ಸಾವಿರ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರನ್ನ ನಿಬ್ಬೆರಗಾಗಿಸಿರೋ ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಬಿಗ್ ಬ್ರೇಕಿಂಗ್ ನ್ಯೂಸ್ ಬಂದಿದೆ. ರಜನೀಕಾಂತ್, ಕಮಲ್ ಹಾಸನ್ ಹಾಗೂ ರಣ್‌ವೀರ್ ಸಿಂಗ್ ರೆಕಾರ್ಡ್‌ನ ಬ್ರೇಕ್ ಮಾಡಿದ್ದಾರೆ ನಮ್ಮ ರಾಕಿಂಗ್ ಸ್ಟಾರ್ ಯಶ್. ಅಷ್ಟೇ ಅಲ್ಲ, ಅಮೆಜಾನ್ ಪ್ರೈಮ್ ಟಾಕ್ಸಿಕ್ ಓಟಿಟಿ ರೈಟ್ಸ್‌ಗಾಗಿ 180 ಕೋಟಿ ಡೀಲ್ ನೀಡಿದೆ ಎನ್ನಲಾಗ್ತಿದೆ.
ಟಾಕ್ಸಿಕ್ ಅಬ್ಬರ, ಆರ್ಭಟಕ್ಕೆ ಬಾಲಿವುಡ್ ಸಿನಿಮಾಗಳಷ್ಟೇ ಅಲ್ಲ, ಹಾಲಿವುಡ್ ಚಿತ್ರಗಳು ಕೂಡ ಪತರಗುಟ್ಟುತ್ತಿವೆ. ಬ್ಯುಸಿನೆಸ್, ಕ್ರೇಜ್ ಎಲ್ಲಾ ವಿಚಾರದಲ್ಲಿ ಟಾಕ್ಸಿಕ್ ದಿ ಬೆಸ್ಟ್ ಅನಿಸಿದೆ. ಈಗಾಗ್ಲೇ ಇಂಡಿಯನ್ ಮೂವಿಯೊಂದು ರಿಲೀಸ್‌ಗೂ ಮೊದಲೇ ಸಾವಿರ ಕೋಟಿ ಬ್ಯುಸಿನೆಸ್ ಮಾಡಿರೋದು ಇದೇ ಮೊದಲು. ಅದೂ ನಮ್ಮ ರಾಕಿಂಗ್ ಸ್ಟಾರ್ ಯಶ್‌ರ ಟಾಕ್ಸಿಕ್ ಅನ್ನೋದು ನಾವೆಲ್ಲಾ ಖುಷಿ ಜೊತೆ ಹೆಮ್ಮೆ ಪಡುವ ವಿಷಯವಾಗಿದೆ.
ರಜನಿ, ಕಮಲ್ ರೆಕಾರ್ಡ್ ಬ್ರೇಕ್..ಟಾಕ್ಸಿಕ್ OTTಗೆ 180 Cr
ಆಂಧ್ರದಲ್ಲಿ ಹೆಚ್ಚು ಬೆಲೆಗೆ ಡಿಸ್ಟ್ರಿಬ್ಯೂಷನ್ ಪಡೆದ ಪರಭಾಷಾ ಚಿತ್ರ
ಯಶ್ ಕೆಜಿಎಫ್ ಸಿನಿಮಾಗಳ ಸಕ್ಸಸ್, ಟಾಕ್ಸಿಕ್ ಟೀಸರ್ ಹಿಟ್ ಆಗಿದ್ದು, ಹಾಲಿವುಡ್ ಶೈಲಿಯ ಮೇಕಿಂಗ್, ಸ್ಟಾರ್‌ಕಾಸ್ಟ್..ಹೀಗೆ ಎಲ್ಲಾ ಕಾರಣಗಳಿಂದಾಗಿ ಟಾಕ್ಸಿಕ್‌ಗೆ ಓಟಿಟಿ ಅಂಗಳದಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳು ನಾ ಮುಂದು ತಾ ಮುಂದು ಅಂತ ಟಾಕ್ಸಿಕ್ ರೈಟ್ಸ್ ಖರೀದಿಗೆ ಮುಗಿ ಬೀಳುತ್ತಿವೆ. ಆದ್ರೆ ಮುಳಗಳ ಪ್ರಕಾರ ಈಗಾಗ್ಲೇ 180 ಕೋಟಿ ಬೃಹತ್ ಮೊತ್ತ ನೀಡಿ, ಅಮೆಜಾನ್ ಪ್ರೈಮ್ ಓಟಿಟಿ ರೈಟ್ಸ್‌ನ ಖರೀದಿಸಿದೆ ಎನ್ನಲಾಗ್ತಿದೆ.
ಕನ್ನಡ ಸಿನಿಮಾವೊಂದಕ್ಕೆ ಬರೋಬ್ಬರಿ 180 ಕೋಟಿ ರೂಪಾಯಿ ಓಟಿಟಿ ಬೆಲೆ ಬಂದಿರೋದು ನಿಜಕ್ಕೂ ಗ್ರೇಟ್. ಇದು ನಮ್ಮ ಕನ್ನಡಿಗರ ಗತ್ತು, ಗೈರತ್ತಿನ ಪ್ರತೀಕವಾಗಿದೆ. ಯಶ್ ಎಲ್ಲವನ್ನೂ ಸಮರ್ಪಕವಾಗಿ ಪ್ಲ್ಯಾನ್ ಮಾಡಿಯೇ ಹಂತ ಹಂತವಾಗಿ ಮಾಡ್ತಿರೋದು ಬಹುದೊಡ್ಡ ಶುಭ ಸೂಚನೆ ನೀಡ್ತಿದೆ.
ಸಾವಿರ ಕೋಟಿ ಸರದಾರ ಯಶ್ ಮುಡಿಗೆ ಮತ್ತೊಂದು ದಾಖಲೆ
ಸೆಲ್ಫ್ ಮೇಡ್ ಶಹಜಾದ ಯಶ್ ಏನೇ ಮಾಡಿದ್ರು ಟ್ರೆಂಡ್ ಗುರು
ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ರೆಕಾರ್ಡ್ ಕಾ ಬಾಪ್ ಆಗಿರೋ ಯಶ್, ಆಂಧ್ರದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಹಾಗೂ ರಣ್‌ವೀರ್ ಸಿಂಗ್ ದಾಖಲೆಗಳನ್ನ ಸರಿಗಟ್ಟಿದ್ದಾರೆ. ಆಂಧ್ರದಲ್ಲಿ ಅತಿಹೆಚ್ಚು ಮೊತ್ತಕ್ಕೆ ವಿತರಣಾ ಹಕ್ಕುಗಳು ಮಾರಾಟಗೊಂಡ ಮೊದಲ ಪರಭಾಷಾ ಚಿತ್ರವಾಗಿ ಟಾಕ್ಸಿಕ್ ಅಗ್ರಸ್ಥಾನದಲ್ಲಿದೆ.
ತಲೈವಾ ರಜನೀಕಾಂತ್‌ರ ಕೂಲಿ ಸಿನಿಮಾದ ಡಿಸ್ಟ್ರಿಬ್ಯೂಷನ್ ರೈಟ್ಸ್ ಆಂಧ್ರದಲ್ಲಿ 68 ಕೋಟಿ ಕೊಟ್ಟು ಖರೀಸಿದಿದ್ದರು. ಕಮಲ್ ಹಾಸನ್‌ರ ಥಗ್‌ಲೈಫ್ ಸಿನಿಮಾಗೆ 53 ಕೋಟಿ ಮೊತ್ತ ನೀಡಲಾಗಿತ್ತು. ರಣ್‌ವೀರ್ ಸಿಂಗ್‌ರ ಧುರಂಧರ್ ಸಿನಿಮಾಗೆ 80 ಕೋಟಿ ನೀಡಿ ಖರೀದಿಸಿದ್ದರು. ಆದ್ರೀಗ ಯಶ್‌ರ ಟಾಕ್ಸಿಕ್ 120 ಕೋಟಿಗೆ ಮಾರಾಟಗೊಂಡು ನಂಬರ್ ಒನ್ ಸ್ಥಾನಕ್ಕೇರಿದೆ.
