ಪರಪ್ಪನ ಅಗ್ರಹಾರ ಜೈಲು ಹಕ್ಕಿಯಾಗಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕೊನೆಗೂ ಒಂದು ಸಣ್ಣ ಜಯ ಸಿಕ್ಕಂತಾಗಿದೆ. ಕುಟುಂಬಸ್ಥರನ್ನ ಒಳ ಸಂದರ್ಶನಕ್ಕೆ ಅನುವು ಮಾಡಿಕೊಡಲು ಕೋರ್ಟ್ ಮೊರೆ ಹೋಗಿದ್ದ ಡಿಬಾಸ್‌ಗೆ ಕೋರ್ಟ್ ಏನೋ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಕಂಡಿಷನ್ ಅಪ್ಲೈ ಮಾಡಿದೆ. ಆ ಕಂಡಿಷನ್ ಏನು..? ವಿಜಯಲಕ್ಷ್ಮೀ ಹಾಗೂ ವಿನೀಶ್ ದರ್ಶನ್‌ರನ್ನ ನೇರವಾಗಿ ಭೇಟಿ ಆಗೋಕೆ ಆಗುತ್ತಾ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್ ಇಲ್ಲಿದೆ.
- ದರ್ಶನ್‌ಗೆ ಜೈಲಲ್ಲೇ ಯುಗಾದಿ.. ಎಣ್ಣೆ ಸ್ನಾನ, ಹೋಳಿಗೆ ಇಲ್ಲ
- ಡಿ ಬಾಸ್‌ಗೆ ಒಂದು ಗುಡ್ ನ್ಯೂಸ್.. ಆದ್ರೆ ಕಂಡಿಷನ್ ಅಪ್ಲೈ
- ಪತ್ನಿ, ಮಗನ ಒಳಸಂದರ್ಶನಕ್ಕ ಮನವಿ ಮಾಡಿದ್ದ ದರ್ಶನ್..!
- ಕೋರ್ಟ್ ಗ್ರೀನ್ ಸಿಗ್ನಲ್.. ಸೂಪರಿಂಟೆಂಡೆಂಟ್ ತಡೆಗೋಡೆ
ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಜೈಲು ಸೇರಿರೋ ನಟ ದರ್ಶನ್ & ಡಿ ಗ್ಯಾಂಗ್ ಕಥೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ತಿದೆ. ದರ್ಶನ್ ಸದ್ಯಕ್ಕಂತೂ ಹೊರಕ್ಕೆ ಬರೋ ಸೂಚನೆ ಇಲ್ಲವೇ ಇಲ್ಲ. ಇತ್ತ ಹೊರಗಿರೋ ಎ-8ರಿಂದ ಎ-12 ಆರೋಪಿಗಳು ಕೂಡ ಬೇಲ್ ಕ್ಯಾನ್ಸಲ್ ಆಗಿ ಮತ್ತೆ ಜೈಲು ಸೇರುವ ಸಾಧ್ಯತೆಯಿದೆ. ಸ್ವತಃ ಸುಪ್ರೀಂ ಕೋರ್ಟ್ ಈ ಕೇಸ್‌ನ ನೀಟ್ ಆಗಿ ಪರಿಶೀಲಿಸಿ ತೀರ್ಪು ನೀಡುವಂತೆ ಹೇಳಿರೋದ್ರಿಂದ ಗಂಭೀರವಾದ ಕೇಸ್ ಅಂತ ಪರಿಗಣಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ನಟ ದರ್ಶನ್‌ಗೆ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ ಕೋರ್ಟ್‌ಗೆ ಇತ್ತೀಚೆಗೆ ಒಂದು ಮನವಿ ಮಾಡಿದ್ರು ನಟ ದರ್ಶನ್. ಅದೇನಪ್ಪಾ ಅಂದ್ರೆ ವಾರಕ್ಕೊಮ್ಮೆ ದರ್ಶನ್‌ನ ನೋಡೋಕೆ ಬರುವ ಕುಟುಂಬಸ್ಥರ ಭೇಟಿಯನ್ನ ಒಳ ಸಂದರ್ಶನಕ್ಕೆ ಅನುವು ಮಾಡಿಕೊಡಲು ಮನವಿ ಮಾಡಿದ್ರು. ಈ ಕುರಿತು 57ನೇ ಸೆಷನ್ಸ್ ನ್ಯಾಯಾಲಯ ತಕ್ಕ ಮಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಒಂದು ಪ್ರಮುಖ ಕಂಡಿಷನ್ ಹಾಕಿದೆ. ಜೈಲಿನ ಸೂಪರಿಂಟೆಂಡೆಂಟ್ ಒಪ್ಪಿದ್ರೆ ಮಾತ್ರ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದಿದೆ ಕೋರ್ಟ್.
ಇದೊಂದು ಹೈ-ಪ್ರೊಫೈಲ್ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕೇಸ್ ಆಗಿರೋದ್ರಿಂದ ನಿಧಾನವಾದ್ರೂ ಗಂಭೀರವಾಗಿ ಹಾಗೂ ಕೂಲಂಕುಶವಾಗಿ ಪರಿಶೀಲಿಸಲಾಗುತ್ತಿದೆ. ಇಷ್ಟು ದಿನ ವಿಜಯಲಕ್ಷ್ಮೀ ದರ್ಶನ್ ಹಾಗೂ ವಿನೀಶ್ ಜೈಲಿಗೆ ಭೇಟಿ ನೀಡಿದಾಗ ದರ್ಶನ್‌ರನ್ನ ನೇರವಾಗಿ ನೋಡಬಹುದಿತ್ತು. ಮಾತಾಡಬಹುದಿತ್ತು. ಆದ್ರೆ ಅವರುಗಳ ಮಧ್ಯೆ ಒಂದು ಗೋಡೆ, ಫೇನ್ಸ್ ಇರುತ್ತಿತ್ತು. ಅಂದ್ರೆ ಕಿಟಕಿ ಮೂಲಕ ಮಾತುಕತೆ ಏರ್ಪಡುತ್ತಿತ್ತು. ಆದ್ರೀಗ ಜೈಲ್ ಸೂಪರಿಂಟೆಂಡೆಂಟ್ ಒಪ್ಪಿದ್ರೆ ಒಳಗೆ ಹೋಗಿ ನೇರವಾಗಿ ಮುಟ್ಟಿ ಮಾತನಾಡಿಸಬಹುದು. ಅದಕ್ಕೆ ಸೂಪರಿಂಟೆಂಡೆಂಟ್ ಒಪ್ಪಿಲ್ಲ. ಯಾಕಂದ್ರೆ ಜೈಲಿಗೆ ಹೊಸ ಮ್ಯಾನ್ಯುಯೆಲ್ ಬಂದಿದ್ದು, ಒಬ್ಬರಿಗೆ ಅವಕಾಶ ನೀಡಿದ್ರೆ ಎಲ್ಲರೂ ಕೇಳ್ತಾರೆ ಅಂತ ಕೈ ತೊಳೆದುಕೊಂಡಿದ್ದಾರೆ.
- ಪೊಲೀಸರು ಸುಳ್ಳು ಸಾಕ್ಷ್ಯ ಸೃಷ್ಟಿಸಿದ್ದಾರೆ ಎಂಬ ಆರೋಪ..!
- ಟೈಲ್ಸ್ ಫ್ಲೋರ್ ತಿಕ್ಕಾಟ.. ರಿಟ್ ಅರ್ಜಿ ವಕೀಲರಿಗೇ ದಂಡ
- ಸಾಕ್ಷ್ಯ ಅಷ್ಟೇ ಮುಖ್ಯ.. ಕಾಮಾಕ್ಷಿಪಾಳ್ಯ ಖಾಕಿಗೆ ಕ್ಲೀನ್ಚಿಟ್
ಆರೋಪಿ ನಂಬರ್-3 ಪವನ್ ಪರ ವಕೀಲರು ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಳಿಂದ ಮೊಬೈಲ್ ವಶಕ್ಕೆ ಪಡೆದು, ಮಹಜರ್ ಮಾಡಿದ ಸ್ಥಳದಲ್ಲಿ ಬದಲಾವಣೆ ಆಗಿದೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಟೈಲ್ಸ್ ಫ್ಲೋರ್ ಇಲ್ಲ, ಪೊಲೀಸರು ಈ ವಿಚಾರ ಸುಳ್ಳು ಸಾಕ್ಷಿ ಸೃಷ್ಟಿಸಿದ್ದಾರೆ. ಹೀಗಾಗಿ ತನಿಖೆ ನಟೆಸಿದ ಪೊಲೀಸ್ ಆಫೀಸರ್‌ಗಳನ್ನೇ ಆರೋಪಿಗಳಾಗಿಸಿಕೊಳ್ಳಬೇಕು ಅಂತ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದ್ರೆ ಆ ಪ್ರಕರಣದಲ್ಲಿ ಆರೋಪಿ ಪರ ವಕೀಲರಿಗೆ ಭಾರೀ ಮುಖಭಂಗವಾಗಿದೆ.
ಪ್ರಕರಣದಲ್ಲಿ ಸಾಕ್ಷ್ಯ ಅಷ್ಟೇ ಮುಖ್ಯವಾಗಲಿದೆ. ಫ್ಲೋರ್ ಅಲ್ಲ ಅಂತ ಕೋರ್ಟ್ ಅರ್ಜಿ ವಜಾ ಗೊಳಿಸಿ, ವಕೀಲರಿಗೇ ದಂಡ ವಿಧಿಸಿ ಮುಖಭಂಗವಾಗುವ ಕಾರ್ಯ ಮಾಡಿದೆ. ಇದ್ರಿಂದ ಸುಖಾ ಸುಮ್ಮನೆ ಕೇಸ್‌ಗಳನ್ನ ಹಾಕಿದ್ರೆ, ಕೋರ್ಟ್ ಅವೆಲ್ಲವನ್ನ ಗಂಭೀರವಾಗಿ ಪರಿಗಣಿಸಲ್ಲ. ಕಾನೂನಿನಡಿ ಏನೆಲ್ಲಾ ಆಗಬೇಕೋ ಅದಕ್ಕೆ ಮಾತ್ರ ಆ್ಯಕ್ಷನ್ ತೆಗೆದುಕೊಳ್ಳಲಿದೆ. ಸೋ ದರ್ಶನ್‌ಗೆ ಈ ವಿಚಾರದಲ್ಲಿ ಹಿನ್ನಡೆ ಆಗಿದೆ.
ಈ ಬಾರಿಯ ಯುಗಾದಿ ಹಬ್ಬವನ್ನ ದರ್ಶನ್ ಜೈಲಿನ ಒಳಗೇ ಆಚರಿಸಬೇಕಿದೆ. ಎಣ್ಣೆ ಸ್ನಾನವೂ ಇಲ್ಲ, ಹೋಳಿಗೂ ಊಟವೂ ಇಲ್ಲ. ಇಂತಹ ದುಃಸ್ಥಿತಿ ಸ್ಯಾಂಡಲ್‌ವುಡ್‌ನ ಒಬ್ಬ ದೊಡ್ಡ ಸ್ಟಾರ್‌ಗೆ ಬಂದಿರೋದು ನಿಜಕ್ಕೂ ಬೇಸರದ ಸಂಗತಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
