ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ಕೆಜಿಎಫ್-2 ಬಳಿಕ ಯಶ್ ಅಳೆದು ತೂಗಿ ಟಾಕ್ಸಿಕ್ ಕೈಗೆತ್ತಿಕೊಂಡಿದ್ದಾರೆ. ಸದ್ಯ ಟಾಕ್ಸಿಕ್ ಚಿತ್ರತಂಡದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹಾಗೆಯೇ ಗಾಳಿ ಸುದ್ದಿಗೂ ತೆರೆ ಬಿದ್ದಿದೆ. ಟಾಕ್ಸಿಕ್ ಮುಂದಿನ ವರ್ಷವೂ ರಿಲೀಸ್ ಆಗೋದಿಲ್ಲ ಅನ್ನೋ ಸುದ್ದಿ ಅಭಿಮಾನಿಗಳ ನಿದ್ದೆಗೆಡಿಸಿತ್ತು. ಈ ಬಗ್ಗೆ ಸ್ವತಃ ನಿರ್ಮಾಣ ಸಂಸ್ಥೆ ಕೆವಿಎನ್ ಕ್ಲಾರಿಟಿ ಕೊಟ್ಟಿದೆ. ಏನಿದು ಅಸಲಿ ಕಥೆ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.
ಕೆಜಿಎಫ್-2 ಅಂತ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಮೂರೂವರೆ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಇಷ್ಟೊಂದು ತಡ ಮಾಡಿದ್ದಕ್ಕೆ ಯಶ್ ಅಭಿಮಾನಿಗಳು ಕಾದು ಕಾದೂ ಸುಸ್ತಾಗಿದ್ದಾರೆ. ಅಂದುಕೊಂಡ ಡೇಟ್ ಗೆ ಸಿನಿಮಾ ರಿಲೀಸ್ ಮಾಡ್ತಾರೋ ಅತ್ವ ಮುಂದೂಡಿಕೆ ಆಗುತ್ತಾ..? ನೇರವಾಗಿ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಹೀಗಾಗಿ ಅಂತರಾಷ್ಟ್ರೀಯ ಫಿಲ್ಮ್ ಮೇಕರ್ಸ್ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!
ಊಹಾಪೋಹಗಳಿಗೆ ತೆರೆ ಎಳೆದ ಟಾಕ್ಸಿಕ್ ಪ್ರೊಡ್ಯೂಸರ್
ಹೀಗಿರುವಾಗ ಇತ್ತೀಚೆಗೆ ಯಶ್ ಸಿನಿಮಾದ ಮೇಕಿಂಗ್ ನೋಡಿದ್ದು, ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ತೆಗೆದ ದೃಶ್ಯಗಳು ಅವರಿಗೆ ಇಷ್ಟ ಆಗಿಲ್ಲ. ಹೀಗಾಗಿ ಟಾಕ್ಸಿಕ್ ರೀ-ಶೂಟ್ ಮಾಡುವುದಕ್ಕೆ ಯಶ್ ನಿರ್ಧಾರ ಮಾಡಿದ್ದಾರಂತೆ. ಹೀಗಂತ ಟಾಕ್ಸಿಕ್ ಚಿತ್ರದ ಸುತ್ತ ಒಂದಷ್ಟು ರೂಮರ್ಸ್ ಹಬ್ಬಿದ್ದವು. ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ ಅನ್ನೋದೇ ಈ ಗಾಳಿ ಸುದ್ದಿಯ ತಿರುಳಾಗಿತ್ತು.

ಉಹಾಪೊಹಗಳಿಗೆ ಚಿತ್ರ ನಿರ್ಮಾಣ ಸಂಸ್ಥೆ ತೆರೆ ಎಳೆದಿದೆ. ಬಾಲಿವುಡ್‌ನ ಟ್ರೇಡ್ ಎಕ್ಸ್‌ಪರ್ಟ್ ತರಾನ್ ಆದರ್ಶ್ ತನ್ನ ಎಕ್ಸ್ ಖಾತೆಯಲ್ಲಿ ಟಾಕ್ಸಿಕ್ ರಿಲೀಸ್ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಬಗ್ಗೆ ರೂಮರ್ ಹರಿದಾಡುತ್ತಿದ್ದಂತೆ ಕೆವಿಎನ್ ಪ್ರೊಡಕ್ಷನ್ ಜೊತೆ ಕ್ಲಾರಿಟಿ ತೆಗೆದುಕೊಂಡು ಮಾಹಿತಿ ಹಂಚಿಕೊಂಡಿದ್ದಾರೆ. ಕೆವಿಎನ್ ಈಗಾಗಲೇ ಮಾರ್ಚ್ 19, 2026ಕ್ಕೆ ಸಿನಿಮಾ ರಿಲೀಸ್ ಎಂದು ಹೇಳಿಕೊಂಡಿತ್ತು. ಅದೇ ದಿನ ಬಿಡುಗಡೆಯಾಗುತ್ತಿದ್ದು, ಸಿನಿಮಾ ಮುಂದೂಡುತ್ತಾರೆಂಬ ವದಂತಿಗಳಲ್ಲ ಸುಳ್ಳು ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟ ಪಡಿಸಿದ್ದಾಗಿ ತರಾನ್ ಆದರ್ಶ್ ಹೇಳಿದ್ದಾರೆ.
ಅಂದುಕೊಂಡ ಡೇಟ್.. 2026 ಮಾರ್ಚ್ 19ಕ್ಕೆ ಟಾಕ್ಸಿಕ್
ಜ-8.. ಭರ್ಜರಿ ಪ್ರಮೋಷನ್ಸ್‌ಗೆ ರಾಕಿಭಾಯ್ ಸಿಗ್ನಲ್..!
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಟಾಕ್ಸಿಕ್ ಗ್ಲೋಬಲ್ ಬಾಕ್ಸಾಫೀಸ್‌ಗೆ ಲಗ್ಗೆ ಇಡುವುದಕ್ಕೆ 140 ದಿನಗಳು ಬಾಕಿ ಉಳಿದಿವೆ. ಮಾರ್ಚ್ 19, 2026ಕ್ಕೆ ಟಾಕ್ಸಿಕ್ ರಿಲೀಸ್ ಆಗೋದು ಫಿಕ್ಸ್. ಯುಗಾದಿ ಹಬ್ಬದ ಸಂಭ್ರಮದಲ್ಲಿ ಟಾಕ್ಸಿಕ್ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹಾಗೇ ಈದ್ ಕೂಡ ಇರುವುದರಿಂದ ರಜೆಯ ದಿನಗಳನ್ನು ಸದುಪಯೋಗ ಪಡೆದುಕೊಳ್ಳುವುದಕ್ಕೆ ನಿರ್ಧರಿಸಿದೆ. ಹೀಗಾಗಿ ಈ ಸಿನಿಮಾ ರಿಲೀಸ್ ಡೇಸ್ ಬದಲಾವಣೆ ಇಲ್ಲಾ. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಏಕಾಕಾಲಕ್ಕೆ ಶೂಟಿಂಗ್ ನಡೆದಿದ್ದು, ಭಾರತದ ಪ್ರಮುಖ ಐದು ಭಾಷೆಗಳು ಸೇರಿ, ಹಲವು ವಿದೇಶಿ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಇನ್ನು ಟಾಕ್ಸಿಕ್ ಸಿನಿಮಾ ಬಹುತೇಕ ಶೂಟಿಂಗ್ ಮುಗಿದಿದೆ. ಕೆಲವು ಪ್ಯಾಚ್ ವರ್ಕ್‌ಗಳು ಬಾಕಿ ಇದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇನ್ನು ಯಶ್ ಮುಂಬೈನಲ್ಲಿ ಬೀಡು ಬಿಟ್ಟಿದ್ದು, ರಾಮಾಯಣ ಸಿನಿಮಾದ ಚಿತ್ರೀಕರಣದಲ್ಲಿ ಯಶ್ ಭಾಗಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಮುಗಿಸಿ, ಟಾಕ್ಸಿಕ್ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಮುಂದಿನ ವರ್ಷ ಜನವರಿಯಿಂದ ಟಾಕ್ಸಿಕ್ ಪ್ರಮೋಷನ್ ಕಿಕ್ ಸ್ಟಾರ್ಟ್ ಸಿಗುವ ಲಕ್ಷಣಗಳು ಎದ್ದು ಕಾಣ್ತಿವೆ.
 
			
 
					




 
                             
                             
                             
                            