‘ಅನಿಮಲ್’ ಡೈರೆಕ್ಟರ್ ವಂಗಾ ಕ್ಯಾಂಪ್‌‌ನಲ್ಲಿ ಕನ್ನಡಿಗ ವಾಸುಕಿ

ಪ್ರೇಮಕಾವ್ಯ ‘ರೋಮಾಂಚಕಂ’ಗೆ ವಾಸುಕಿ ಸಂಗೀತ, ಗಾಯನ

ಖ (13)

ಕೆಜಿಎಫ್ ನಂತ್ರ ಪರಭಾಷೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆದ್ರು ಕನ್ನಡದ ಕಂಪೋಸರ್ ರವಿ ಬಸ್ರೂರು. ಇದೀಗ ಮತ್ತೊಬ್ಬ ಕನ್ನಡ ಟ್ಯಾಲೆಂಟ್‌ಗೆ ಗಾಳ ಹಾಕಿದ್ದಾರೆ ಟಾಲಿವುಡ್ ಮಂದಿ. ಅರ್ಜುನ್ ರೆಡ್ಡಿ, ಅನಿಮಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಕ್ಯಾಂಪ್ ಸೇರುವ ಮೂಲಕ ಹುಬ್ಬೇರಿಸಿದ್ದಾರೆ ಕನ್ನಡ ಕಂಪೋಸರ್. ಆತ ಯಾರು..? ಯಾವ ಸಿನಿಮಾ..? ಯಾವ ಸ್ಟಾರ್ ಜೊತೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ…

ನಮ್ಮ ಸ್ಯಾಂಡಲ್‌ವುಡ್ ಟ್ಯಾಲೆಂಟ್ಸ್‌ಗೆ ಪರಭಾಷೆಗಳಲ್ಲಿ ಡಿಮ್ಯಾಂಡೋ ಡಿಮ್ಯಾಂಡ್. ಹೌದು.. ಬರೀ ಕಲಾವಿದರಿಗಷ್ಟೇ ಅಲ್ಲ, ಟೆಕ್ನಿಷಿಯನ್ಸ್‌ಗೂ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಕೆಜಿಎಫ್ ಚಿತ್ರದ ಬಳಿಕ ಮ್ಯೂಸಿಕ್ ಡೈರೆಕ್ಟರ್ ಕಂಪೋಸರ್ ರವಿ ಬಸ್ರೂರು ಮೇಲೆ ಬಾಲಿವುಡ್ ಸಲ್ಮಾನ್ ಖಾನ್, ಟಾಲಿವುಡ್ ಪ್ರಭಾಸ್ ಕಣ್ಣು ಬಿದ್ದಿತ್ತು. ಇನ್‌ಫ್ಯಾಕ್ಟ್ ಅವ್ರ ಸಿನಿಮಾಗಳಿಗೆ ರವಿ ಬಸ್ರೂರು ಕೆಲಸ ಕೂಡ ಮಾಡಿದ್ರು. ಇದೀಗ ಅರ್ಜುನ್ ರೆಡ್ಡಿ, ಅನಿಮಲ್ ಡೈರೆಕ್ಟರ್ ಕಣ್ಣು ಮತ್ತೊಬ್ಬ ಅಪ್ಪಟ ಕನ್ನಡದ ಪ್ರತಿಭೆ ಮೇಲೆ ಬಿದ್ದಿದೆ.

ಇದು ತೆಲುಗಿನ ‘ರೋಮಾಂಚಕಂ’ ಚಿತ್ರದ ಟೀಸರ್ ಝಲಕ್. ‘8 ವಸಂತಾಲು’ ಸಿನಿಮಾ ಖ್ಯಾತಿಯ ಮಲಯಾಳಂ ಚೆಲುವೆ ಅನಂತಿಕಾ ಸಾನಿಲ್‌‌ಕುಮಾರ್ ಹಾಗೂ ಸುಮಂತ್ ಪ್ರಭಾಸ್ ಜೋಡಿಯ ಮಧುರ ಪ್ರೇಮಕಾವ್ಯ. ಇತ್ತೀಚೆಗೆ ಈ ಚಿತ್ರದ ಟೀಸರ್ ಲಾಂಚ್ ಆಗಿತ್ತು. ಇದೀಗ ಮೆಲೋಡಿ ಸಾಂಗ್‌ವೊಂದು ಬಿಡುಗಡೆ ಆಗಿದ್ದು, ವೀವ್ಸ್‌‌ನಲ್ಲಿ ದಾಖಲೆ ಬರೆಯುತ್ತಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ನಮ್ಮ ಕನ್ನಡಿಗ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡೋದ್ರ ಜೊತೆಗೆ ಅವ್ರದ್ದೇ ಕಂಠದಲ್ಲಿ ಅದ್ಭುತವಾಗಿ ಹಾಡಿದ್ದಾರೆ.

ಯೆಸ್.. ನಮ್ಮ ಕನ್ನಡ ಚಿತ್ರರಂಗದಲ್ಲಿ ನಟ, ಗಾಯಕ ಹಾಗೂ ಮ್ಯೂಸಿಕ್ ಕಂಪೋಸರ್ ಆಗಿ ಗುರ್ತಿಸಿಕೊಂಡಿರೋ ವಾಸುಕಿ ವೈಭವ್, ಪಕ್ಕದ ಟಾಲಿವುಡ್‌‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹಾಗಂತ ಇದೇ ಅವ್ರ ಮೊದಲ ತೆಲುಗು ಚಿತ್ರವಲ್ಲ. ಈ ಹಿಂದೆಯೂ ಸಹ ತೆಲುಗು ಸಿನಿಮಾವೊಂದಕ್ಕೆ ಅವರು ರಾಗ ಸಂಯೋಜನೆ ಮಾಡಿದ್ರು. ಆದ್ರೀಗ ಒಂದು ದೊಡ್ಡ ಗ್ಯಾಪ್ ಬಳಿಕ ಟಾಲಿವುಡ್‌‌ನಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ ವಾಸುಕಿ. ಅದೂ ಅರ್ಜುನ್ ರೆಡ್ಡಿ, ಅನಿಮಲ್ ಸಿನಿಮಾಗಳ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಜೊತೆ ಅನ್ನೋದು ವಿಶೇಷ.

‘ರೋಮಾಂಚಕಂ’ ಸಿನಿಮಾಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಪ್ರಣಯ್ ರೆಡ್ಡಿ ವಂಗಾ ಬಂಡವಾಳ ಹೂಡಿದ್ದು, ವೇಣು ಗೋಪಾಲ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖುದ್ದು ಸಂದೀಪ್ ರೆಡ್ಡಿ ವಂಗಾ ಇದನ್ನ ತಮ್ಮದೇ ಬ್ಯಾನರ್‌ನಡಿ ಪ್ರೆಸೆಂಟ್ ಕೂಡ ಮಾಡ್ತಿದ್ದಾರೆ. ರವಿ ಬಸ್ರೂರು ಬಳಿಕ ವಾಸುಕಿ ವೈಭವ್‌ ಮ್ಯೂಸಿಕ್‌‌‌ಗೂ ಪರಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿರೋದು ಕನ್ನಡಿಗರು ಹೆಮ್ಮೆ ಪಡುವ ವಿಷಯ. ಈ ಚಿತ್ರದ ಟೀಸರ್ ಹಾಗೂ ಸಾಂಗ್ ಸಖತ್ ಪ್ರಾಮಿಸಿಂಗ್ ಆಗಿದ್ದು, ಸದ್ಯದಲ್ಲೇ ಸಿನಿಮಾ ತೆರೆಗಪ್ಪಳಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version