ದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆತನ ಪತ್ನಿಯೇ ಗೈರು. ಆದ್ರೆ ನಟಿ ತ್ರಿಶಾ ಮಾತ್ರ ಮಹಾಲಕ್ಷ್ಮೀಯಂತೆ ರೆಡಿಯಾಗಿ ಹಾಜರ್ ಆಗಿದ್ರು. ಸ್ವಂತ ಕುಟುಂಬದವರಂತೆ ಬಂದು ವಿವಿಐಪಿ ಸೀಟ್‌ನಲ್ಲಿ ಕೂತು ಎಲ್ಲರ ಅಟೆನ್ಷನ್ ತನ್ನತ್ತ ಸೆಳೆಯುವಂತೆ ಮಾಡಿದ್ದ ತ್ರಿಶಾಗೆ ನೆಟ್ಟಿಗರು ಕಾಲೆಳೆಯರು ಆರಂಭಿಸಿದ್ದಾರೆ. ಅದಕ್ಕೆ ದಿ ಲವ್ ಈಸ್ ಆಲ್ವೇಸ್ ಲೌಡರ್ ಅಂತ ಟಕ್ಕರ್ ಕೂಡ ನೀಡಿದ್ದಾರೆ ಕುಂದವೈ ತ್ರಿಶಾ.
ತ್ರಿಶಾ ಮುಖದಲ್ಲಿ ಸಾವಿರ ಲೈಟುಗಳು ಒಟ್ಟಿಗೆ ಬೆಳಗಿದರೆ ಹೇಗಿರಬಹುದು ಅಂಥಹ ಹೊಳಪು. ಜಗತ್ತೇ ಗೆದ್ದ ಸಂತೋಷ. ಇದನ್ನು ಮೀರಿದ ಸಂಭ್ರಮವೇ ಇನ್ನೊಂದಿಲ್ಲ ಎನ್ನುವಂತಹ ಭಾವ. ಆಕಾಶ ನೀಲಿ ಬಣ್ಣದ ಸಣ್ಣ ಬಾರ್ಡರ್ ಸೀರೆ, ಕೆನೆ ಬಣ್ಣದ ಡಿಸೈನರ್ ಬ್ಲೌಸ್, ಕೆಂಪು ಪೆಂಡೆಂಟ್ನ ಡೈಮಂಡ್ ನೆಕ್ಲೆಸ್. ಕೂದಲನ್ನು ಬನ್ ಮಾಡಿ ಅದಕ್ಕೆರಡು ಸುತ್ತು ಮಲ್ಲಿಗೆ ಹೂ. ಥೇಟ್ ಹತ್ತಿರದ ಸಂಬಂಧಿಕರ ಮದುವೆಗೆ ಬಂದಂತೆ ದಳಪತಿ ವಿಜಯ್ ಸಿಎಂ ಪ್ರಮಾಣ ವಚನ ಫಂಕ್ಷನ್‌ಗೆ ಬಂದಿದ್ರು ತ್ರಿಶಾ.
OMG.. ತ್ರಿಶಾಗೆ ತಿವಿದ ನೆಟ್ಟಿಗರು..ಕುಂದವೈಗೆ ಇದು ಬೇಕಿತ್ತಾ..?
ವಿಜಯ್ ಈಗ CM..ವೈಯಕ್ತಿಕ ಜೀವನ ಪ್ರೈವೇಟ್ ಮಾಡ್ಕೊಳಿ
ಸುಮ್ಮನೆ ಬಂದು ಕುಳಿತು ಹೋಗಿದ್ದರೆ ಅದು ಬೇರೆ. ನೆಹರೂ ಸ್ಟೇಡಿಯಂಗೆ ಬಂದು, ಮದುವೆ ಮನೆಯಲ್ಲಿ ಓಡಾಡಿದಂತೆ ಓಡಾಡಿದ್ದೇನು..? ವಿವಿಐಪಿ ಸೀಟ್‌ನಲ್ಲಿ ಕುಳಿತು ವಿಜಯ್ರನ್ನ ನೋಡಿ ಮುಗುಳು ನಗುತ್ತಿದ್ದೇನು? ವಿಜಯ್ ಮಾತುಗಳನ್ನ ಕೇಳಿಸಿಕೊಂಡು ಗದ್ಗದಿತವಾಗುತ್ತಿದ್ದೇನು..? ಅವರಿಬ್ಬರ ಮಧ್ಯೆ ಏನೂ ಇಲ್. ಗಿಲ್ಲಿ ಸಿನಿಮಾ ಮಾಡಿದಾಗಿನಿಂದಲೂ ಬೆಸ್ಟ್ ಫ್ರೆಂಡ್ಸ್ ಎನ್ನುವವರು..ಈ ಎಕ್ಸ್ಟ್ರಾ ಮೆರೈಟಲ್ ಅಫೇರ್ನ ಚಂದವನ್ನೊಮ್ಮೆ ಕಣ್ತುಂಬಿಕೊಳ್ಳಬೇಕಿತ್ತು.
ಕಣ್ಣು ಕುಕ್ಕಿದ ತ್ರಿಶಾ..ಪ್ರಮಾಣ ವಚನ ಫಂಕ್ಷನ್‌ನಲ್ಲಿ ಪತ್ನಿ ಗೈರು
The Love is always Louder..ತ್ರಿಶಾ ಸ್ಟ್ರಾಂಗ್ ಕೌಂಟರ್
ಇದೆಲ್ಲವನ್ನ ನಾವು ಹೇಳ್ತಿರೋದಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೇ ಮಾತಾಡ್ತಿದ್ದಾರೆ. ವಿಜಯ್ ಸಿಎಂ ಪ್ರಮಾಣ ವಚನ ಫಂಕ್ಷನ್‌ಗೆ ಆತನ ಪತ್ನಿ ಸಂಗೀತಾನೇ ಗೈರಾಗಿದ್ದಾರೆ. ಅಂಥದ್ರಲ್ಲಿ ಕುಟುಂಬದವರಂತೆ ಬಂದು ವಿಜಯ್ ತಾಯಿಗೆ ಹಗ್ ಮಾಡಿ, ವಿವಿಐಪಿ ಫ್ರಂಟ್ ಸೀಟ್‌ನಲ್ಲಿ ಕೂತು ಮಿಂಚಿದ್ರು ತ್ರಿಶಾ. ಇದೆಲ್ಲವನ್ನ ಕಂಡಂತಹ ನೆಟಿಜನ್ಸ್ ತ್ರಿಶಾಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೋತಿದ್ದಾರೆ. ಡಿಯರ್ ತ್ರಿಶಾ ಮೇಡಂ.. ನಿಮ್ಮ ವೈಯಕ್ತಿಕ ಜೀವನವನ್ನ ಖಾಸಗಿಯಾಗಿ ಇಟ್ಟುಕೊಳ್ಳಿ. ಈ ರೀತಿ ಸಾರ್ವಜನಿಕವಾಗಿ ತೋರಿಸಿಕೊಳ್ಳಬೇಡಿ. ವಿಜಯ್ ಈಗ ತಮಿಳುನಾಡು ಸಿಎಂ. ಅವರಿಗೆ ಅವರದ್ದೇ ಆದ ಜವಾಬ್ದಾರಿಗಳಿವೆ. ಅಧಿಕಾರವನ್ನ ಸಮರ್ಪಕವಾಗಿ ನಿಭಾಯಿಸಲು ಬಿಡಿ ಅಂತಿದ್ದಾರೆ.
ಇನ್ನೂ ಸೋಶಿಯಲ್ ಮೀಡಿಯಾಗಳಲ್ಲಿನ ಟೀಕೆ ಟಿಪ್ಪಣಿಗಳಿಗೆ ಕೌಂಟರ್ ನೀಡಿರುವ ತ್ರಿಶಾ, ತಮ್ಮ ಇನ್ಸ್ ಟಾದಲ್ಲಿ ದಿ ಲವ್ ಈಸ್ ಆಲ್ವೇಸ್ ಲೌಡರ್ ಅಂತ ಬರೆದುಕೊಂಡಿದ್ದಾರೆ. ಅಂದ್ರೆ ಪ್ರೀತಿ ಯಾವಾಗ್ಲೂ ಜೋರಾಗಿಯೇ ಇರುತ್ತೆ ಅನ್ನೋದು ಅದರ ಮರ್ಮ. ಪ್ರೀತಿ ಓಕೆ. ಆದ್ರೆ ಅದೇ ವಿಜಯ್ ಪದವಿಗೆ ಮುಳ್ಳಾಗಿ ಫಜೀತಿ ಆದ್ರೆ ಕಷ್ಟ. ಆಕೆಯೇ ಹೇಳಿದಂತೆ ಮಕ್ಕಳೊಂದಾಗಿಲ್ಲ ಅನ್ನೋದು ಮಾತ್ರ ಸ್ಪಷ್ಟ. ಇನ್ನೂ ಡಿವೋರ್ಸ್ ಪಡೆಯದ ಸಿಎಂ ವಿಜಯ್ ಬೆನ್ನು ಹತ್ತಿರೋ ತ್ರಿಶಾ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
