ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!

ಯಶ್-ತಾರಾ ಸುತಾರಿಯ ರಂಗು.. ಟಾಕ್ಸಿಕ್ ಸಖತ್ ಗುಂಗು

ಸ್ವ (25)

ಟಾಕ್ಸಿಕ್ ಅಡ್ಡಾದಿಂದ ಮತ್ತೊಂದು ಸಾಂಗ್ ಹೊರಬಿದ್ದಿದೆ. ಇಂಟರೆಸ್ಟಿಂಗ್ ಅಂದ್ರೆ ಮೊದಲ ಸಾಂಗ್‌ಗಿಂತ ಮನಮೋಹಕವಾಗಿದೆ ಈ ಸಾಂಗ್. ಪ್ಲೇ ಬಾಯ್, ಪ್ರಣಯರಾಜ ಹಾಗೂ ಕಿಂಗ್ ಆಫ್ ರೊಮ್ಯಾನ್ಸ್ ಆಗಿ ರಾಕಿಂಗ್ ರಾಯನ ಪ್ರೇಮಲೋಕ ಸಿಕ್ಕಾಪಟ್ಟೆ ಕಲರ್‌ಫುಲ್ ಅನಿಸ್ತಿದೆ. ಏಕಪತ್ನಿತ್ವದ ನಿಯಮವನ್ನೇ ಪ್ರಶ್ನಿಸುವಂತಿರೋ ಈ ರೊಮ್ಯಾಂಟಿಕ್ ಗೀತೆಯ ಕಂಪ್ಲೀಟ್ ಕಹಾನಿ ನಿಮಗಾಗಿ ಕಾಯ್ತಿದೆ.

ಯಶ್-ತಾರಾ ಸುತಾರಿಯ ರಂಗು.. ಟಾಕ್ಸಿಕ್ ಸಖತ್ ಗುಂಗು

ಫಸ್ಟ್ ಸಾಂಗ್ ಮೋಹಕ.. ಸೆಕೆಂಡ್ ಸಾಂಗ್ ಮನಮೋಹಕ..!

‘ಏಕಪತ್ನಿತ್ವ’ ಹೃದಯದ್ದಾ ಅಥವಾ ಸಮಾಜದ ನಿಯಮವಾ..?

ಓ ಮೈ ಗಾಡ್.. ರಾಯನ ಲೋಕ ರೋಚಕ, ರೋಮಾಂಚಕ..!

ರಾಕಿಂಗ್ ಸ್ಟಾರ್ ಯಶ್ ಗನ್ ಹಿಡಿದ್ರೆ ವಿನಾಶಕಾರಿ ಆಗ್ತಾರೆ. ವಿದ್ವಂಸ ಮಾಡಿ ಬಿಡ್ತಾರೆ. ಅದು ಬರೀ ಆ್ಯಕ್ಷನ್ ಖದರ್‌‌ಗಷ್ಟೇ ಸೀಮಿತ ಅಲ್ಲ. ಪ್ರಣಯ ಅಂತ ಬಂದ್ರೆ ಅದರಲ್ಲೂ ಮಾಸ್ಟರ್‌ ಈ ರಾಕಿಂಗ್ ರಾಯ. ಯೆಸ್.. ಟಾಕ್ಸಿಕ್ ಚಿತ್ರದಲ್ಲಿ ಗ್ಯಾಂಗ್‌ಸ್ಟರ್‌‌ಗಳ ಮಾನ್‌ಸ್ಟರ್ ಆಗಿ ಮಸ್ತ್ ಮನರಂಜನೆ ಕೊಡ್ತಿರೋ ಯಶ್, ಸದ್ಯ ಪ್ಲೇಬಾಯ್, ಪ್ರಣಯರಾಜ, ಕಿಂಗ್ ಆಫ್ ರೊಮ್ಯಾನ್ಸ್ ಅನಿಸಿಕೊಂಡಿದ್ದಾರೆ.

ಟಾಕ್ಸಿಕ್ ಚಿತ್ರದ ಫಸ್ಟ್ ಸಾಂಗ್ ನೋಡಿ ಓ ಮೈ ಗಾಡ್.. ಇದೆಷ್ಟು ರೋಮಾಂಚಕವಾಗಿದೆ ಗುರು..? ಪ್ರಣಯಕ್ಕೆ ಕೇರ್ ಆಫ್ ಅಡ್ರೆಸ್‌‌ನಂತಿದೆಯಲ್ವಾ..? ಸಿಕ್ಕಾಪಟ್ಟೆ ಮೋಹಕವಾಗಿದೆ ಅಂದಿದ್ರು ಚಿತ್ರಪ್ರೇಮಿಗಳು. ಆದ್ರೀಗ ಸೆಕೆಂಡ್ ಸಾಂಗ್ ರಿಲೀಸ್ ಆಗಿದೆ. ಇದು ಮನಮೋಹಕವಾಗಿದೆ. ಯಾಕಂದ್ರೆ ಯಶ್-ತಾರಾ ಸುತಾರಿಯಾ ನಡುವಿನ ಕೆಮಿಸ್ಟ್ರಿ ನೋಡುಗರ ಕಣ್ಣು ಕುಕ್ಕುವಂತಿದೆ. ಆದ್ರೆ ಈ ಬಾರಿ ಇಂಟೆನ್ಸ್ ರೊಮ್ಯಾನ್ಸ್ ಜೊತೆ ಡೀಪ್ ಎಮೋಷನ್ಸ್‌ನ ಬ್ಲೆಂಡ್ ಮಾಡಿ ದೃಶ್ಯಗುಚ್ಚ ಕಟ್ಟಿದ್ದಾರೆ ಡೈರೆಕ್ಟರ್ ಗೀತು ಮೋಹನ್‌ದಾಸ್.

ಈ ಮನಮೋಹಕ ಸಾಂಗ್‌‌ನಲ್ಲಿ ಯಶ್ ರೊಮ್ಯಾಂಟಿಕ್ ಬಾಯ್ ಆಗಿ ಏಕಪತ್ನಿತ್ವ ಪದ್ದತಿಗೆ ಸವಾಲೊಡ್ಡುವ ಪಾತ್ರಧಾರಿಯಾಗಿ ಕಾಣಸಿಗಲಿದ್ದಾರೆ. ಅಂದಹಾಗೆ ಏಕಪತ್ನಿತ್ವ ಅನ್ನೋದು ಹೃದಯದ ನಿಯಮವಾ ಅಥ್ವಾ ಸಮಾಜದ ನಿಯಮವಾ ಅನ್ನೋದು ಇಲ್ಲಿ ಬಲವಾದ ಪ್ರಶ್ನೆಯಾಗಿ ಕಾಡಲಿದೆ. ಅಂದಹಾಗೆ ಇದೇ ಪ್ರಶ್ನೆಯನ್ನ ನಟಿ ತಾರಾ ಸುತಾರಿಯಾ ಕೂಡ ಸಾಂಗ್ ರಿಲೀಸ್‌ಗೂ ಮುನ್ನ ತಮ್ಮ ಇನ್ಸ್‌ಟಾ ಸ್ಟೋರೀಸ್‌‌ನಲ್ಲಿ ಬರೆದುಕೊಂಡಿದ್ರು. ಅಲ್ಲಿಗೆ ರಾಯ ಪಾತ್ರಧಾರಿ ಯಶ್‌‌ಗೆ ಇಲ್ಲಿಯ ತನಕ ನಟಿ ಕಿಯಾರಾ ಪತ್ನಿ ಅಂದುಕೊಂಡಿದ್ದ ಪ್ರೇಕ್ಷಕರಿಗೆ ಆತ ಸಾಕಷ್ಟು ಮಂದಿ ಪ್ರೀತಿ, ಪ್ರೇಮ ಹಾಗೂ ಮೋಹದ ಬಲೆಯಲ್ಲಿರೋ ಬಹುಪತ್ನಿತ್ವ ಪದ್ಧತಿ ಪಾಲಿಸೋ ವ್ಯಕ್ತಿ ಅನ್ನೋದು ಇದ್ರಿಂದ ಕಾತರಿ ಆಗ್ತಿದೆ

‘ಟಾಕ್ಸಿಕ್ ಲೇಡೀಸ್ ಪ್ರೇಮಲೋಕ’ದಲ್ಲಿ ರಾಯ ರೌಂಡ್ಸ್..!!

ಪ್ರಮೋದ್ ಮರವಂತೆ ಸಾಹಿತ್ಯ.. ಸಿದ್ದಾರ್ಥ್ ಬಸ್ರೂರು ಕಂಠ

ಟ್ರೆಂಡಿಂಗ್ ಹಾಗೂ ಟ್ರೇಡಿಂಗ್ ಎರಡರಲ್ಲೂ ಯಶ್ ನಂ.1

ಅಟೆನ್ಷನ್ ಪ್ಲೀಸ್.. ಯಶ್ ಸೆಲ್ಫ್ ಮೇಡ್ ಶಹಜಾದ ಗುರು

ನಮ್ಮ ಅಪ್ಪಟ ಕನ್ನಡಿಗ ಪ್ರಮೋದ್ ಮರವಂತೆ ಬರೆದಿರೋ ಮನಮೋಹಕ ಸಾಹಿತ್ಯಕ್ಕೆ ತನಿಷ್ಕ್, ಫಹೀಮ್ ಹಾಗೂ ಅರ್ಸ್ಲಾನ್ ಸಂಗೀತ ಸಂಯೋಜಿಸಿದ್ದು, ಸಿದ್ದಾರ್ಥ್ ಬಸ್ರೂರು ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ನೋಡೋಕೆ ಇದು ಯಶ್-ತಾರಾ ಸುತಾರಿಯಾ ಸಾಂಗ್. ಆದ್ರೆ ಇಲ್ಲಿ ಕಿಯಾರಾ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲರ ಗ್ಲಾಮರ್ ಝಲಕ್ ಕಾಣಸಿಕ್ಕಿದೆ. ಅಂದಹಾಗೆ ಟಾಕ್ಸಿಕ್ ಲೇಡೀಸ್ ಪ್ರೇಮಲೋಕದಲ್ಲಿ ರಾಯನ ಪಯಣ ಸಖತ್ ಇಂಪ್ರೆಸ್ಸೀವ್ & ಇಂಟರೆಸ್ಟಿಂಗ್ ಅನಿಸಿದೆ.

ರೆಟ್ರೋ ವಿಂಟೇಜ್ ಲುಕ್ಸ್‌‌ನಲ್ಲಿ ಕಿಕ್ ಕೊಡ್ತಿರೋ ಚೆಲುವೆಯರ ಜೊತೆ ಯಶ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಹೌದು.. ರಾಕಿಂಗ್ ರಾಯನ ಕಾಸ್ಟ್ಯೂಮ್ಸ್, ಸ್ವ್ಯಾಗ್, ಸಿಗರೇಟ್ ಸೇದುವ ಸ್ಟೈಲ್, ಎಮೋಷನ್ಸ್ ಎಲ್ಲವೂ ಹೈಲೈಟ್ ಅನಿಸ್ತಿವೆ. ಅಂದಹಾಗೆ ಟಾಕ್ಸಿಕ್ ಸೆಕೆಂಡ್ ಸಾಂಗ್ ಕೂಡ ಯೂಟ್ಯೂಬ್‌‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಪಂಚಭಾಷೆಗಳಲ್ಲಿ ರಿಲೀಸ್ ಆಗಿರೋ ಈ ಗೀತೆಗೆ ಎಲ್ಲಾ ಭಾಷೆಯ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಯೂಟ್ಯೂಬ್ ಜೊತೆ ಸೋಶಿಯಲ್ ಮಿಡಿಯಾ ಹೈಜಾಕ್ ಮಾಡಿರೋ ಯಶ್ & ಟಾಕ್ಸಿಕ್ ಲೇಡೀಸ್ ಸಿನಿಮಾ ಮೇಲಿನ ಕ್ರೇಜ್ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ.

ದಿಸ್ ಈಸ್ ಜಸ್ಟ್ ಬಿಗಿನಿಂಗ್ ಅಷ್ಟೇ. ಆದ್ರೆ ಅಸಲಿ ಪಿಕ್ಚರ್ ಅಭಿ ಬಾಕಿ ಹೈ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೂಡಿ ಯಶ್ ಸಹ ನಿರ್ಮಾಣ ಮಾಡಿರೋ ಟಾಕ್ಸಿಕ್ ಸಿನಿಮಾ ಇದೇ ಆಗಸ್ಟ್ 26ಕ್ಕೆ ವರ್ಲ್ಡ್‌‌ವೈಡ್ ತೆರೆಗಪ್ಪಳಿಸಲಿದೆ. ಟೀಸರ್‌ಗಳ ಜೊತೆ ಸಾಂಗ್ಸ್ ಕೂಡ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡ್ತಿದ್ದು, ಆ ಕೌತುಕತೆ ಬಾಕ್ಸ್ ಆಫೀಸ್‌‌ ತುಂಬಿ ತುಳುಕಲು ಸಹಕಾರಿ ಆಗಲಿದೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಸದ್ಯ ಟ್ರೆಂಡಿಂಗ್ ಹಾಗೂ ಟ್ರೇಡಿಂಗ್ ಎರಡರಲ್ಲೂ ಯಶ್ ನಂಬರ್ ಒನ್. ಯಾಕಂದ್ರೆ ಆತ ಸೆಲ್ಫ್ ಮೇಡ್ ಶಹಜಾದ.

 

 

 

 

Exit mobile version