ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಕಲ್ಟ್ ಕ್ಲಾಸಿಕ್ ಬಲರಾಮನ ದಿನಗಳು ಚಿತ್ರದ ಕ್ರೇಜ್ ಈಗ ಗಡಿ ದಾಟಿದೆ. ಕನ್ನಡದಲ್ಲಿ ಧ್ರುವ ಸರ್ಜಾ ಟ್ರೈಲರ್ ಲಾಂಚ್ ಮಾಡಿ ಓಂಕಾರ ಹಾಕಿದ್ರೆ, ಟಾಲಿವುಡ್ ಸ್ಟಾರ್ ರಾಣಾ ದಗ್ಗುಬಾಟಿ ಟ್ರೈಲರ್ ರಿಲೀಸ್ ಮಾಡಿ ಬಲರಾಮನ ಬಲ ಹೆಚ್ಚಿಸಿದ್ದಾರೆ. ಈ ಭರ್ಜರಿ ಆ್ಯಕ್ಷನ್ ಧಮಾಕಾದ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
- ರಾಣಾ-ಧ್ರುವ ಶ್ರೀಕಾರ..ಬಲರಾಮನ ಭೂಗತಕ್ಕೆ ಸ್ಟಾರ್ಸ್ ಸಾಥ್
- ವಿನೋದ್ ಪ್ರಭಾಕರ್ ಹೆಲ್ತ್ ರೂಮರ್ಸ್‌ಗೆ ಡೈರೆಕ್ಟರ್ ಬ್ರೇಕ್..!
- ಸಂತೋಷ್ ಮ್ಯೂಸಿಕ್ ಕಿಕ್.. ಪ್ರಿಯಾ ಆನಂದ್ ಕನ್ನಡ ರಾಕ್ಸ್
- 100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಲರಾಮ ಗ್ರ್ಯಾಂಡ್ ಎಂಟ್ರಿ
2007ರ ಸೂಪರ್ ಹಿಟ್ ಆ ದಿನಗಳು ಚಿತ್ರದ ಮುಂದುವರಿದ ಅಧ್ಯಾಯವಾಗಿ ಮೂಡಿಬಂದಿರುವ ಬಲರಾಮನ ದಿನಗಳು ಚಿತ್ರದ ಕಲ್ಟ್ ಟ್ರೈಲರ್‌ಗೆ ಸೌತ್ ಇಂಡಸ್ಟ್ರಿಯ ದೈತ್ಯ ನಟರು ಬೆನ್ನೆಲುಬಾಗಿ ನಿಂತಿದ್ದಾರೆ. ವಿನೋದ್ ಪ್ರಭಾಕರ್ ಅಭಿನಯಿಸಿರುವ ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಅನಾರೋಗ್ಯದ ಕಾರಣ ಸುದ್ಧಿಗೋಷ್ಠಿಗೆ ಗೈರಾಗಿದ್ದ ವಿನೋದ್ ಹೆಲ್ತ್ ಕುರಿತು ನಿರ್ದೇಶಕ ಚೈತನ್ಯ ಮಾತನಾಡಿದ್ರು. ಇನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟ್ರೈಲರ್ ಲಾಂಚ್ ಮಾಡಿ ಜಸ್ಟ್ ವಾವ್, ಪಕ್ಕಾ ಆ ದಿನಗಳು ವೈಬ್ಸ್ ಸಿಗುತ್ತಿದೆ ಎಂದು ಕೊಂಡಾಡಿದ್ದರೆ.
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ವೇಣು ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ. ವಿನೋದ್ ಗೆ ಜೋಡಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದು ಇದು ಅವರ 5ನೆ ಕನ್ನಡ ಸಿನಿಮಾ ಎಂದು ಹೇಳಿಕೊಂಡ್ರು. ಕೆವಿಎನ್ ಪ್ರೊಡಕ್ಷನ್ಸ್‌ನ ಸುಪ್ರೀತ್ ಚಿತ್ರದ ವಿತರಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು, ಮಲ್ಟಿಪ್ಲೆಕ್ಸ್ ಹೊರತುಪಡಿಸಿ ಕರ್ನಾಟಕದಾದ್ಯಂತ ಬರೋಬ್ಬರಿ 100ಕ್ಕೂ ಹೆಚ್ಚು ಸಿಂಗಲ್ ಸ್ಕ್ರೀನ್‌ಗಳಲ್ಲಿ ಚಿತ್ರವನ್ನು ಅತ್ಯಂತ ಭರ್ಜರಿಯಾಗಿ ಜೂನ್ 26ರಂದು ರಿಲೀಸ್ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಪ್ಯಾನ್-ಇಂಡಿಯಾ ಸ್ಟಾರ್ ರಾಣಾ ದಗ್ಗುಬಾಟಿ ಚಿತ್ರದ ಟ್ರೈಲರ್ ಅನ್ನು ಡಿಜಿಟಲ್ ಆಗಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪದ್ಮಾವತಿ ಫಿಲಂಸ್ ಬ್ಯಾನರ್‌ನಡಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸಿರುವ ಈ ಚಿತ್ರವು 80ರ ದಶಕದ ಭೂಗತ ಜಗತ್ತಿನ ಕಥೆ ಹೊಂದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ, ಆಶೀಶ್ ವಿದ್ಯಾರ್ಥಿ, ವಿನಯ್ ಗೌಡ, ರಜತ್ ರಂತಹ ಕಲಾವಿದರ ತಾರಾಗಣವನ್ನು ಹೊಂದಿದೆ. ಜೂನ್ 26ರಂದು ತೆರೆಗೆ ಬರುತ್ತಿರುವ ಈ ಕಲ್ಟ್ ಕ್ಲಾಸಿಕ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಧಮಾಕಾ ಮಾಡಲಿದೆ ಅನ್ನೋದನ್ನ ನಾವೆಲ್ಲರೂ ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
