“ಫಸ್ಟ್ rank ರಾಜು” ಚಿತ್ರದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಗುರುನಂದನ್ ನಾಯಕರಾಗಿ ನಟಿಸಿರುವ ಹಾಗೂ ಪ್ರಸ್ತತ ಭರ್ಜರಿ ಯಶಸ್ಸು ಕಾಣುತ್ತಿರುವ “ಪ್ರೇಮದ ಊರಲಿ” ಚಿತ್ರದ ನಾಯಕಿ ತಪಸ್ವಿನಿ ಪೂಣಚ್ಚ ನಾಯಕಿಯಾಗಿ ನಟಿಸಿರುವ, ಸುಮಂತ್ ಗೌಡ ನಿರ್ದೇಶನದ ಹಾಗೂ ಸುಮಂತ್ ಗೌಡ ನಿರ್ದೇಶನದ ಹಾಗೂ ಮಂಡಿಮನೆ ಟಾಕೀಸ್ ಲಾಂಛನದಲ್ಲಿ ಗುರುನಂದನ್ ಅವರು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣ ಮಾಡಿರುವ “MR ಜಾಕ್” ಚಿತ್ರದ ಬಿಡುಗಡೆ ದಿನಾಂಕ ನಾಡಹಬ್ಬ ದಸರಾ ಸಂದರ್ಭದಲ್ಲಿ ಘೋಷಣೆಯಾಗಿದೆ.
ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯ ದಿನಾಂಕದ ಪೋಸ್ಟರ್ ಬಿಡುಗಡೆ ಮಾಡಿರುವ “MR ಜಾಕ್’ ಚಿತ್ರತಂಡ ನಾಡಿನ ಜನತೆಗೆ ನಾಡಹಬ್ಬ ದಸರಾ ಶುಭಾಶಯ ತಿಳಿಸಿದೆ.
ಈಗಾಗಲೇ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟೀಸರ್ ಗೆ ನಿರೀಕ್ಷೆಗೂ ಮೀರಿ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸ್ಯವೇ ಪ್ರಧಾನವಾಗಿರುವ ಈ ಚಿತ್ರದ ತಾರಾಬಳಗದಲ್ಲಿ ಮಿತ್ರ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್, ಧರ್ಮಣ್ಣ, ಸುಶ್ಮಿತ ಜಗ್ಗಪ್ಪ ಮುಂತಾದವರಿದ್ದಾರೆ. ಶಿವಸೇನ ಛಾಯಾಗ್ರಾಹಕರಾಗಿ ಹಾಗೂ ವಿಜಯ್ ರಾಜ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದಾರೆ.
