“ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡಲಿ”: ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ವಾರ್ನಿಂಗ್

“ಧಮ್ ಇದ್ರೆ ನಾನು ಹೊರಗೆ ಬಂದ್ಮೇಲೆ ಮಾತಾಡಲಿ” ಜೈಲಿನಿಂದಲೇ ಧನ್ವೀರ್ ಗೆ ದರ್ಶನ್ ವಾರ್ನಿಂಗ್

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು, ಧನ್ವೀರ್ ವಿರುದ್ಧ ಜೈಲಿನಿಂದಲೇ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಧನ್ವೀರ್ ತಮ್ಮ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗನ ಬಗ್ಗೆ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ದರ್ಶನ್, “ನಾನು ಜೈಲಿನಲ್ಲಿರುವಾಗ ನನ್ನ ಹೆಂಡತಿ ಮತ್ತು ಮಕ್ಕಳ ಬಗ್ಗೆ ಮಾತನಾಡುವ ಅಧಿಕಾರ ಅವನಿಗೆ ಯಾರು ಕೊಟ್ಟರು?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, “ಧೈರ್ಯ ಇದ್ದರೆ ನಾನು ಹೊರಗೆ ಬಂದ ಮೇಲೆ ನನ್ನ ಮುಂದೆ ಮಾತನಾಡಲಿ” ಎಂದು ವಾರ್ನಿಂಗ್ ನೀಡಿದ್ದಾರೆ.

ಝೈದ್ ಖಾನ್ ಹೇಳಿಕೆ

ದರ್ಶನ್ ಭೇಟಿ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಝೈದ್ ಖಾನ್, “ಧನ್ವೀರ್ಗೆ ವಾರ್ನಿಂಗ್ ಕೊಡುವಂತೆ ಹೇಳಿದರು. ನಾನು ಒಳಗಡೆ ಇದ್ದಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ ಮೇಲೆ ಧೈರ್ಯ ಇದ್ರೆ ನನ್ನ ಮುಂದೆ ಮಾತಾಡಲಿ. ಪೋನ್‌ನಲ್ಲಿ ಎಲ್ಲೋ ಒಂದು ಕಡೆ ಕುತ್ಕೊಂಡು ಮಾತಾಡೋದಲ್ಲ” ಎಂದು ಹೇಳಿದರು.

“ಅಭಿಮಾನಿಗಳಿಗೆ ರಾಂಗ್ ಮೆಸೇಜ್”

ಝೈದ್ ಖಾನ್ ಮುಂದುವರಿಸಿ, “ಜನರಿಗೆ, ಅಭಿಮಾನಿಗಳಿಗೆ ರಾಂಗ್ ಮೆಸೇಜ್ ಕೊಡ್ತಾ ಇದ್ದಾನೆ. ಎಲ್ಲರನ್ನ ಡೈವರ್ಟ್ ಮಾಡೋ ಕೆಲಸ ಮಾಡ್ತಾ ಇದ್ದಾನೆ. ಇವ್ನು ಎಲ್ಲವನ್ನೂ ನಾನು ಮಾಡ್ದೇ ಮಾಡ್ದೇ ಅಂತಾನೇ. ಇವನನ್ನ ಕೇಳಿಕೊಂಡ ಅಕ್ಕ ಮತ್ತೆ ದರ್ಶನ್ ಅಣ್ಣ ಹೋಗಿದ್ರಾ? ಸಹಾಯ ಮಾಡಿ ಅಂತ ಅಣ್ಣ ಕೂಡ ಅವನ ಹತ್ತಿರ ಹೋಗಿಲ್ಲ. ನಾನು ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ, ಮನೆ ಹಾಳು ಮಾಡ್ದ. ನಾವು ಎಲ್ಲರೂ ಮಾಡ್ತಾ ಇರೋದು ದರ್ಶನ್ ಅಣ್ಣನಿಗೋಸ್ಕರ. ಅವರ ಪ್ರೀತಿಸುವ ಪತ್ನಿ, ಮಗನ ಬಗ್ಗೆ ಮಾತಾಡಿದ್ರೆ ಹೇಗೆ? ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾನೆ” ಎಂದು ಆರೋಪಿಸಿದರು.

ಧನ್ವೀರ್ ವಿರುದ್ಧ ದೂರು

ಜೈಲಿನಿಂದಲೇ ಧನ್ವೀರ್ ವಿರುದ್ಧ ದರ್ಶನ್ ದೂರು ನೀಡಲಿದ್ದಾರೆ. ಈ ಕುರಿತು ಅವರು ವಕೀಲರೊಂದಿಗೆ ಚರ್ಚೆ ಮಾಡಿದ್ದು, ಶೀಘ್ರದಲ್ಲೇ ದೂರು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. “ನಾನೇ ಮಾತಾಡಿದ್ರೆ ಅಭಿಮಾನಿಗಳಿಗೆ ಗೊಂದಲ ಕ್ಲಿಯರ್ ಆಗುತ್ತೆ” ಎಂದು ಅವರು ಹೇಳಿದ್ದಾರೆ.

ಅಭಿಮಾನಿಗಳಿಗೆ ಸಂದೇಶ

ಅಭಿಮಾನಿಗಳಿಗೆ ಸಂದೇಶ ನೀಡಿರುವ ದರ್ಶನ್, “ಯಾವುದೇ ಕಾರಣಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ. ಅಭಿಮಾನಿಗಳು ಧೈರ್ಯವಾಗಿ, ಆರಾಮಾಗಿ ಇರಿ. ಸ್ವಲ್ಪ ದಿನ ಎಲ್ಲರೂ ಸಮಾಧಾನವಾಗಿ ಇರಿ” ಎಂದು ಹೇಳಿದ್ದಾರೆ. “ಹಣಕಾಸಿನ ವಿಚಾರ ಅಣ್ಣಗೆ ದೊಡ್ಡ ಮ್ಯಾಟರ್ ಅಲ್ಲ. ಅವರು ಈಗ ಜೈಲಿನಲ್ಲಿ ಇದ್ದಾರೆ, ಅವರಿಗೆ ಕೆಲಸ ಇಲ್ಲ. ಕೆಲಸ ಮಾಡಿದ್ರೆನೇ ಅವರಿಗೆ ಹಣ ಬರೋದು. ಕೇಸ್ ನಡೆಸೋಕೆ ಲಾಯರ್‌ಗೆ ಹಣ ಕೊಡಬೇಕು” ಎಂದು ಅವರು ತಿಳಿಸಿದ್ದಾರೆ.

ಝೈದ್ ಖಾನ್ ಬಗ್ಗೆ ಆಡಿಯೋ ವಿವಾದ

ಝೈದ್ ಖಾನ್ ಬಗ್ಗೆ ವೈರಲ್ ಆಗಿರುವ ಆಡಿಯೋ ಕುರಿತು ಪ್ರತಿಕ್ರಿಯಿಸಿದ ದರ್ಶನ್, “ಅವನಂತ ಚಿಲ್ಲರೆಯವನ ಬಗ್ಗೆ ನಾನು ಮಾತಾಡಲ್ಲ. ಅವನು ಯಾರು? ದರ್ಶನ್ ಅವರ ಹೆಸರು ಹೇಳಿಕೊಂಡು ಬೆಳೆದಿದ್ದಾನೆ. ಅವನ ಸ್ವಂತವಾಗಿ ಬೆಳೆದಿದ್ದು ಮಾತ್ರ ಏನು ಇಲ್ಲ. ಅವನು ನನ್ನ ಲೆವೆಲ್‌ಗೆ ಬರಲಿ ಮೊದಲು, ಆಮೇಲೆ ಮಾತಾಡ್ತೀನಿ” ಎಂದು ಹೇಳಿದ್ದಾರೆ.

ಸಿಎಂ, ಶಾಸಕರ ಬಗ್ಗೆ ಆಡಿಯೋ

ಸಿಎಂ ಹಾಗೂ ಶಾಸಕರ ಬಗ್ಗೆಯೂ ಧನ್ವೀರ್ ಮಾತನಾಡಿರುವ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ದರ್ಶನ್, “ಅನವಶ್ಯಕ ಮಾತುಗಳನ್ನು ಮಾತಾಡ್ತಾ ಇದ್ದಾರೆ ಅಂತ ನಾನು ಬೇಸರ ಮಾಡಿಕೊಂಡಿದ್ದೇನೆ. ನಾಲಿಗೆ ಇದೇ ಅಂತ ಬೇಕಾದದ್ದು ಮಾತಾಡೋದಲ್ಲ. ದೊಡ್ಡವರಿಗೆ, ಅವರ ಸ್ಥಾನಕ್ಕೆ ನಾವು ಬೆಲೆ ಕೊಡಬೇಕು. ಮಾಧ್ಯಮದವರನ್ನು ಬಾಯಿಗೆ ಬಂದ ಹಾಗೆ ಬೈತಾನೇ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಧನ್ವೀರ್ಗೆ ಮುಖನೇ ಇಲ್ಲ”

“ಧನ್ವೀರ್ಗೆ ಎರಡು ಮುಖ ಅಲ್ಲ, ಅವನಿಗೆ ಮುಖನೇ ಇಲ್ಲ. ಎಲ್ಲರ ಮುಖವಾಡ ಬಯಲು ಮಾಡ್ತೀನಿ ಎನ್ನುವ ವಿಚಾರ ಅವನದು. ನನ್ನ ಬಗ್ಗೆ ವಿಡಿಯೋ, ಆಡಿಯೋ ಇದೇ ಅಂದಿದ್ದಾನೆ, ಬಿಡಲಿ. ವಾಯ್ಸ್ ರೆಕಾರ್ಡ್ ಇದೇ ಅಂದಿದ್ದಾನೆ, ಬಿಡಲಿ, ಜನರಿಗೆ ಗೊತ್ತಾಗಲಿ. ಇವತ್ತೇ ಬಿಡ್ತೀನಿ, ನಾಳೆ ಬಿಡ್ತೀನಿ ಅಂತಾನೇ, ಬಿಡಲಿ, ಕರ್ನಾಟಕ ಜನತೆಗೆ ಗೊತ್ತಾಗಲಿ. ಅವನೇ ಬಚ್ಚಿಟ್ಟುಕೊಂಡು ಓಡಾಡ್ತಾ ಇದ್ದಾನೆ. ಅವನ ಬಗ್ಗೆ ನನಗೆ ಮಾತಾಡೋಕೆ ಇಷ್ಟನೇ ಇಲ್ಲ” ಎಂದು ದರ್ಶನ್ ಹೇಳಿದ್ದಾರೆ.

ವಿಜಯಲಕ್ಷ್ಮೀ ಬಗ್ಗೆ ಭಾವುಕ

ವಿಜಯಲಕ್ಷ್ಮೀ ಅವರ ಬಗ್ಗೆ ಮಾತನಾಡಿದ ದರ್ಶನ್, “ವಿಜಯಲಕ್ಷ್ಮೀ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಂತ ನನಗೆ ಗೊತ್ತು. ದರ್ಶನ್ ಅಣ್ಣನಿಗೋಸ್ಕರ ಅವರು ಎಲ್ಲರನ್ನ ಭೇಟಿ ಮಾಡಿದ್ದಾರೆ. ಎಷ್ಟೋ ದಿನದಿಂದ ವಿಜಯಲಕ್ಷ್ಮೀ ಅಕ್ಕನಿಗೆ ನಿದ್ದೆ ಇಲ್ಲ” ಎಂದು ಭಾವುಕರಾದರು. “ನನ್ನ ಗಂಡ ಜೈಲಿನಲ್ಲಿ ಒಳ್ಳೆ ಊಟವನ್ನ ಮಾಡ್ತಾ ಇಲ್ಲ, ನಾನು ಹೊರಗೆ ಹೇಗೆ ಊಟ ಮಾಡೋಕೆ ಸಾಧ್ಯ ಎಂದು ಅವರು ಹೇಳಿದ್ದಾರೆ. ಅವರು ದರ್ಶನ್ ಸರ್‌ಗೆ ಹೇಗೆ ಕೆಟ್ಟದ್ದನ್ನು ಬಯಸುತ್ತಾರೆ?” ಎಂದು ಪ್ರಶ್ನಿಸಿದರು.

Exit mobile version