OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK

ಕ್ಯೂಟ್‌‌ ಕ್ವೀನ್ ಶ್ರೀಲೀಲಾಗೆ ಬೇಕಾಗಿದೆ ವೆರಿ ಬಿಗ್ ಬ್ರೇಕ್..!

Untitled design 2026 03 13T155753.430

ಉಸ್ತಾದ್ ಭಗತ್ ಸಿಂಗ್.. ಯಶ್ ಟಾಕ್ಸಿಕ್ ಬರಬೇಕಿದ್ದ ಡೇಟ್‌ಗೆ ಬರ್ತಿರೋ ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ. ಇದು ಪವರ್ ಸ್ಟಾರ್ ಪವನ್ ಕಲ್ಯಾಣ್ ಕೊನೆಯ ಆಟವೂ ಹೌದು. ಆಂಧ್ರ ಡಿಸಿಎಂ ಆಗಿ ಸಂಚಲನ ಮೂಡಿಸಿರೋ ಪವನ್‌ ಓಜಿಗೂ ಮೀರಿದ ಕ್ರೇಜ್ ಹುಟ್ಟಿಸಿದ್ದಾರೆ. ಖಾಕಿ ಖದರ್‌‌ನಲ್ಲಿ ಉಸ್ತಾದ್ ಭಗತ್ ಸಿಂಗ್ ಪವರ್ ತೋರೋಕೆ ಕಾಲರ್ ಎತ್ತಿ ಬರ್ತಿದ್ದಾರೆ ಪಿಕೆ.

ಉಸ್ತಾದ್ ಭಗತ್ ಸಿಂಗ್.. ಇದೇ ಮಾರ್ಚ್‌ 19ಕ್ಕೆ ತೆರೆಗಪ್ಪಳಿಸೋಕೆ ತುದಿಗಾಲಲ್ಲಿ ನಿಂತಿರೋ ತೆಲುಗು ಸಿನಿಮಾ. ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಇದ್ರಿಂದ ಹಬ್ಬವೋ ಹಬ್ಬ. ಯಾಕಂದ್ರೆ ಇದು ಪವನ್ ಕಟ್ಟ ಕಡೆಯ ಸಿನಿಮಾ. ಅವರು ಆಂಧ್ರ ಡಿಸಿಎಂ ಆಗೋಕೆ ಮೊದಲೇ ಕಮಿಟ್ ಆಗಿದ್ದ ಸಿನಿಮಾ ಇದಾಗಿದ್ದು, ಇದಾದ ಬಳಿಕ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿ, ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

 

OGಗೂ ಮೀರಿದ ಕ್ರೇಜ್.. ಕಾಲರ್ ಎತ್ತಿದ ಉಸ್ತಾದ್ PK

ಟಾಕ್ಸಿಕ್ ಡೇಟ್‌ಗೆ ಪ್ರೀ-ಪೋನ್.. ಮಾ-19ಕ್ಕೆ ಆಟ ಶುರು..!

ಸ್ಟೈಲಿಶ್ ಸ್ಟಾರ್ ಪವನ್ ಕಲ್ಯಾಣ್‌ರನ್ನ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಡೈರೆಕ್ಟರ್‌ಗಳು ಬಹಳ ವಿಭಿನ್ನವಾಗಿ, ಸಿಗ್ನೇಚರ್ ಆ್ಯಟಿಟ್ಯೂಡ್ ಜೊತೆ ಯುನಿಕ್ ಸ್ಟೈಲ್‌ & ಕಾಸ್ಟ್ಯೂಮ್ಸ್‌ ಮೂಲಕ ತೋರಿಸ್ತಾರೆ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಓಜಿ ಮೂವಿಯಲ್ಲಿ ಸುಜೀತ್ ಸಖತ್ ಸ್ಟೈಲಿಶ್ ಆಗಿ ಅವ್ರನ್ನ ತೆರೆಮೇಲೆ ತೋರಿಸಿದ್ರು. ಇದೀಗ ಅದನ್ನೂ ಮೀರಿದ ಕ್ರೇಜ್ ಹುಟ್ಟಿಸಿರೋ ಉಸ್ತಾದ್, ಸ್ಯಾಂಪಲ್ಸ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ.

2012ರಲ್ಲಿ ಗಬ್ಬರ್ ಸಿಂಗ್ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಮೂವಿ ನೀಡಿದ್ದ ಅದೇ ಹರೀಶ್ ಶಂಕರ್ ಸದ್ಯ ಉಸ್ತಾದ್‌ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಅಂದು ಪವನ್ ಕಲ್ಯಾಣ್ ಪೊಲೀಸ್ ಕಾಪ್. ಇಂದು ಸಹ ಅದೇ ಖಾಕಿ ಖದರ್. ಈಗ ಮತ್ತಷ್ಟು ವೈಬ್ರೆಂಟ್ ಆಗಿ ಕಾಣಿಸ್ತಿದ್ದು, ಪವನ್ ಪೊಲಿಟಿಕಲ್ ಕ್ರೇಜ್ ಈ ಸಿನಿಮಾದ ಬಹುದೊಡ್ಡ ಗೆಲುವಿಗೆ ಕಾರಣೀಭೂತವಾಗುವ ಲಕ್ಷಣ ತೋರಿದೆ.

ಖಾಕಿ ಖದರ್‌‌ನಲ್ಲಿ ಡಿಸಿಎಂ ಹೀರೋಯಿಸಂ ಅಸಲಿ ಪವರ್

ಕ್ಯೂಟ್‌‌ ಕ್ವೀನ್ ಶ್ರೀಲೀಲಾಗೆ ಬೇಕಾಗಿದೆ ವೆರಿ ಬಿಗ್ ಬ್ರೇಕ್..!

ಟೀಸರ್‌‌ಗಳು ಬಝ್ ಕ್ರಿಯೇಟ್ ಮಾಡಿದ್ದು, ಸಾಂಗ್ಸ್ ಕೂಡ ಇಂಪ್ರೆಸ್ಸೀವ್ ಆಗಿವೆ. ಅದ್ರಲ್ಲೂ ರೀಸೆಂಟ್ ರಿಲೀಸ್ ಕಾಲರ್ ಏ ಎತ್ತರಾ ಸಾಂಗ್ ಡ್ಯಾನ್ಸ್ ಪ್ರಿಯರಿಗೆ ಜಾಸ್ತಿ ಕಿಕ್ ಕೊಡಲಿದೆ. ನಾಯಕನಟಿಯಾಗಿ ನಮ್ಮ ಕನ್ನಡದ ಕ್ಯೂಟ್ ಕ್ವೀನ್ ಶ್ರೀಲೀಲಾ ಬಣ್ಣ ಹಚ್ಚಿದ್ದು, ಆಕೆಗೆ ಈ ಚಿತ್ರದಿಂದ ಬಹುದೊಡ್ಡ ಬ್ರೇಕ್ ಬೇಕೇ ಬೇಕು. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರೋ ಶ್ರೀಲೀಲಾ, ಪವನ್ ಲಕ್ ಫ್ಯಾಕ್ಟರ್‌ನಿಂದ ಆದ್ರೂ ಗೆಲ್ತಾರಾ ಅನ್ನೋದು ಕಾದು ನೋಡಬೇಕಿದೆ.

ರಾಶಿ ಖನ್ನಾ ಹಾಗೂ ಪಾರ್ಥಿಬನ್ ಕೂಡ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಅಂದಹಾಗೆ 150 ಕೋಟಿ ಬಿಗ್ ಬಜೆಟ್‌ನ ಉಸ್ತಾದ್ ಮೂವಿ ಈ ವೇಳೆಗಾಗಲೇ ರಿಲೀಸ್ ಆಗಬೇಕಿತ್ತು. ಪವನ್ ರಾಜಕೀಯ ಜಂಜಾಟಗಳ ನಡುವೆ ಈ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್‌ಗೆ ಡೇಟ್ಸ್ ನೀಡಲು ಆಗಿರಲಿಲ್ಲ. ಹಾಗಾಗಿ ಕೊಂಚ ಲೇಟ್ ಆದ್ರೂ ಪ್ರೇಕ್ಷಕರಿಗೆ ಹಾಗೂ ಫ್ಯಾನ್ಸ್‌ಗೆ ಮನರಂಜನೆಯ ರಸದೌತಣ ಉಣಬಡಿಸೋದು ಕನ್ಫರ್ಮ್. ಯಾಕಂದ್ರೆ ಹರೀಶ್ ಶಂಕರ್-ಪವನ್ ಕಾಂಬೋ ಅಂದಾಗ ಅಲ್ಲಿ ಆ್ಯಕ್ಷನ್ ಹಾಗೂ ಕಾಮಿಡಿಗೆ ಬರ ಇರುವುದಿಲ್ಲ.

 

 

 

Exit mobile version