ರಾಕಿಂಗ್ ಸ್ಟಾರ್ ಯಶ್ ಬರೀ ನ್ಯಾಷನಲ್ ಅಲ್ಲ.. ಅದಕ್ಕೂ ಮೇಲೆ. ಹೌದು.. ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಸದ್ದು ಮಾಡ್ತಿರೋ ಹೆಮ್ಮೆಯ ಕನ್ನಡಿಗ ಯಶ್, ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಟಾಕ್ಸಿಕ್‌ನ ಕೊನೆಯ ಹಂತಕ್ಕೆ ತಂದಿದ್ದಾರೆ. ಮುಂಬೈ ಶೂಟಿಂಗ್ ಮುಗಿಸಿರೋ ಟಾಕ್ಸಿಕ್ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
- ‘ಟಾಕ್ಸಿಕ್’ ಲಂಡನ್‌ನಲ್ಲಿ ಪ್ಲ್ಯಾನಿಂಗ್.. ಬೆಂಗಳೂರಲ್ಲಿ ಶೂಟಿಂಗ್
- ಮುಂಬೈ ಶೂಟಿಂಗ್ ಕಂಪ್ಲೀಟ್.. ತವರಲ್ಲಿ ಕೊನೆಯ ಶೆಡ್ಯೂಲ್
- ಕನ್ನಡ & ಇಂಗ್ಲಿಷ್‌ನಲ್ಲಿ ಚಿತ್ರೀಕರಣ.. ಗ್ಲೋಬಲ್ ಮಾರ್ಕೆಟಿಂಗ್
- ಹಾಲಿವುಡ್ ಟೆಕ್ನಿಷಿಯನ್ಸ್ ಜೊತೆ ಕೆಲಸ.. ರಾಕಿಭಾಯ್ ರಾಕ್ಸ್..!
ಟಾಕ್ಸಿಕ್.. ಕೆಜಿಎಫ್ ಬಳಿಕ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ. ಇದು ಬರೀ ಕನ್ನಡ ಅಥ್ವಾ ಇಂಡಿಯನ್ ಸಿನಿಮಾ ಅಲ್ಲ. ಔಟ್ ಅಂಡ್ ಔಟ್ ಗ್ಲೋಬಲ್ ಎಂಟರ್‌ಟೈನರ್. ಹೌದು.. ರಾಕಿಂಗ್ ಸ್ಟಾರ್ ಯಶ್ ನಾನು ಎಲ್ಲಿಗೂ ಹೋಗಲ್ಲ. ಎಲ್ಲರನ್ನೂ ಇಲ್ಲಿಗೇ ಕರೆಸುತ್ತೇನೆ ಎಂದಿದ್ರು. ಆ ಮಾತಿನಂತೆ ಹಾಲಿವುಡ್‌ನ ಟಾಪ್ ಟೆಕ್ನಿಷಿಯನ್ಸ್ ಹಾಗೂ ಕಲಾವಿದರನ್ನ ಕನ್ನಡಕ್ಕೆ ಕರೆಸಿ ಸಿನಿಮಾನ ಕಟ್ಟುತ್ತಿದ್ದಾರೆ.
ಟಾಕ್ಸಿಕ್ ಸಿಕ್ಕಾಬಟ್ಟೆ ಬಿಗ್ ಬಜೆಟ್ ಸಿನಿಮಾ ಆಗಿದ್ದು, ಬಿಗ್ ಸ್ಕೇಲ್‌ನಲ್ಲಿ ತಯಾರಾಗ್ತಿದೆ. ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದು, ಯಶ್ ಕೂಡ ಸಹ ನಿರ್ಮಾಣ ಮಾಡ್ತಿದ್ದಾರೆ. ಅಂದಹಾಗೆ ಗೋವಾ ಡ್ರಗ್ ಮಾಫಿಯಾ ಕಥಾನಕ ಇರಲಿರೋ ಈ ಚಿತ್ರದ ಟೀಸರ್ ಸಿನಿಮಾದ ಗತ್ತು, ಗಮ್ಮತ್ತು ಗೊತ್ತು ಮಾಡಿದೆ. ಅಷ್ಟರ ಮಟ್ಟಿಗೆ ರಿಚ್ ಆ್ಯಂಡ್ ಲ್ಯಾವಿಶ್ ಆಗಿ ಮೂಡಿಬರ್ತಿದೆ.
ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ತಯಾರಾಗ್ತಿರೋ ಟಾಕ್ಸಿಕ್ ಸಿನಿಮಾ, 2026ರ ಮಾರ್ಚ್ 19ಕ್ಕೆ ತೆರೆಗೆ ಬರೋದು ಪಕ್ಕಾ ಆಗಿದೆ. ಹಾಗಾದ್ರೆ ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಏನು ಅಂದ್ರೆ, ನಿನ್ನೆಯಷ್ಟೇ ಟಾಕ್ಸಿಕ್ ಮುಂಬೈ ಶೆಡ್ಯೂಲ್ ಮುಗಿಸಿ, ಲಂಡನ್‌ಗೆ ಹಾರಿದ್ದಾರೆ ಯಶ್. ಸತತ 45 ದಿನಗಳ ಆ್ಯಕ್ಷನ್ ಸೀಕ್ವೆನ್ಸ್ ಮುಗಿಸಿರೋ ರಾಕಿಭಾಯ್, ಈ ಟಾಕ್ಸಿಕ್ ಸಿನಿಮಾದ ಪ್ಲ್ಯಾನಿಂಗ್ಸ್ ಎಲ್ಲಾ ಲಂಡನ್‌ನಲ್ಲೇ ಮಾಡಿ, ಇಲ್ಲಿ ಶೂಟಿಂಗ್ ಮಾಡ್ತಿದ್ದಾರೆ.
ಇದೇ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಟಾಕ್ಸಿಕ್ ಚಿತ್ರದ ಕೊನೆಯ ಶೆಡ್ಯೂಲ್ ಶೂಟಿಂಗ್ ಶುಭಾರಂಭ ಆಗಲಿದ್ದು, ಲಾಸ್ಟ್ ಶೆಡ್ಯೂಲ್‌ನ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಮಾಡೋಕೆ ಸಜ್ಜಾಗಿದ್ದಾರೆ ಯಶ್ ಅಂಡ್ ಟೀಂ. ಸುಮಾರು ಆರು ತಿಂಗಳ ಕಾಲ ಮುಂಬೈನಲ್ಲೇ ಬೀಡುಬಿಟ್ಟುಕೊಂಡು, ಟಾಕ್ಸಿಕ್ ಶೂಟಿಂಗ್ ಬಹುತೇಕ ಮುಗಿಸಿರೋ ಟೀಂ, ಇದೀಗ ತವರಿಗೆ ಮರಳುತ್ತಿರೋದು ಇಂಟರೆಸ್ಟಿಂಗ್.
ಯಶ್ ಲಂಡನ್‌ಗೆ ಹಾರಿದ್ದು, ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿರೋ ದೃಶ್ಯ ಎಲ್ಲೆಡೆ ವೈರಲ್ ಆಗ್ತಿದೆ. ವೆಂಕಟ್ ಕೆ ನಾರಾಯಣ್‌ರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರವು ಅಂದುಕೊಂಡ ಡೇಟ್‌ಗೆ ಅಂದ್ರೆ ಮುಂದಿನ ಮಾರ್ಚ್ 19ಕ್ಕೆ ವರ್ಲ್ಡ್‌ವೈಡ್ ಏಕಕಾಲದಲ್ಲಿ ಹತ್ತಾರು ಭಾಷೆಗಳಲ್ಲಿ ತೆರೆಗಪ್ಪಳಿಸಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್