ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ ನಟನೆಯ ‘ದಿ ಗರ್ಲ್​ಫ್ರೆಂಡ್​’ ಸಿನಿಮಾ ನ. 7ಕ್ಕೆ ರಿಲೀಸ್

Untitled design 2025 10 04t175428.546

ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ಅಭಿಯದ ದಿ ಗರ್ಲ್‌ಫ್ರೆಂಡ್ ಚಿತ್ರದ ಹೊಸ ಅಪ್ ಡೇಟ್ ಸಿಕ್ಕಿದೆ.
ಟೈಟಲ್‌ನಿಂದಲೇ ಹೆಚ್ಚು ಗಮನ ಸೆಳೆದಿರೋ ಈ ಚಿತ್ರ, ಯಾವಾಗ ರಿಲೀಸ್‌ ಆಗುತ್ತದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮುಂದಿನ ತಿಂಗಳು ಅಂದರೆ ನವೆಂಬರ್ 7ರಂದು ದಿ ಗರ್ಲ್ ಫ್ರೆಂಡ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ.

ದಿ ಗರ್ಲ್‌ಫ್ರೆಂಡ್’ ಸಿನಿಮಾವನ್ನು ‘ಗೀತಾ ಆರ್ಟ್ಸ್’ ಹಾಗೂ ‘ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್’ ಸಂಸ್ಥೆಗಳು ಒಟ್ಟಾಗಿ ನಿರ್ಮಾಣ ಮಾಡುತ್ತಿವೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ರಾಹುಲ್ ರವೀಂದ್ರನ್ ಅವರು ನಿರ್ದೇಶನ ಮಾಡಿದ್ದಾರೆ. ಸುಂದರ ಪ್ರೇಮಕಥೆಯನ್ನು ‘ದಿ ಗರ್ಲ್‌ ಫ್ರೆಂಡ್‌’ ಸಿನಿಮಾ ಮೂಲಕ ಅವರು ಹೇಳಲಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೃಷ್ಣನ್ ವಸಂತ್ ಛಾಯಾಗ್ರಹಣ, ಚೋಟಾ ಕೆ ಪ್ರಸಾದ್ ಸಂಕಲನ ಸಿನಿಮಾಗಿದೆ.

Exit mobile version