ತ್ರಿಷಾ-ವಿಜಯ್ ಬ್ರೇಕಪ್!? ಬರ್ತ್‌ಡೇ ವಿಶ್ ಇಲ್ಲ..ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿದ ನಟಿ

Untitled design 2026 06 23T205956.835

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಖ್ಯಾತ ನಟ ವಿಜಯ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ತ್ರಿಷಾ ಅವರ ನಡೆಯು ಸಿನಿವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತ್ರಿಷಾ ಅವರು ವಿಜಯ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿಲ್ಲ ಮತ್ತು ಅವರನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಈ ಬೆಳವಣಿಗೆಯು ‘ಗಿಲ್ಲಿ’ ಜೋಡಿಯ ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ.

‘ಗಿಲ್ಲಿ’ ಜೋಡಿಯ ಪ್ರೇಮ ವದಂತಿಗಳು

ತ್ರಿಷಾ ಮತ್ತು ವಿಜಯ್ ಅವರು ‘ಗಿಲ್ಲಿ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಅವರ ಅಭಿನಯ ಅಭಿಮಾನಿಗಳ ಮನಸ್ಸನ್ನು ಗೆದ್ದಿತ್ತು. ಅಂದಿನಿಂದಲೂ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಅಭಿಮಾನಿಗಳು ಅವರಿಬ್ಬರನ್ನು ಆನ್-ಸ್ಕ್ರೀನ್ ಮತ್ತು ಆಫ್-ಸ್ಕ್ರೀನ್ ಎರಡರಲ್ಲೂ ಉತ್ತಮ ಜೋಡಿ ಎಂದು ಬಣ್ಣಿಸುತ್ತಿದ್ದರು. ಆದರೆ ಕೆಲವು ಅಭಿಮಾನಿಗಳು ಅವರಿಬ್ಬರೂ ಕೇವಲ ಒಳ್ಳೆಯ ಸ್ನೇಹಿತರು ಮಾತ್ರ ಎಂದೂ ವಾದಿಸುತ್ತಿದ್ದರು. 

ವಿಜಯ್ ಬರ್ತ್‌ಡೇಗೆ ತ್ರಿಷಾ ಮೌನ

ವಿಜಯ್ ಅವರ ಹುಟ್ಟುಹಬ್ಬದ ದಿನದಂದು ತ್ರಿಷಾ ಏನು ಮಾಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ತ್ರಿಷಾ ಅವರು ಯಾರೂ ಊಹಿಸದ ರೀತಿಯಲ್ಲಿ ನಡೆದುಕೊಂಡಿದ್ದಾರೆ. ವಿಜಯ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರುವುದನ್ನು ಬಿಟ್ಟು, ಅವರನ್ನು ಇನ್ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

“ವಿಜಯ್ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ತ್ರಿಷಾ ಸಂಪೂರ್ಣ ಮೌನವಾಗಿದ್ದು ಮಾತ್ರವಲ್ಲ, ಅನ್‌ಫಾಲೋ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೇರೆಯಾಗಲು ಕಾರಣವೇನು?

ತ್ರಿಷಾ ಈ ರೀತಿ ವಿಜಯ್ ಅವರಿಂದ ದೂರವಾಗಲು ಹಲವು ಕಾರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ವಿಜಯ್ ಮತ್ತು ತ್ರಿಷಾ ಬೇರೆಯಾಗಿದ್ದಾರೆಯೇ? ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆಯೇ? ಎಂದು ಅಭಿಮಾನಿಗಳು ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

ವರದಿಯ ಪ್ರಕಾರ, ವಿಜಯ್ ಅವರು ತಮ್ಮ ಕುಟುಂಬ ಜೀವನವನ್ನು ಸರಿಪಡಿಸಿಕೊಳ್ಳಲು ಮುಂದಾಗಿದ್ದಾರೆ. ಕುಟುಂಬದ ಹಿರಿಯರ ಸಂಧಾನದ ಬಳಿಕ ವಿಜಯ್ ಅವರು ಸಂಗೀತಾ ಅವರೊಂದಿಗೆ ಮತ್ತೆ ಒಂದಾಗಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಇದೇ ಕಾರಣಕ್ಕೆ ತ್ರಿಷಾ, ವಿಜಯ್ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಅಭಿಮಾನಿಗಳಲ್ಲಿ ಆಕ್ರೋಶ-ನಿರಾಶೆ

ವಿಜಯ್-ತ್ರಿಷಾ ಅಭಿಮಾನಿಗಳು ಇತ್ತೀಚಿನ ಬೆಳವಣಿಗೆಗಳಿಂದ ನಿರಾಶೆಗೊಂಡಿದ್ದಾರೆ. “ಅವರಿಬ್ಬರ ಸ್ನೇಹ ಅಷ್ಟೊಂದು ಸುಂದರವಾಗಿತ್ತು. ಇದ್ದಕ್ಕಿದ್ದಂತೆ ಏನಾಯ್ತು?” ಎಂದು ಹಲವು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ತ್ರಿಷಾ ಮೌನ, ವಿಜಯ್ ನೋ ರಿಯಾಕ್ಷನ್!

ತ್ರಿಷಾ ಅವರಿಂದ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ವಿಜಯ್ ಅವರೂ ಸಹ ಈ ವಿಚಾರವಾಗಿ ಮೌನವಾಗಿದ್ದಾರೆ. ತಮಿಳು ಚಲನಚಿತ್ರ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯನ್ನು ಕುರಿತು ಚರ್ಚಿಸುತ್ತಿದ್ದು, ಹಲವು ಊಹಾಪೋಹಗಳು ಹರಿದಾಡುತ್ತಿವೆ.

Exit mobile version