ಕಿಂಗ್ ಆಫ್ ರೊಮ್ಯಾನ್ಸ್ ಯಶ್..‘ತಬಾಹಿ’ ಥಂಡರ್..!!

ಕಿಯಾರಾ ರೊಮ್ಯಾನ್ಸ್ ಕಿಕ್‌.. ನಯನಾ, ತಾರಾ ಝಲಕ್..!

‘ತಬಾಹಿ’ ಥಂಡರ್..!!

ಆಡಿಕೊಳ್ಳೋರಿಂದಲೇ ಅಮೇಜಿಂಗ್ ಅಂತ ಅಪ್ರೆಸಿಯೇಷನ್ ಪಡೆದುಕೊಳ್ಳೋದು ಹೆಮ್ಮೆಯ ಕನ್ನಡಿಗ ಯಶ್ ಜಾಯಮಾನ. ತಬಾಹಿ ಆಡಿಯೋ ಸಾಂಗ್ ಕೇಳಿ ಅಯ್ಯೋ ಇದ್ರಲ್ಲಿ ಏನೇನೂ ಇಲ್ಲ ಖಾಲಿ ಪಲಾವ್ ಅಂತಿದ್ದವ್ರೆಲ್ಲಾ ಈಗ ತಬಾಹಿ ವಿಡಿಯೋ ಸಾಂಗ್‌ನ ಲೂಪ್‌‌ನಲ್ಲಿ ನೋಡ್ತಿದ್ದಾರೆ. ಆ್ಯಕ್ಷನ್‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ರಾಕಿಂಗ್ ಸ್ಟಾರ್, ಇದೀಗ ಕಿಂಗ್ ಆಫ್ ರೊಮ್ಯಾನ್ಸ್‌ ಅನಿಸಿಕೊಂಡಿದ್ದಾರೆ. ಹಾಗಾದ್ರೆ ಎಲ್ಲಾ ಮಿತಿ ಮೀರಿದ ರಾಯ-ನಾಡಿಯಾ ಪ್ರಣಯ ಪ್ರಪಂಚ ಹೇಗಿದೆ ಅಂತೀರಾ..? ಇದರ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ ನೋಡಿ..

ದಿ ವೆಯ್ಟ್ ಈಸ್ ಓವರ್.. ಟಾಕ್ಸಿಕ್ ಗಾನಬಜಾನ ಶುರು. ಯೆಸ್.. ತಬಾಹಿ ಅನ್ನೋ ವೆರಿ ವೆರಿ ಇಂಟೆನ್ಸ್ ರೊಮ್ಯಾಂಟಿಕ್ ಮೆಲೋಡಿ ಗೀತೆಯಿಂದ ಟಾಕ್ಸಿಕ್ ಆಡಿಯೋ ಸಖತ್ ಸೌಂಡ್ ಮಾಡ್ತಿದೆ. ಆ್ಯಕ್ಷನ್‌‌ಗೆ ಕೇರ್ ಆಫ್ ಅಡ್ರೆಸ್ ಆಗಿದ್ದ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್, ಇದೀಗ ಕಿಂಗ್ ಆಫ್ ರೊಮ್ಯಾನ್ಸ್ ಆಗಿ ಗುರ್ತಿಸಿಕೊಂಡಿದ್ದಾರೆ.

ಹುಚ್ಚು ಹಿಡಿಸೋ ಹಾಗಿರೋ ಹಾಗೂ ರೊಚ್ಚಿಗೇಳಿಸುವಂತಿರೋ ಅಡಲ್ಟ್ ಎಂಟರ್‌‌ಟೈನರ್‌‌ನ ತಬಾಹಿ ಗೀತೆ ರಾಯ-ನಾಡಿಯಾ ಪ್ರಣಯ ಪ್ರಪಂಚದ ಎಲ್ಲಾ ಮಿತಿ ಮೀರಿದಂತಿದೆ. ಬೀಚು, ಪಬ್ಬು, ಕಾರು, ಸರ್ಕಸ್ ಎಲ್ಲಾ ಗಡಿಗಳಲ್ಲಿ ತಬಾಹಿ ಥಂಡರ್ ಸಖತ್ ವಂಡರ್ ಅನಿಸಿದೆ. ಕಡಲ ಕಿನಾರೆಯಲ್ಲಿ ಸಿಕ್ಸ್‌‌ಪ್ಯಾಕ್ ಹೀರೋ ಯಶ್ ಜೊತೆ ಬಾಲಿವುಡ್ ಬ್ಯೂಟಿ ಕಿಯಾರಾ ಕಿಕ್ ಕೊಡುವಂತಹ ಹಚಿಬಿಸಿ ದೃಶ್ಯಗಳು ಮಸ್ತ್ ಮಜಾ ಕೊಡ್ತಿವೆ.

ಕೆಜಿಎಫ್‌‌ ಸಿನಿಮಾ ಬಂದಾಗ ಯಶ್ ಕರಿಯರ್‌ನ ಕೆಜಿಎಫ್‌‌ಗೂ ಮುನ್ನ, ಕೆಜಿಎಫ್ ನಂತರ ಅಂತ ವಿಭಜಿಸಿ ನೋಡುವಂತಾಗಿತ್ತು. ಇದೀಗ ತಬಾಹಿ ಸಾಂಗ್‌ಗೂ ಮುನ್ನ, ತಬಾಹಿ ನಂತ್ರ ಅಂತ ಮಾತನಾಡಿಕೊಳ್ಳುವಂತಹ ಟಾಪ್ ನಾಚ್ ಪರ್ಫಾಮೆನ್ಸ್ ನೀಡಿದ್ದಾರೆ ಮಾನ್‌ಸ್ಟರ್ ಯಶ್. ಹೌದು.. ಒಬ್ಬ ಮಾಸ್ ಹೀರೋ ಇಷ್ಟು ರೊಮ್ಯಾಂಟಿಕ್ ಸಾಂಗ್‌ನ ಎಕ್ಸಿಕ್ಯೂಟ್ ಮಾಡಿರೋದೇ ಅಚ್ಚರಿ. ಹಾಟ್ ಕೇಕ್‌‌ನಂತಿರೋ ಯಶ್ ಗ್ಯಾಂಗ್‌ಸ್ಟರ್ ಆಗಿ, ಪ್ರಣಯರಾಜನಾಗಿ ವಿನಾಶಕಾರಿ ಅನ್ನೋದನ್ನ ಇದು ಒತ್ತಿ ಒತ್ತಿ ಹೇಳ್ತಿದೆ.

ಸದ್ಯ ಸಿನಿದುನಿಯಾದ ಸೆನ್ಸೇಷನ್ ಆಗಿರೋ ತಬಾಹಿ ಗೀತೆಗೆ ನಮ್ಮ ವಿಕಟಕವಿ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡೋದ್ರ ಜೊತೆಗೆ ನಮ್ಮ ಕನ್ನಡದ ಸಂತೋಷ್ ವೆಂಕಿ ಸಹಾಯದಿಂದ ಅವರೇ ಕನ್ನಡ ವರ್ಷನ್‌ಗೆ ಹಾಡಿರೋದು ಇಂಟರೆಸ್ಟಿಂಗ್. ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬದಂತಿದ್ದು, ರಾಜೀವ್ ರವಿ ಕ್ಯಾಮೆರಾ ಕೈಚಳಕ ವ್ಹಾವ್ ಫೀಲ್ ತರಿಸಿದೆ.

ಗ್ಯಾಂಗ್‌ಸ್ಟರ್ ವಾರ್‌‌ನಲ್ಲೊಂದು ತಂಪಾದ ಪ್ರೀತಿ-ಪ್ರಣಯದ ಸಿಹಿ ಅಲೆಯಂತಿರೋ ಈ ತಬಾಹಿ ಗೀತೆಯಲ್ಲಿ ಯಶ್ ಜೊತೆ ಕಿಯಾರಾ ಸೆಂಟರ್ ಆಫ್ ಅಟ್ರ್ಯಾಕ್ಷನ್. ಮಡಿ ಮೈಲಿಗೆ ಮೀರಿ ನಟಿಸಿರೋ ಆಕೆಗೆ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಮತ್ತೊಬ್ಬ ಬಾಲಿವುಡ್ ಚೆಲುವೆ ತಾರಾ ಸುತಾರಿಯಾ ಕೂಡ ಸಾಥ್ ನೀಡಿದ್ದಾರೆ. ಸಾಂಗ್‌ನಲ್ಲಿ ಅವರಿಬ್ಬರ ಗೆಸ್ಟ್ ಅಪಿಯರೆನ್ಸ್ ಸ್ಪೆಷಲ್ ಅಟ್ರ್ಯಾಕ್ಷನ್ ಅನಿಸಿದೆ.

ನಿನ್ನಂತ ಸ್ವಾರ್ಥಿ ಒಂದಿನ ಪ್ರೀತಿಯಲ್ಲಿ ಬೀಳ್ತಾನೆ ಅನಿಸುತ್ತಾ ಅಂತ ತಾರಾ ಸುತಾರಿಯಾ ಕೇಳುವ ಪ್ರಶ್ನೆಗೆ ಕಷ್ಟ ಅನಿಸುತ್ತೆ ಅನ್ನೋ ಉತ್ತರ ಕೊಡ್ತಾರೆ ಯಶ್. ಹಾಗಾದ್ರೆ ಇದು ಪಕ್ಕಾ ಸ್ವಾರ್ಥಿಯೊಬ್ಬ ಆಳವಾದ ಪ್ರೀತಿಯ ಬಲೆಗೆ ಸಿಲುಕುವ ಕಥಾನಕವೇ ಆಗಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ. ವಿಶೇಷ ಅಂದ್ರೆ ತಬಾಹಿ ತಮಿಳು ವರ್ಷನ್‌‌ ಸಾಂಗ್‌ಗೆ ನಯನತಾರಾ ಗಂಡ ವಿಘ್ನೇಶ್ ಶಿವನ್ ಪದಪುಂಜ ಜೋಡಿಸಿದ್ದಾರೆ.

ಯೆಸ್.. ಖ್ಯಾತ ಸೂಫಿ ಕವಿ ರೂಮಿಯನ್ನ ನೆನೆಸಿಕೊಂಡಿರೋ ಚಿತ್ರತಂಡ, ಹಾಡಿನ ಆರಂಭದಲ್ಲೇ ರೂಮಿಯ ಒಂದು ಕೊಟೇಷನ್ ಹಾಕಿದೆ. ಅದು ‘ಸರಿ-ತಪ್ಪುಗಳ ಕಲ್ಪನೆಯನ್ನ ಮೀರಿದ ಒಂದು ಪ್ರಪಂಚವಿದೆ. ನಾನು ನಿಮ್ಮನ್ನು ಅಲ್ಲಿ ಭೇಟಿಯಾಗುತ್ತೇನೆ’ ಅನ್ನೋದಾಗಿದೆ. ಇನ್‌‌ಫ್ಯಾಕ್ಟ್ ರಾಕಿಂಗ್ ರಾಯನ ನಡೆ ಕೂಡ ಅದೇ ಆಗಿದೆ ಅನಿಸ್ತಿದೆ. ಅದೇ ಕಾರಣದಿಂದ ಇದು ಸರಿ, ಇದು ತಪ್ಪು ಅನ್ನೋ ಕಲ್ಪನೆಗಳನ್ನ ಮೀರಿದ ಪ್ರಪಂಚ ಈ ಟಾಕ್ಸಿಕ್ ಅನ್ನೋದನ್ನ ಪರೋಕ್ಷವಾಗಿ ಪ್ರೇಕ್ಷಕರಿಗೆ ಅರ್ಥೈಸುತ್ತಿದ್ದಾರೆ.

ರಾಯ ಪಾತ್ರಧಾರಿ ಯಶ್ ಹಾಗೂ ನಾಡಿಯಾ ರೋಲ್ ಮಾಡಿರೋ ಕಿಯಾರಾ ಅಡ್ವಾಣಿ ಗಂಡ-ಹೆಂಡ್ತಿ ಎನ್ನಲಾಗ್ತಿದೆ. ಹಾಗಾದ್ರೆ ಟಿಕೆಟ್ ಯಾರ ಮಗ..? ರಾಯನ ಮಗ ಟಿಕೆಟ್ ನಾಡಿಯಾಗೆ ಜನಿಸಿದ್ನಾ ಅಥ್ವಾ ರೆಬೆಕಾ ಪಾತ್ರಧಾರಿ ತಾರಾ ಸುತಾರಿಯಾಗೆ ಹುಟ್ಟಿದವ್ನಾ ಅನ್ನೋ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೀತಿವೆ.

ಮತ್ತೊಂದು ಹೊಚ್ಚ ಹೊಸ ಸುದ್ದಿ ಏನಪ್ಪಾಂದ್ರೆ ಯಶ್ ಈ ಚಿತ್ರದಲ್ಲಿ ನಟಿಸಿರೋದು ಡಬಕಲ್ ರೋಲ್‌ ಮಾತ್ರವಲ್ಲ. ತ್ರಿಬಲ್ ರೋಲ್. ಗ್ಯಾರಂಟಿ ನ್ಯೂಸ್‌‌ನಲ್ಲಿ ನಾವು ಈ ವಿಷಯವನ್ನ ಟೀಸರ್ ರಿಲೀಸ್ ಆದಾಗ್ಲೇ ಹೇಳಿದ್ವಿ. ರಾಯ, ಟಿಕೆಟ್ ಜೊತೆ ರೂಮಿ ಅನ್ನೋ ಮತ್ತೊಂದು ಕ್ಯಾರೆಕ್ಟರ್‌ನ ಕೂಡ ಯಶ್ ಅವರೇ ನಿಭಾಯಿಸಿದ್ದಾರೆ ಎನ್ನಲಾಗ್ತಿದೆ. ಅದಕ್ಕೆ ವಿಕಿಪೀಡಿಯಾ ಕೂಡ ಸಾಕ್ಷಿಯಾಗಿದೆ. ಸೋ.. ಟಾಕ್ಸಿಕ್ ಅಸಲಿ ಕಥೆ ಆಗಸ್ಟ್ 26ಕ್ಕೆ ರಿವೀಲ್ ಆಗಲಿದ್ದು, ಕಾತರದಿಂದ ಕಾದು ನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್ 

Exit mobile version