ಮೈ ಕೊಡವಿ ಫೀನಿಕ್ಸ್‌ನಂತೆ ಎದ್ದು ಬರ್ತಿದ್ದಾರೆ ನ್ಯಾಷನಲ್ ಕ್ರಶ್ ರಶ್ಮಿಕಾ ಭಾವಿ ಪತಿ ವಿಜಯ್ ದೇವರಕೊಂಡ. ಯೆಸ್.. ಆರು ವರ್ಷಗಳಿಂದ ಬಿಗ್ ಬ್ರೇಕ್‌ಗಾಗಿ ಎದುರು ನೋಡ್ತಿರೋ ರೌಡಿ ವಿಜಯ್, ಸದ್ಯ ರಾಕ್ಷಸರ ಕಿಂಗ್‌ಡಮ್‌ಗೆ ಕಿಂಗ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಕಿಂಗ್‌ಡಮ್ ಟ್ರೈಲರ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಒಳಗಿರೋ ಅಸಲಿ ಕಹಾನಿ ಇಲ್ಲಿದೆ ನೋಡಿ.
- ರಾಕ್ಷಸರ ‘ಕಿಂಗ್‌ಡಮ್’ಗೆ ವಿಜಯ್ ದೇವರಕೊಂಡ ರಾಜ
- ಇದು ಈ ಜನರೇಷನ್‌ನ ‘ಸಹೋದರರ ಸವಾಲ್’ ಗುರು..!
- ಸ್ಪೈ ಆ್ಯಕ್ಷನ್ ಡ್ರಾಮಾ ಪ್ರಪಂಚಕ್ಕೆ ಕೊಂಡೊಯ್ಯಲಿರೋ ರೌಡಿ
- ಈ ಪ್ರಾಜೆಕ್ಟ್‌ಗಾಗಿ ಬೆವರಿನ ಜೊತೆ ರಕ್ತ ಹರಿಸಿರೋ ವಿಜಯ್
ಯೆಸ್.. ಇದು ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಟಾಲಿವುಡ್ ಎಂಟರ್‌ಟೈನರ್ ಕಿಂಗ್‌ಡಮ್ ಚಿತ್ರದ ಟ್ರೈಲರ್ ಝಲಕ್. ತಿರುಪತಿಯಲ್ಲಿ ನಡೆದ ಗ್ರ್ಯಾಂಡ್ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿ ರಾತ್ರಿ ಲಾಂಚ್ ಆದ ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾದ ಮೈಂಡ್ ಬ್ಲೋಯಿಂಗ್ ಟ್ರೈಲರ್. ವಿಜಯ್ ದೇವರಕೊಂಡ ಈ ಚಿತ್ರಕ್ಕಾಗಿ ಬೆವರಿನ ಜೊತೆ ರಕ್ತ ಕೂಡ ಸುರಿಸಿದ್ದು, ಟ್ರೈಲರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ಅದು ಎದ್ದು ಕಾಣ್ತಿದೆ.
ಗೌತಮ್ ತಿನ್ನನೂರಿ ನಿರ್ದೇಶನದ ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಒಂದು ಎಮರ್ಜೆನ್ಸಿ ಆಪರೇಷನ್‌ಗಾಗಿ ಅಂಡರ್‌ಕವರ್ ಸ್ಪೈ ಆಗ್ತಾರೆ. ಅದಕ್ಕಾಗಿ ಆತ ತಾಯಿ, ಕುಟುಂಬ, ಊರು, ಪ್ರೀತಿ, ಕೆಲಸ ಎಲ್ಲವನ್ನೂ ಬಿಟ್ಟುಕೊಡಬೇಕಾಗುತ್ತೆ. ಆತ ಕಾಲಿಡ್ತಿರೋ ಪ್ರಪಂಚ, ಭೇಟಿ ಆಗ್ತಿರೋ ಮನುಷ್ಯರು, ಎದುರಿಸಿಬೇಕಿರೋ ಪರಿಸ್ಥಿತಿ ತುಂಬಾನೇ ರಿಷ್ಕಿ.
ಸ್ಪೈ ಆಗಿ ಹೊರಡುವ ಸೂರಿ ಪಾತ್ರಧಾರಿ ವಿಜಯ್ ದೇವರಕೊಂಡ ತನ್ನ ಸ್ವಂತ ಅಣ್ಣನನ್ನೇ ಎದುರಿಸಬೇಕಾಗುತ್ತೆ. ಹೌದು.. ಶಿವ ಅನ್ನೋ ಮೋಸ್ಟ್ ವಾಂಟೆಡ್ ಕ್ರಿಮಿನಲ್, ಸ್ಮಗ್ಲರ್ ಆಗಿರೋ ಸಹೋದರನ ಜೊತೆ ಸೆಣಸಾಡಬೇಕಾಗುತ್ತೆ. ಅಂದಹಾಗೆ ದೇವರಕೊಂಡ ಅಣ್ಣನಾಗಿ ಸತ್ಯದೇವ್ ಮಿಂಚು ಹರಿಸಿದ್ದಾರೆ. ನಿಮ್ಮಣ್ಣ ನಿನಗೆ ದೇವರಾಗ್ತಾನೇನೋ ಗೊತ್ತಿಲ್ಲ, ಆದ್ರೆ ವಾಸ್ತವಕ್ಕೆ ಆತ ರಾಕ್ಷಸ ಎನ್ನುವ ನಾಯಕನಟಿ ಭಾಗ್ಯಶ್ರೀ ಬೋರ್ಸ್ ಜೊತೆ ನವಿರಾದ ಪ್ರೇಮಕಥೆ. ಹೀಗೆ ಸಿನಿಮಾ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಲಿದೆ.
ಮಿಲಿಟರಿ ಆಫೀಸರ್ ಕಾಸ್ಟ್ಯೂಮ್‌ನಲ್ಲಿ ವಿಜಯ್ ಇಂಪ್ರೆಸ್ಸೀವ್ ಆಗಿ ಕಾಣಸಿಗ್ತಾರೆ. ಅದ್ರಲ್ಲೂ ಶಾರ್ಟ್ ಹೇರ್‌ನಲ್ಲಿ ಡೆಡ್ಲಿ ಅಂಡ್ ಡೇರಿಂಗ್ ಲುಕ್‌ನಿಂದ ಕಿಕ್ ಕೊಡ್ತಿದ್ದಾರೆ ದೇವರಕೊಂಡ. ಟ್ರೈಲರ್ ಸದ್ಯ ಸಿನಿಮಾ ನೋಡುವ ಕಾತುರತೆ ಹೆಚ್ಚಿಸಿದ್ದು, ಟೀಸರ್ ಹಾಗೂ ಸಾಂಗ್ಸ್ ಈಗಾಗ್ಲೇ ಎಲ್ಲರ ದಿಲ್ ದೋಚಿವೆ. 130 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾಗಿರೋ ಈ ಕಿಂಗ್‌ಡಮ್ ಇದೇ ಜುಲೈ 31ಕ್ಕೆ ತೆರೆಗಪ್ಪಳಿಸುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕೋಟಿ ಗಳಿಸುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಸುಮಾರು ಆರೇಳು ವರ್ಷಗಳಿಂದ ಒಂದು ಬಿಗ್ ಸಕ್ಸಸ್‌ಗಾಗಿ ಎದುರು ನೋಡ್ತಿರೋ ವಿಜಯ್ ದೇವರಕೊಂಡಗೆ ಈ ಸಿನಿಮಾ ಕಂಡಿತಾ ಪ್ರೇಕ್ಷಕರ ಮನಸ್ಸು ಗೆಲ್ಲುವ ಲಕ್ಷಣ ತೋರಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಕೈ ಹಿಡಿಯಲಿರೋ ವಿಜಯ್‌ಗೆ ಇದರಿಂದ ಬಹುದೊಡ್ಡ ವಿಜಯ ಬೇಕಾಗಿದೆ. ಒಂದ್ಕಡೆ ಭಾವಿ ಪತ್ನಿ ಸಕ್ಸಸ್ ಮೇಲೆ ಸಕ್ಸಸ್ ಪಡೆಯುತ್ತಿದ್ರೆ, ತಾನು ಮಾತ್ರ ಪ್ಲಾಪ್ ಸ್ಟಾರ್ ಅನಿಸಿಕೊಳ್ಳೋಕೆ ತಯಾರಿಲ್ಲ ದೇವರಕೊಂಡ. ಸೋ.. ಕಿಂಗ್‌ಡಮ್ ಮೂಲಕ ಮತ್ತೆ ಬಾಕ್ಸ್ ಆಫೀಸ್ ಕಿಂಗ್ ಆಗ್ತಾರಾ ಅನ್ನೋದನ್ನ ಕಾದು ನೋಡೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್