ಯುಐ ಹಾಗೂ ಯುಪಿಪಿ ಬಗ್ಗೆ ಪಾಠ ಮಾಡಿದ್ದ ರಿಯಲ್ ಟೆಕ್ನಾಲಜಿ ಮಾಸ್ಟರ್ ಉಪೇಂದ್ರಗೆ ಡಿಜಿಟಲ್ ಹ್ಯಾಕರ್ಸ್ ಅಕ್ಷರಶಃ ಶಾಕ್ ನೀಡಿದ್ದಾರೆ. ಉಪೇಂದ್ರ ದಂಪತಿಯ ಫೋನ್‌ಗಳನ್ನ ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ಪೀಕಿದ್ದಾರೆ. ನೆನಪಿರಲಿ ಇದು AI ಯುಗ. ಟೆಕ್ನಾಲಜಿ ಹುಚ್ಚಿಗೆ ದಾಸರಾದ್ರೆ, ನಡು ರಸ್ತೆಯಲ್ಲಿ ಬೆತ್ತಲಾಗೋದು ಗ್ಯಾರಂಟಿ.
ತಂತ್ರಜ್ಞಾನ ನಿಜಕ್ಕೂ ವರವೂ ಹೌದು..ಶಾಪವೂ ಹೌದು. ಯಾವುದೇ ಒಂದು ಟ್ರೆಂಡಿಂಗ್ ಅನಿಸಿದಾಗ ಅದ್ರಿಂದ ಒಳ್ಳೆಯದೆಷ್ಟಾಗುತ್ತದೋ, ಪ್ರತಿಕೂಲ ಪರಿಣಾಮ ಕೂಡ ಅಷ್ಟೇ ಬೀರಲಿದೆ. . ಇದನ್ನ ನಾವ್ಯಾಕೆ ಹೇಳ್ತಿದ್ದೀವಿ ಅಂದ್ರೆ, ಇದು ಡಿಜಿಟಲ್ ಯುಗ. ಹತ್ತು ರೂಪಾಯಿ ಕಾಫಿ, ಟೀಗೂ ನಾವು ಯುಪಿಐ ಮಾಡ್ತೀವಿ. ಆದ್ರೆ ಡಿಜಿಟಲ್ ಹ್ಯಾಕರ್ಸ್ ನಮ್ಮ ಅಕೌಂಟ್‌ಗಳನ್ನ, ಫೋನ್ ನಂಬರ್‌ಗಳನ್ನ ಹೇಗೆ ಹ್ಯಾಕ್ ಮಾಡ್ತಾರೆ ಅಂದ್ರೆ, ಅದು ಊಹೆಗೂ ನಿಲುಕದ್ದು.
UI ಉಪ್ಪಿಗೆ UPI ಕಾಟ..ಲಕ್ಷ ಲಕ್ಷ ಪೀಕಿದ ಹ್ಯಾಕರ್ಸ್..!!
ನಟ ಉಪೇಂದ್ರ, ನಟಿ ಪ್ರಿಯಾಂಕಾ ಉಪೇಂದ್ರ ಅಂತಹ ಸ್ಟಾರ್‌ಗಳ ಫೋನ್‌ಗಳನ್ನ ಸೈಬರ್ ಕಳ್ಳರು ಹ್ಯಾಕ್ ಮಾಡ್ತಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಹಾಗೂ ಅವರ ಜೊತೆಗಿದ್ದವರ ಫೋನ್‌ಗಳನ್ನ ಹ್ಯಾಕ್ ಮಾಡಿ, ವಾಟ್ಸಾಪ್ ಮೂಲಕ ಇತರರನ್ನ ಹಣ ಕೇಳಿದ್ದಾರೆ ಸೈಬರ್ ಕಳ್ಳರು. ಅದಕ್ಕೆ ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಹಣ ಕುಟುಂಬಸ್ಥರು ಹಾಗೂ ಆತ್ಮೀಯರು ಹಾಕಿ, ಕಳೆದುಕೊಂಡಿದ್ದಾರೆ ಕೂಡ. ಈ ವಿಷಯ ಖುದ್ದು ಉಪೇಂದ್ರ ದಂಪತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
AI ಹುಚ್ಚಿಗೆ ದಾಸರಾಗಬೇಡಿ..ಬೆತ್ತಲಾಗೋದು ಗ್ಯಾರಂಟಿ
ಹತ್ತು ವರ್ಷಗಳ ಮುಂದಿನ ಭವಿಷ್ಯದ ಬಗ್ಗೆ ಯೋಚಿಸೋ ಸ್ಯಾಂಡಲ್‌ವುಡ್‌ನ ಬುದ್ಧಿವಂತ ಡೈರೆಕ್ಟರ್, ಟೆಕ್ನಾಲಕಿ ಮಾಸ್ಟರ್‌ಮೈಂಡ್ ಉಪೇಂದ್ರ ಅವರೇ ಹೀಗೆ ಮೋಸ ಹೋಗಿದ್ದಾರೆ ಅಂದ್ರೆ ಇನ್ನು ಶ್ರೀಸಾಮಾನ್ಯ ಜನರ ಕಥೆ ಏನಾಗಬೇಕು ನೀವೇ ಹೇಳಿ. ಅಂದಹಾಗೆ ಹಾಲಿವುಡ್ ಚಿತ್ರದಲ್ಲಿ ಉಪೇಂದ್ರ ರೋಬೋಗಳನ್ನೆಲ್ಲಾ ತಂದು ಎಕ್ಸ್‌ಪೆರಿಮೆಂಟ್ ಮಾಡಿದ್ರು. ಯುಐ ಚಿತ್ರದಲ್ಲಿ ಬ್ರೈನ್‌ಗೆ ಕೈ ಹಾಕುವ ಕೆಲಸ ಮಾಡಿದ್ರು. ಟ್ರೋಲ್ ಸಾಂಗ್ ಎಲ್ಲಾ ಮಾಡಿಸಿದ್ರು. ಸದ್ಯ ಈ ಅವರೇ ಟ್ರೋಲ್ ಆಗುವಂತಾಗಿದೆ.
ಟೆಕ್ನಾಲಜಿ ಮಾಸ್ಟರ್ ಉಪ್ಪಿನೇ ಬಿಡದ ಡಿಜಿಟಲ್ ಹ್ಯಾಕರ್ಸ್
ಯುಐ ಸಿನಿಮಾಗೂ ಮುನ್ನ ಯುಪಿಪಿ ಬಗ್ಗೆ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ಮಾಡಿದ್ರು. ಯುಪಿಪಿ ಅಂದ್ರೆ ಉತ್ತಮ ಪ್ರಜಾಕೀಯ ಪಕ್ಷ. ಹಣ ಇಲ್ಲದೆ ರಾಜಕೀಯ ಮಾಡೋದು ಹೇಗೆ ಅನ್ನೋ ಕಾನ್ಸೆಪ್ಟ್ ಮುನ್ನೆಲೆಗೆ ತಂದಿದ್ದರು. ಆದ್ರೀಗ ಯುಪಿಐ ಅನ್ನೋ ಡಿಜಿಟಲ್ ಮನಿ ಟ್ರಾನ್ಸಾಕ್ಷನ್ ಹಾಗೂ ಅದೇ ತಂತ್ರಜ್ಞಾನ ಬುದ್ದಿವಂತನನ್ನೇ ಹ್ಯಾಕ್ ಮಾಡಿರೋದು ನಿಜಕ್ಕೂ ಶಾಕಿಂಗ್.
ಇದೇ ಸೆಪ್ಟೆಂಬರ್ 18ಕ್ಕೆ ಉಪೇಂದ್ರ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ತಿದ್ದಾರೆ. ಕೂಲಿ ಚಿತ್ರದ ನಟನೆಗೆ ಉಪ್ಪಿಗೆ ಪ್ರಶಂಸೆಗಳ ಸುರಿಮಳೆ ಆಗ್ತಿದ್ದು, ಬರ್ತ್ ಡೇ ಸೆಲೆಬ್ರೇಷನ್‌ಗೂ ಮುನ್ನ ಡಿಜಿಟಲ್ ಕಳ್ಳರು ಅವರ ನೆಮ್ಮದಿ ಕೆಡಿಸಿದ್ದಾರೆ. ಅಂದಹಾಗೆ ಇದು AI ಯುಗ. ಎಲ್ಲರೂ ಚೆಂದ ಕಾಣ್ಬೇಕು ಅಂತ ತಮ್ಮ ಫೋಟೋಗಳನ್ನ ಆ್ಯಪ್‌ಗಳಿಗೆ ಹಾಕಿ, ವೆರೈಟಿ ಡಿಸೈನ್‌ಗಳಲ್ಲಿ ಅವುಗಳನ್ನ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಿಕೊಳ್ತಿದ್ದಾರೆ. ಆದ್ರೆ ಆ AIಗೆ ದಾಸರಾಗೋಕೆ ಮುನ್ನ ಎಚ್ಚರ.
AI ಫೋಟೋಸ್‌ಗೆ ಡಿಟೈಲ್ಸ್ ನೀಡೋಕೆ ಮುನ್ನ ಎಚ್ಚರ ಎಚ್ಚರ
ಯಾಕಂದ್ರೆ ನಾವು ಕೆಲ ಆ್ಯಪ್‌ಗಳನ್ನ ಬಳಸೋಕೆ ಮುನ್ನ ನಮ್ಮ ಕಂಪ್ಲೀಟ್ ಡಿಟೈಲ್ಸ್‌ನ ಅವರು ಪಡೀತಾರೆ. ಅಡ್ರೆಸ್, ಈ ಮೇಲ್ ಐಡಿ, ಫೋಟೋಸ್ ಅಕ್ಸೆಸ್ ಹೀಗೆ ಎಲ್ಲವನ್ನೂ ಪಡೆಯುತ್ತಾರೆ. ನಂತ್ರ ನಡೆಯೋದೆಲ್ಲಾ ಅನಾಚಾರಗಳೇ. ಅದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಯಾರದೋ ಫೋಟೋ ಮತ್ಯಾರದೋ ಜೊತೆ ಎಡಿಟ್ ಮಾಡ್ತಾರೆ. ಖುದ್ದು ಮೋದಿ ಬಂದು ಕುರಿ ಕಾಯೋನಿಗೆ ಕಾರ್‌ನಿಂದ ಇಳಿದು ಬಂದು ಶೇಕ್ ಹ್ಯಾಂಡ್ ಮಾಡ್ತಾರೆ. ಹಾಗೆಲ್ಲಾ ಕ್ರಿಯೇಟಿವಿಟಿ ಹದ್ದು ಮೀರುತ್ತಿದೆ. ಸೋ.. ಜಾಗ್ರತೆಯಿಂದ ಇರದೇ ಹೋದಲ್ಲಿ ನಡು ರೋಡಲ್ಲಿ ಬೆತ್ತಲಾಗೋದು ಗ್ಯಾರಂಟಿ. ಸೋ ನಿಮ್ಮ ಡಿಟೈಲ್ಸ್‌ನ ಬೇರೆ ಕಡೆ ನೀಡುವ ಮುನ್ನ ಎಚ್ಚರ ಎಚ್ಚರ ಎಚ್ಚರ.