ಕನ್ನಡದಲ್ಲಿ ಇದೇ ಮೊದಲನೇ ಬಾರಿಗೆ ಲ್ಯಾಟಿನ್ ಅಮೇರಿಕನ್ ಕತೆಗಳು..!

Untitled design 2025 10 15t230449.833

ಪ್ರಚಲಿನ ಸೈದ್ಧಾಂತಿಕ ವಾದಗಳ ಆಸರೆ ಇಲ್ಲದೆ ಬರೆಯಬಲ್ಲ ನಾನ್ ಅಕಾಡೆಮಿಕ್ ಬರಹಗಾರರೆಂದೇ ಖ್ಯಾತರಾದವರು ಎಂ.ಎಸ್.ಶ್ರೀರಾಮ್ ಅವರು. ಯು.ಆರ್ ಅನಂತಮೂರ್ತಿ ಅವರು ಎಂಎಸ್ ಶ್ರೀರಾಮ್ ಅವರ ಕುರಿತಂತೆ ಹೀಗೆ ಹೇಳಿದ್ದಾರೆ. “ಬರಹಗಳಲ್ಲಿ ಭಾವಗಳ ಅತಿಪ್ರದರ್ಶನವಾಗಲಿ, ಸೋಗಾಗಲಿ ಇರುವುದಿಲ್ಲ. ಬದಲಾಗಿ ನಿರುದ್ವೇಗಗೊಳ್ಳದಂತೆ ತಣ್ಣಗೆ ಸಹಾನುಭೂತಿಯಿಂದ, ಮನುಷ್ಯನ ಅತಿರೇಕಗಳನ್ನೂ, ವಕ್ರತೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುವುದು ಅವರ ಕಥನ ಕ್ರಮದ ದೊಡ್ಡ ಒಳನೋಟ”.

ಹೀಗೆ ತನ್ನದೇ ಆದ ವಿಶಿಷ್ಠ ಶೈಲಿಯ ಮೂಲಕ ಮಹತ್ವದ ಸಾಹಿತಿಯಾಗಿರುವ ಎಂ.ಎಸ್.ಶ್ರೀರಾಮ್ ಅವರು ವೀರಲೋಕದ ಭಾಗಿಯಾಗುತ್ತಿದ್ದಾರೆ. ಕನ್ನಡದಲ್ಲಿ ಇದೇ ಮೊದಲನೇ ಬಾರಿಗೆ ಲ್ಯಾಟಿನ್ ಅಮೇರಿಕನ್ ಕತೆಗಳ ಸಮೃದ್ಧ ಸಂಕಲನದ ಮೂಲಕ ಅವರು ಓದುಗರನ್ನು ತಲುಪುತ್ತಿದ್ದಾರೆ. ಅವರನ್ನು ಆತ್ಮೀಯವಾಗಿ ವೀರಲೋಕಕ್ಕೆ ಸ್ವಾಗತಿಸುತ್ತೇವೆ.

ಈಗಾಗಲೇ ಹೇಳಿದಂತೆ, ಪುಸ್ತಕ ಸಂತೆಯ ಪುಸ್ತಕಗಳು ನಿಮ್ಮ ನಿರೀಕ್ಷೆಯ ಓದಿಗೆ ಮೋಸ ಮಾಡುವುದಿಲ್ಲ. ಪುಸ್ತಕ ಸಂತೆ ಪುಸ್ತಕಗಳಿಂದಲೇ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿದೆ. ಸಂತೆಗಾಗಿ ಬಿಡುಮಾಡಿಕೊಳ್ಳಿ…
ನವೆಂಬರ್ 14,15 ಮತ್ತು 16 ರಂದು ನಡೆಯಲಿದೆ. 
ಶಾಲಿನಿ ಮೈದಾನ, ಜಯನಗರ. ಬೆಂಗಳುರು.

ನಿಮ್ಮ
ವೀರಕಪುತ್ರ ಶ್ರೀನಿವಾಸ

Exit mobile version