್ಸ್ ಹಾಡಿನ ತೀವ್ರತೆ ಹೆಚ್ಚಿಸಿವೆ. ಹೀರೋ ಒಬ್ಬ ಸ್ಪೈ ಆಫೀಸರ್ ಆಗಿದ್ದು, ನಾಯಕಿ ಇಲ್ಲಿ ಡಾಕ್ಟರ್ ಕೋರ್ಸ್‌ ಮಾಡ್ತಿರೋ ಮೆಡಿಕಲ್ ಸ್ಟೂಡೆಂಟ್ ಆಗಿ ಕಾಣಸಿಗಲಿದ್ದಾರೆ. ಇವ್ರ ನಡುವಿನ ಗ್ಲಾಮರ್ ಹಾಗೂ ಸಿನಿಮಾದ ಕ್ರೈಂ ಗ್ರಾಮರ್ ಎರಡೂ ಬ್ಯೂಟಿಫುಲ್ ಆಗಿ ಬ್ಲೆಂಡ್ ಆಗಿವೆ.

ಫಿಟ್ ಅಂಡ್ ಫೈನ್ ಆಗಿರೋ ದೇವರಕೊಂಡ, ಶಾರ್ಟ್‌ ಹೇರ್‌‌ನಲ್ಲಿ ಕಣ್ಣು ಕುಕ್ಕುವಂತೆ ಕಾಣ್ತಾರೆ. ಅದರಲ್ಲೂ ಅಲ್ಲಲ್ಲಿ ಗನ್‌‌ನಿಂದ ಬುಲೆಟ್‌‌ಗಳನ್ನ ಇಳಿಸೋದು, ರಕ್ತ ಹರಿಸೋದು, ಅದ್ರ ಜೊತೆ ಜೊತೆಗೆ ಕಿಸ್, ಹಗ್, ಲವ್, ಲಸ್ಟ್ ಹೀಗೆ ಎಲ್ಲವೂ ಕಿಂಗ್‌ಡಮ್ ಗಮ್ಮತ್ತು ಹೆಚ್ಚಿಸಿವೆ. ಅಂದಹಾಗೆ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣನ ಮದ್ವೆ ಆಗೋಕೆ ಮೊದಲೇ ದೇವರಕೊಂಡ ಹೀಗೆ ಮತ್ತೊಬ್ಬ ಹೀರೋಯಿನ್ ಜೊತೆ ಈ ರೇಂಜ್‌ಗೆ ರೊಮ್ಯಾನ್ಸ್ ಮಾಡ್ತಿರೋದು ನ್ಯಾಷನಲ್ ಕ್ರಶ್ ಫ್ಯಾನ್ಸ್‌ಗೆ ಲೈಟ್ ಆಗಿ ಹರ್ಟ್‌ ಆಗಿದೆ.

ಇವೆಲ್ಲವುಗಳ ಹೊರತಾಗಿ ವಿಜಯ್ ದೇವರಕೊಂಡ ಸಿನಿಮಾಗಳಲ್ಲಿ ಒಂದಲ್ಲಾ ಒಂದು ಇಂಟೆನ್ಸ್ ಕಿಸ್ ಸೀನ್ಸ್ ಇದ್ದೇ ಇರಲಿವೆ. ಗೀತ ಗೋವಿಂದಂ, ಡಿಯರ್ ಕಾಮ್ರೆಡ್, ಅರ್ಜುನ್ ರೆಡ್ಡಿ, ಖುಷಿ ಸೇರಿದಂತೆ ಎಲ್ಲಾ ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಅವುಗಳ ಸಾಲಿಗೆ ಕಿಂಗ್‌ಡಮ್ ಕೂಡ ಸೇರ್ಪಡೆ ಆಗಿದ್ದು, ಈ ಬಾರಿ ದೊಡ್ಡ ಮಟ್ಟದಲ್ಲೇ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಲು ಸಜ್ಜಾಗಿದ್ದಾರೆ ಈ ಕಲ್ಟ್ ಆ್ಯಕ್ಟರ್.

ಲೈಗರ್, ಖುಷಿ ಹಾಗೂ ಫ್ಯಾಮಿಲಿ ಸ್ಟಾರ್ ಮೂವಿಗಳು ದೇವರಕೊಂಡ ನಿರೀಕ್ಷಿಸಿದ ರೇಂಜ್‌‌ನಲ್ಲಿ ಪೈಸಾ ವಸೂಲ್ ಮಾಡಲಿಲ್ಲ. ಅದೇ ಕಾರಣದಿಂದ ಕಿಂಗ್‌ಡಮ್‌ ಅವುಗಳಂತೆ ಆಗಬಾರದು ಅನ್ನೋ ನಿಟ್ಟಿನಲ್ಲಿ ಸುಮಾರು 110 ಕೋಟಿ ಬಿಗ್ ಬಜೆಟ್‌‌ನಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ ಈ ಚಿತ್ರವನ್ನು ಕಟ್ಟಲಾಗಿದೆ. ಆರ್ಮಿಗೂ ಲಿಂಕ್ ಇರೋ ಈ ಸಿನಿಮಾದ ಟೀಸರ್, ಜೂನಿಯರ್ ಎನ್‌ಟಿಆರ್ ವಾಯ್ಸ್‌ನೊಂದಿಗೆ ಸಖತ್ ಕಿಕ್ ನೀಡಿತ್ತು. ಇದೀಗ ಇವ್ರ ರೊಮ್ಯಾನ್ಸ್‌‌ನಿಂದ ಮಸ್ತ್ ಮಜಾ ಕೊಡ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

Exit mobile version