ವಾಯುಪುತ್ರ 3ಡಿ ಅನಿಮೇಷನ್ ಸಿನಿಮಾ: ದಸರಾಗೆ ಪಂಚ ಭಾಷೆಯಲ್ಲಿ ಗ್ರ್ಯಾಂಡ್ ರಿಲೀಸ್!

Untitled design (65)

ಭಾರತೀಯ ಚಿತ್ರರಂಗದಲ್ಲಿ ಹನುಮಾನ್‌ನ ಸಾಹಸ ಕಥೆಗಳು ಯಾವಾಗಲೂ ಸೂಪರ್‌ಹಿಟ್‌ ಆಗಿವೆ. ಇದೀಗ ವಾಯುಪುತ್ರ ಶೀರ್ಷಿಕೆಯಡಿಯಲ್ಲಿ ಒಂದು 3ಡಿ ಅನಿಮೇಷನ್ ಸಿನಿಮಾ ಬೆಳ್ಳಿತೆರೆಗೆ ಸಜ್ಜಾಗಿದೆ. ಈ ಚಿತ್ರವು ದಸರಾ ಹಬ್ಬದ ಸಂದರ್ಭದಲ್ಲಿ ತೆಲುಗು, ಕನ್ನಡ, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸಿತಾರಾ ಎಂಟರ್ಟೈನ್ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನಡಿ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಾಣದ ಈ ಚಿತ್ರವನ್ನು ಕಾರ್ತಿಕೇಯ, ಕಾರ್ತಿಕೇಯ-2, ಮತ್ತು ತಂಡೇಲ್ ಚಿತ್ರಗಳ ನಿರ್ದೇಶಕ ಚಂದೂ ಮೊಂಡೆಟಿ ಸಾರಥ್ಯ ವಹಿಸಿಕೊಂಡಿದ್ದಾರೆ. ಶ್ರೀಕರ ಸ್ಟುಡಿಯೋಸ್ ಈ ಸೂಪರ್‌ಹೀರೋ ಅನಿಮೇಷನ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ.

ಚಿತ್ರತಂಡವು ಈಗಾಗಲೇ ಎರಡು ಆಕರ್ಷಕ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಶೀಘ್ರದಲ್ಲೇ ಟೀಸರ್, ಟ್ರೈಲರ್, ಮತ್ತು ಇತರ ಅಪ್‌ಡೇಟ್‌ಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆ. ವಾಯುಪುತ್ರ ಚಿತ್ರವು ತಾಂತ್ರಿಕ ಗುಣಮಟ್ಟ, ದೃಶ್ಯ ವೈಭವ, ಮತ್ತು ಸಾಹಸ ಕಥಾನಕದೊಂದಿಗೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೆ ಹೊಸ ಅನುಭವವನ್ನುನೀಡಲಿದೆ.

Exit mobile version