ಬೆಂಗಳೂರು ಮಾ.15 : ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹಡೆ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿ.ಆರ್.ಓ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಿನಿಮಾ ವಿಮರ್ಶಕರು ಕೊಡುವ ಪ್ರಶಸ್ತಿಗಳಿಗೆ ತೂಕ ಇರಲಿದೆ. ಹಾಗಾಗಿ ಅದೊಂದು ದೊಡ್ಡ ಗೌರವ ಎಂದರು ನಾಗತಿಹಳ್ಳಿ ಚಂದ್ರಶೇಖರ್, ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡಿದರು ನಟ ಶ್ರೀನಗರ ಕಿಟ್ಟಿ. ಏಳು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಮಾದರಿ ಕೆಲಸ ಮಾಡುತ್ತಿದೆ. ಪ್ರಶಸ್ತಿಗಳ ಆಯ್ಕೆಯೇ ತಿಳಿಸುತ್ತದೆ ಅಂದರು ಪೂಜಾ ಗಾಂಧಿ.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ: ಅತೀ ಹೆಚ್ಚು ನಾಮನಿರ್ದೇಶನಗೊಂಡ ಕಾಂತಾರ ಸಿನಿಮಾ
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ನಾಮ ನಿರ್ದೇಶಿತರು 2026
ಅತ್ಯುತ್ತಮ ಚೊಚ್ಚಲ ನಿರ್ಮಾಪಕ (Best Debut Producer) (ಪುನೀತ್ ರಾಜಕುಮಾರ್ ಪ್ರಶಸ್ತಿ )
1. ಆದರ್ಶ್ ಅಯ್ಯಂಗಾರ್ (ತಿಮ್ಮನ ಮೊಟ್ಟೆಗಳು)
2. ನಾಗೇಶ್ ಗೋಪಾಲ್ (ನೋಡಿದವರು ಏನಂತಾರೆ)
3. ನಿವೇದಿತಾ ಶಿವರಾಜಕುಮಾರ್ ( ಫೈರ್ ಫ್ಲೈ)
4. ದೀಪಕ್ ತಿಮ್ಮಪ್ಪ (ಗತ ವೈಭವ)
5. ಸಿಆರ್ ಬಾಬಿ / ಅಜನೀಶ್ ಲೋಕನಾಥ್ (ಜಸ್ಟ್ ಮ್ಯಾರೀಡ್)
ಅತ್ಯುತ್ತಮ ಚೊಚ್ಚಲ ನಿರ್ದೇಶಕ (Best Debut Director) (ಶಂಕರ ನಾಗ್ ಪ್ರಶಸ್ತಿ)
1. ಆಯುಷ್ ಮಲ್ಲಿ ( ಪಪ್ಪಿ)
2. ಅಮೋಲ್ ಪಾಟೀಲ್ (ಉಢಾಳ)
3. ಜೆಪಿ ತುಮಿನಾಡ್ (ಸು ಫ್ರಮ್ ಸೋ)
4. ಭೀಮರಾವ್ ಪಿ (ಹೆಬ್ಬುಲಿ ಕಟ್)
5. ಸುಮಂತ್ ಭಟ್ (ಮಿಥ್ಯ)
ಅತ್ಯುತ್ತಮ ಚೊಚ್ಚಲ ಬರಹಗಾರ (Best Debut Writer) (ಚಿ ಉದಯಶಂಕರ್ ಪ್ರಶಸ್ತಿ )
1. ಜೆಪಿ ತುಮಿನಾಡ್ ( ಸು ಫ್ರಮ್ ಸೋ)
2. ಸುಮಂತ್ ಭಟ್ ( ಮಿಥ್ಯ)
3. ಧೀರಜ್ ಎಂವಿ ( ಕಪಟ ನಾಟಕ ಸೂತ್ರಧಾರಿ)
4. ಕುಲದೀಪ್ ಕಾರ್ಯಪ್ಪ (ನೋಡಿದವರು ಏನಂತಾರೆ)
5. ಭೀಮರಾವ್ ಪಿ (ಹೆಬ್ಬುಲಿ ಕಟ್)
ಅತ್ಯುತ್ತಮ ಚೊಚ್ಚಲ ನಟ (Best Debut Actor in Leading Role) (ಸಂಚಾರಿ ವಿಜಯ್ ಪ್ರಶಸ್ತಿ)
1. ದುಶ್ಯಂತ್ ( ಗತ ವೈಭವ)
2. ಡಾ. ಲೀಲಾ ಮೋಹನ್ (ನಾಯಿ ಇದೆ ಎಚ್ಚರಿಕೆ)
3. ಕಿರೀಟಿ (ಜೂನಿಯರ್)
4. ವಂಶಿ ಕೃಷ್ಣ ( ಫೈರ್ಫ್ಲೈ)
5. ಚಂದನ್ ಶೆಟ್ಟಿ (ಸೂತ್ರಧಾರಿ)
ಅತ್ಯುತ್ತಮ ಚೊಚ್ಚಲ ನಟಿ (Best Debut Actress in Leading Role) (ತ್ರಿಪುರಾಂಬಾ ಪ್ರಶಸ್ತಿ)
1. ಮನಿಷಾ (ಬ್ರಾಟ್)
2. ಪ್ರಿಯಾಂಕಾ ಆಚಾರ್ (ಏಳುಮಲೆ)
3. ರಾಶಿಕಾ ಶೆಟ್ಟಿ (ಮನದ ಕಡಲು)
4. ರಚನಾ ರೈ ( ದ ಡೆವಿಲ್)
5. ಮೌನ ಗುಡ್ಡೆಮನೆ (ಕುಲದಲ್ಲಿ ಕೀಳ್ಯಾವುದೋ)
ಅತ್ಯುತ್ತಮ ಬಾಲ ಕಲಾವಿದ (Best Child Artiste)
1. ಅಥೀಶ್ ಶೆಟ್ಟಿ (ಮಿಥ್ಯ)
2. ಜಗದೀಶ್ ಕೊಪ್ಪಳ ( ಪಪ್ಪಿ)
3. ಆದಿತ್ಯ ಸಿಂಧನೂರು ( ಪಪ್ಪಿ)
4. ಹರ್ಷ (ತಿಮ್ಮನ ಮೊಟ್ಟೆಗಳು)
5. ಸುಕ್ರುತ್ (ಜಿಎಸ್ಟಿ)
ಅತ್ಯುತ್ತಮ ವಿ.ಎಫ್.ಎಕ್ಸ್ (Best VFX)
1. ಮಾನ್ಸ್ಟರ್ಸ್ ಅಲಿಯನ್ಸ್ ರೋಬೋಟ್ಸ್ ಜಾಂಬೀಸ್ ಸ್ಟುಡಿಯೋ ( 45 ದ ಮೂವಿ)
2. ಕೆ ವಿ ಸಂಜಿತ್ ( ಕಾಂತಾರ: ಚಾಪ್ಟರ್ 1)3. ನಿರ್ಮಲ್ ಕುಮಾರ್ (ಗತ ವೈಭವ)
4. ಟ್ರಯೋಮ್ ಸ್ಟುಡಿಯೋಸ್ (ದ ಡೆವಿಲ್)
5. ಹರ್ಷಿತ್ ಕುಲಾಯಿ (ಛೂ ಮಂತರ್)
ಅತ್ಯುತ್ತಮ ಕಲಾ ನಿರ್ದೇಶನ (Best Art Direction)
1. ಶಿವಕುಮಾರ್ ಜೆ (ಮಾರ್ಕ್)
2. ಧರಣಿ ಗಂಗೇಪುತ್ರ (ಕಾಂತಾರ: ಚಾಪ್ಟರ್ 1)
3. ಮೋಹನ್ ಪಂಡಿತ್ (45 ದ ಮೂವಿ)
4. ಅವಿನಾಶ್ ಕೊಲ್ಲಾ (ಜೂನಿಯರ್)
5. ಪ್ರಭು ಬಡಿಗೇರ್ ( ವೀರ ಚಂದ್ರಹಾಸ)
ಅತ್ಯುತ್ತಮ ಸಾಹಸ ನಿರ್ದೇಶನ (Best Stunt Choreography)
1. ರಾಮ್ ಲಕ್ಷ್ಮಣ್ (ದ ಡೆವಿಲ್)
2. ಅರ್ಜುನ್ ರಾಜ್ ( ಕಾಂತಾರ: ಚಾಪ್ಟರ್ 1)
3. ರವಿ ವರ್ಮಾ ( ಮಾರ್ಕ್)
4. ಚೇತನ್ ಡಿಸೌಜ್ ( 45 ದ ಮೂವಿ)
5. ವಿನೋದ್ ( ಏಳುಮಲೆ)
ಅತ್ಯುತ್ತಮ ನೃತ್ಯ ಸಂಯೋಜನೆ (Best Dance Choreography)
1. ರೇವಂತ್ ಗೊಲ್ಲಮಂಡಲ ( ಜೂನಿಯರ್, ವೈರಲ್ ವೈಯಾರಿ)
2. ಮುರಳಿ ಮಾಸ್ಟರ್ ( ಎಕ್ಕಾ, ಬ್ಯಾಂಗಲ್ ಬಂಗಾರಿ)
3. ಶೋಭಿ ಪೌಲ್ರಾಜ್ (ಮಾರ್ಕ್, ಮಸ್ತ್ ಮಲ್ಲೈಕಾ)
4. ವಿನಾಯಕ ಆಚಾರ್ಯ (ಸು ಫ್ರಮ್ ಸೋ, ಥ್ಯಾಂಕ್ಸ್ ಆಂಥಮ್)
5. ಯಶವಂತ್ ಮಾಸ್ಟರ್ ( ಬ್ರಾಟ್, ಗಂಗಿ ಗಂಗಿ)
ಅತ್ಯುತ್ತಮ ಸಂಕಲನ (Best Editing)
1. ಶಶಾಂಕ್ ನಾರಾಯಣ (ರಿಪ್ಪನ್ ಸ್ವಾಮಿ)
2. ಸುರೇಶ್ ಮಲ್ಲಯ್ಯ (ಕಾಂತಾರ: ಚಾಪ್ಟರ್ 1)
3. ಆಶಿಕ್ ಕುಸುಗಳ್ಳಿ (ಗತ ವೈಭವ)
4. ಕೆಎಂ ಪ್ರಕಾಶ್ (ಏಳುಮಲೆ)
5. ಭರತ್ ಎಂಸಿ (ಅಜ್ಞಾತ ವಾಸಿ)
ಅತ್ಯುತ್ತಮ ಸಂಭಾಷಣೆ (Best Dialogues)
1. ಹರೀಶ್ ಗೌಡ (ಫುಲ್ ಮೀಲ್ಸ್)
2. ಜೆಪಿ ತುಮಿನಾಡ್ ( ಸು ಫ್ರಮ್ ಸೋ)
3. ಭೀಮರಾವ್ ಪಿ (ಹೆಬ್ಬುಲಿ ಕಟ್)
4. ರಿಷಬ್ ಶೆಟ್ಟಿ, ಅನಿರುದ್ಧ ಮಹೇಶ್ ಮತ್ತು ಶನೀಲ್ ಗೌತಮ್ (ಕಾಂತಾರ: ಚಾಪ್ಟರ್ 1)
5. ಕೃಷ್ಣ ರಾಜ್ ( ಅಜ್ಞಾತವಾಸಿ)
ಅತ್ಯುತ್ತಮ ಛಾಯಾಗ್ರಹಣ (Best Cinematography)
1. ಅರವಿಂದ್ ಎಸ್ ಕಶ್ಯಪ್ (ಕಾಂತಾರ: ಚಾಪ್ಟರ್ 1)
2. ಅಭಿಲಾಶ್ ಕಲಾಥಿ (ಫೈರ್ ಫ್ಲೈ )
3. ಶೇಖರ್ ಚಂದ್ರ (ಮಾರ್ಕ್)
4. ಸತ್ಯ ಹೆಗಡೆ (45 ದ ಮೂವಿ)
5. ವಿಲಿಯಂ ಡೇವಿಡ್ ( ಗತ ವೈಭವ)
ಅತ್ಯುತ್ತಮ ಗಾಯಕಿ (Best Singer – Female)
1. ಚೈತ್ರಾ ಜೆ ಆಚಾರ್ (ಸು ಫ್ರಮ್ ಸೋ, ಹೆಣ್ಣು )
2. ಸಾನ್ವಿ ಸುದೀಪ್ (ಮಾರ್ಕ್, ಮಸ್ತ್ ಮಲ್ಲೈಕಾ)
3. ಇಂದು ನಾಗರಾಜ್ (ಬ್ರಾಟ್, ಗಂಗಿ ಗಂಗಿ)
4. ಮಂಗ್ಲಿ (ಏಳುಮಲೆ, ಕಾಪಾಡೋ ದ್ಯಾವರೆ)
5. ಸುನಿಧಿ ಗಣೇಶ್ (ಗತ ವೈಭವ, ವರ್ಣಮಾಲೆ)
ಅತ್ಯುತ್ತಮ ಗಾಯಕ (Best Singer – Male)
1. ಅಬ್ಬಿ ವಿ (ಕಾಂತಾರ: ಚಾಪ್ಟರ್ 1, ಬ್ರಹ್ಮ ಕಲಶ)
2. ಮೈಮ್ ರಾಮದಾಸ್ (ಕಾಂತಾರ: ಚಾಪ್ಟರ್ 1, ರೆಬಲ್ ಸಾಂಗ್)
3. ಸಿದ್ಧ್ ಶ್ರೀರಾಮ್ (ಬ್ರಾಟ್, ನಾನೇ ನೀನಂತೆ)
4. ಆಂಟನಿ ದಾಸನ್ (ಎಕ್ಕಾ, ಬ್ಯಾಂಗಲ್ ಬಂಗಾರಿ)
5. ವಿ.ಎಂ ಮಹಾಲಿಂಗಂ (ಏಳುಮಲೆ, ಶೀರ್ಷಿಕೆ ಹಾಡು)
ಅತ್ಯುತ್ತಮ ಸಾಹಿತ್ಯ (Best Lyrics)
1. ಶಶಿರಾಜ್ ಕಾವೂರು (ಕಾಂತಾರ: ಚಾಪ್ಟರ್ 1, ಬ್ರಹ್ಮ ಕಲಶ)
2. ನಾಗಾರ್ಜುನ್ ಶರ್ಮಾ (ಎಕ್ಕ, ಬ್ಯಾಂಗಲ್ ಬಂಗಾರಿ)
3. ಸಿಂಪಲ್ ಸುನಿ ( ಗತವೈಭವ)
4. ಯೋಗರಾಜ್ ಭಟ್ (ಮನದ ಕಡಲು, ಹೂ ದುಂಬಿ)
5. ಶಶಾಂಕ್ ( ಬ್ರಾಟ್, ನಾನೇ ನೀನಂತೆ)
ಅತ್ಯುತ್ತಮ ಹಿನ್ನೆಲೆ ಸಂಗೀತ (Best BGM)
1. ಚರಣ್ ರಾಜ್ (ಎಕ್ಕ)
2. ಅಜನೀಶ್ ಲೋಕನಾಥ್ (ಕಾಂತಾರ: ಚಾಪ್ಟರ್ 1)
3. ಡಿ ಇಮ್ಮಾನ್ (ಏಳುಮಲೆ)
4. ಸಂದೀಪ್ ತುಳಸಿದಾಸ್ (ಸು ಫ್ರಮ್ ಸೋ)
5. ಅರ್ಜುನ್ ಜನ್ಯ (ಬ್ರಾಟ್)
ಅತ್ಯುತ್ತಮ ಸಂಗೀತ (Best Music)
1. ಅಜನೀಶ್ ಲೋಕನಾಥ್ (ಕಾಂತಾರ: ಚಾಪ್ಟರ್ 1)
2. ಚರಣ್ ರಾಜ್ (ಎಕ್ಕ)
3. ಅರ್ಜುನ್ ಜನ್ಯ (ಬ್ರಾಟ್)
4. ಸುಮೇಧ್ ಕೆ (ಸು ಫ್ರಮ್ ಸೋ)
5. ಡಿ ಇಮ್ಮಾನ್ (ಏಳುಮಲೆ)
ಅತ್ಯುತ್ತಮ ಚಿತ್ರಕಥೆ (Best Screenplay)
1. ಸುಮಂತ್ ಭಟ್ (ಮಿಥ್ಯ)
2. ರಿಷಬ್ ಮತ್ತು ತಂಡ (ಕಾಂತಾರ: ಚಾಪ್ಟರ್ 1)
3. ಜೆಪಿ ತುಮಿನಾಡ್ (ಸು ಫ್ರಮ್ ಸೋ)
4. ಪುನೀತ್ ರಂಗಸ್ವಾಮಿ (ಏಳುಮಲೆ)
5. ಭೀಮರಾವ್ ಮತ್ತು ಅನಂತ್ ಶಾಂದ್ರೆಯ (ಹೆಬ್ಬುಲಿ ಕಟ್)
ಅತ್ಯುತ್ತಮ ಪೋಷಕ ನಟಿ (Best Supporting Actress)
1. ಮೇಘನಾ ಗಾಂವ್ಕರ್ (ಛೂ ಮಂತರ್)
2. ಅರ್ಚನಾ ಕೊಟ್ಟಿಗೆ (ಫಾರೆಸ್ಟ್)
3. ಶ್ರುತಿ (ಎಕ್ಕ)
4. ಶ್ರುತಿ (ಮಾದೇವ)
5. ಸಂಧ್ಯಾ ಅರಕೆರೆ (ಸು ಫ್ರಮ್ ಸೋ)
ಅತ್ಯುತ್ತಮ ಪೋಷಕ ನಟ (Best Supporting Actor)
1. ರಾಜ್ ಬಿ ಶೆಟ್ಟಿ (ಸು ಫ್ರಮ್ ಸೋ)
2. ಕಿಶೋರ್ (ಏಳುಮಲೆ)
3. ಗುಲ್ಶನ್ ದೇವಯ್ಯ (ಕಾಂತಾರ: ಚಾಪ್ಟರ್ 1)
4. ಶನೀಲ್ ಗೌತಮ್ (ಸು ಫ್ರಮ್ ಸೋ)
5. ಮಹಾಂತೇಶ್ ಹಿರೇಮಠ್ (ಹೆಬ್ಬುಲಿ ಕಟ್)
ಅತ್ಯುತ್ತಮ ನಟಿ (Best Actress)
1. ರುಕ್ಮಿಣಿ ವಸಂತ್ (ಕಾಂತಾರ: ಚಾಪ್ಟರ್ 1)
2. ಅಂಜಲಿ ಅನೀಶ್ (ಮನದ ಕಡಲು)
3. ಸೋನಲ್ ಮೊಂತೆರೋ (ಮಾದೇವ)
4. ರೇಷ್ಮಾ ಎಲ್ (ಲವ್ ಯು ಮುದ್ದು)
5. ಆಶಿಕಾ ರಂಗನಾಥ್ (ಗತ ವೈಭವ)
ಅತ್ಯುತ್ತಮ ನಟ (Best Actor)
1. ವಿನೋದ್ ಪ್ರಭಾಕರ್ (ಮಾದೇವ)
2. ಡಾರ್ಲಿಂಗ್ ಕೃಷ್ಣ (ಬ್ರಾಟ್)
3. ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
4. ದರ್ಶನ್ (ದ ಡೆವಿಲ್)
5. ಸುದೀಪ್ (ಮಾರ್ಕ್)
ಅತ್ಯುತ್ತಮ ನಿರ್ದೇಶನ (Best Direction)
1. ರಿಷಬ್ ಶೆಟ್ಟಿ (ಕಾಂತಾರ: ಚಾಪ್ಟರ್ 1)
2. ಪುನೀತ್ ರಂಗಸ್ವಾಮಿ ( ಏಳುಮಲೆ)
3. ಜೆಪಿ ತುಮಿನಾಡ್ ( ಸು ಫ್ರಮ್ ಸೋ)
4. ಭೀಮರಾವ್ (ಹೆಬ್ಬುಲಿ ಕಟ್)
5. ಸುಮಂತ್ ಭಟ್ (ಮಿಥ್ಯ)
ಅತ್ಯುತ್ತಮ ಚಲನಚಿತ್ರ (Best Film)
1. ಏಳುಮಲೆ
2. ಮಿಥ್ಯ
3. ಕಾಂತಾರ: ಚಾಪ್ಟರ್ 1
4. ಹೆಬ್ಬುಲಿ ಕಟ್
5. ಮಾದೇವ
