ಬ್ಯಾಂಗ್ ಬ್ಯಾಂಗ್ ಉಸ್ತಾದ್..PK ಖದರ್ ಖಾಕಿ ಪವರ್..!

ವಯಲೆನ್ಸ್ ಮೀನಿಂಗ್ ಗೊತ್ತಿಲ್ಲದವ್ರ ಫ್ಯಾಷನ್‌‌ಗೆ PK ಬ್ರೇಕ್

Untitled design 2026 03 15T161850.024

ದಿ ವೆಯ್ಟ್ ಈಸ್ ಓವರ್.. ಉಸ್ತಾದ್ ಟ್ರೈಲರ್ ಸಖತ್ ಕಿಕ್ ಕೊಡ್ತಿದೆ. ಗಬ್ಬರ್ ಸಿಂಗ್ ಫ್ಲೇವರ್‌‌ನಲ್ಲಿ ಖಾಕಿ ಪವರ್‌‌ನಲ್ಲಿ ಖದರ್ ತೋರಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್. ಪಂಚ್ ಡೈಲಾಗ್ಸ್, ಕಾಮಿಡಿ, ಲವ್, ಆ್ಯಕ್ಷನ್, ಡ್ರಾಮಾ.. ಹೀಗೆ ಎಲ್ಲವೂ ಪರ್ಫೆಕ್ಟ್ ಆಗಿ ಬ್ಲೆಂಡ್ ಆಗಿರೋ ಉಸ್ತಾದ್ ಭಗತ್ ಸಿಂಗ್ ಕಥೆ ಇಲ್ಲಿದೆ..

ಇದು ಪವನ್ ಕಲ್ಯಾಣ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಉಸ್ತಾದ್ ಭಗತ್ ಸಿಂಗ್ ಟ್ರೈಲರ್ ಝಲಕ್. ಇಲ್ಲಿ ತನಕ ಟೀಸರ್ ಹಾಗೂ ಸಾಂಗ್ಸ್‌ನಿಂದ ಧೂಳೆಬ್ಬಿಸಿದ್ದ ಉಸ್ತಾದ್, ಇದೀಗ ಈ ಟ್ರೈಲರ್ ಝಲಕ್‌ನಿಂದ ಹಲ್‌ಚಲ್ ಎಬ್ಬಿಸಿದೆ. ಯೆಸ್.. ಪವನ್ ಹಿಂದೆಂದಿಗಿಂತ ಸ್ಟೈಲಿಶ್ ಅಂಡ್ ವೈಬ್ರೆಂಟ್ ಆಗಿ ಕಾಣ್ತಿದ್ದಾರೆ. ಇದೊಂಥರಾ ಚಿತ್ರಪ್ರೇಮಿಗಳಿಗೆ ಹಬ್ಬದ ರಸದೌತಣ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಯುಗಾದಿ ಹಬ್ಬಕ್ಕಾಗಿ ಬರ್ತಿರೋ ಈ ಉಸ್ತಾದ್‌‌ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಖಾಕಿ ಖದರ್ ಜೋರಿದ್ದು, ಸೂಪರ್ ಕಾಪ್ ಆಗಿ ಮಗದೊಮ್ಮೆ ಮ್ಯಾಜಿಕ್ ಮಾಡೋ ಸೂಚನೆ ನೀಡಿದ್ದಾರೆ. ಯಾಕಂದ್ರೆ ಗಬ್ಬರ್ ಸಿಂಗ್ ಹಾಗೂ ಭೀಮ್ಲಾ ನಾಯಕ್ ಚಿತ್ರಗಳ ಶೇಡ್ ಇಲ್ಲಿ ಎದ್ದು ಕಾಣ್ತಿದ್ದು, ಕಾಮಿಡಿ, ಆ್ಯಕ್ಷನ್, ಎಮೋಷನ್, ಲವ್, ಸೆಂಟಿಮೆಂಟ್, ಡ್ಯಾನ್ಸ್ ಹೀಗೆ ಎಲ್ಲವೂ ಹದವಾಗಿ ಬೆರೆಸಿ ಮಾಡಿದ ಪ್ರಾಡಕ್ಟ್‌ನಂತಿದೆ.

ನಾಯಕನಟಿಯಾಗಿ ನಮ್ಮ ಕನ್ನಡತಿ, ಪುಷ್ಪ ಚಿತ್ರದ ಕಿಸಿಕ್ ಬ್ಯೂಟಿ ಶ್ರೀಲೀಲಾ ಗ್ಲಾಮರ್ ರಂಗು ಚೆಲ್ಲಿದ್ದು, ರಾಶಿ ಖನ್ನಾ ಕೂಡ ಸ್ಪೆಷಲ್ ಅಪಿಯರೆನ್ಸ್ ನೀಡಿದ್ದಾರೆ. ವಯಲೆನ್ಸ್ ಮೀನಿಂಗ್ ಗೊತ್ತಿಲ್ಲದವರ ಫ್ಯಾಷನ್‌ಗೆ ಬ್ರೇಕ್ ಹಾಕುವ ಉಸ್ತಾದ್ ಆಗಿ ಬೆಂಕಿ ಚೆಂಡಿನಂತಹ ಪರ್ಫಾಮೆನ್ಸ್ ನೀಡಿರೋ ಪವರ್ ಸ್ಟಾರ್, ತಮ್ಮ ನಟನಾ ಗಮ್ಮತ್ತನ್ನು ಒನ್ಸ್ ಅಗೈನ್ ಇಲ್ಲಿ ಪ್ರೂವ್ ಮಾಡಿದ್ದಾರೆ.

ಹರೀಶ್ ಶಂಕರ್ ನಿರ್ದೇಶನದ ಈ ಸಿನಿಮಾದ ಟ್ರೈಲರ್‌‌ನಲ್ಲಿ ವಿವಾದಾತ್ಮಕ ಡೈಲಾಗ್ ಕೂಡ ಇದೆ. ರೆಡ್ಡಿಗಾರುಗೆ ಅರ್ಥ, ಭಾವ, ಅವಶ್ಯಕತೆಯ ದರ್ಶನ ಮಾಡಿಸೋಕೆ ಪಣ ತೊಡುವ ನಾಯಕನಟ ಪವನ್ ಕಲ್ಯಾಣ್, ನಿಜ ಜೀವನದಂತೆ ರೀಲ್ ನಲ್ಲೂ ಜಗನ್ ರೆಡ್ಡಿಗಾಗಿಯೇ ಈ ಡೈಲಾಗ್ನ ಉದ್ದೇಶಪೂರ್ವಕವಾಗಿ ಬಳಕೆ ಮಾಡಿಸಿದ್ರಾ ಅನ್ನೋ ಅನುಮಾನ ಕಾಡಲಿದೆ.

ಪಾರ್ಥಿಬನ್ ಖಡಕ್ ಖಳನಾಯಕನಾಗಿ ಬಣ್ಣ ಹಚ್ಚಿದ್ದು, ರಾವು ರಮೇಶ್ ಕೂಡ ತಾರಾಗಣದಲ್ಲಿರೋದು ವಿಶೇಷ. ಆಂಧ್ರ ಡಿಸಿಎಂ ಆಗಿ ಮಿಂಚು ಹರಿಸಿರೋ ಪವನ್, ಇನ್ಮೇಲೆ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿರೋದ್ರಿಂದ, ಇದೇ ಅವರ ಕಟ್ಟ ಕಡೆಯ ಸಿನಿಮಾ ಕೂಡ ಆಗ್ತಿದೆ. ಈ ಹಿಂದಿನ ಓಜಿ ಸಿನಿಮಾ ದೊಡ್ಡ ಗೆಲುವು ಸಾಧಿಸಿತ್ತು. ಇದೀಗ ಉಸ್ತಾದ್ ಸರದಿ ಎನ್ನಲಾಗ್ತಿದೆ. ಟಾಕ್ಸಿಕ್ ಪೋಸ್ಟ್‌ಪೋನ್ ಆಗಿದ್ದು, ಉಸ್ತಾದ್ ಬಾಕ್ಸ್ ಆಫೀಸ್‌ಗೆ ಇದು ಪ್ಲಸ್ ಕೂಡ ಆಗಲಿದೆ. ಹಾಗಾಗಿಯೇ ಇದೇ ಮಾರ್ಚ್‌ 19ಕ್ಕೆ ಉಸ್ತಾದ್ ಸಿನಿಮಾ ವರ್ಲ್ಡ್‌ ವೈಡ್ ತೆರೆಗೆ ಬರ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version