ರಿವೈಸಿಂಗ್ ಕಮಿಟಿಗೆ ಜನನಾಯಗನ್.. ಫೆ-19ಕ್ಕೆ ದಳಪತಿ ವಿಜಯ್ ಎಂಟ್ರಿ?

ಸಮರ ಬೇಡ ಸಂಧಾನವೊಂದೇ ದಾರಿ.. CBFC ನಡೆಗೆ KVN ಬದ್ಧ

Untitled design 2026 02 10T143528.835

ಜನ ನಾಯಗನ್ ಸೆನ್ಸಾರ್ ತಿಕ್ಕಾಟ ಕೊನೆಗೂ ಸುಖಾಂತ್ಯ ಕಾಣುವ ಮುನ್ಸೂಚನೆ ನೀಡಿದೆ. ಮದ್ರಾಸ್ ಹೈಕೋರ್ಟ್‌‌ನಿಂದ ಒನ್ಸ್ ಅಗೈನ್ ರಿವೈಸಿಂಗ್ ಕಮಿಟಿಗೆ ಹೋಗ್ತಿರೋ ಜನನಾಯಗನ್, ಈ ಬಾರಿ ಸೆನ್ಸಾರ್ ಪತ್ರ ಪಡೆಯುತ್ತಿದ್ದಂತೆ ನೇರವಾಗಿ ಥಿಯೇಟರ್‌ಗೆ ಬರಲಿದೆ. ಅದು ಫೆಬ್ರವರಿ 19ಕ್ಕೆ ಬರುತ್ತಾ..? ವಿಜಯ್ ಫ್ಯಾನ್ಸ್ ಮನವಿ ಏನು..? ಪ್ರೊಡ್ಯೂಸರ್ಸ್ ಕಾಂಪ್ರಮೈಸ್ ಆಗಿದ್ದೇಕೆ..? ಇಲ್ಲಿದೆ ರಿಪೋರ್ಟ್.

ಜನವರಿ 9ಕ್ಕೆ ತೆರೆ ಕಾಣಬೇಕಿದ್ದ ದಳಪತಿ ವಿಜಯ್ ನಟನೆಯ ಜನ ನಾಯಗನ್ ಸಿನಿಮಾ ಇಂದಿಗೂ ರಿಲೀಸ್ ಆಗದೆ ಅತಂತ್ರದಲ್ಲೇ ಉಳಿದು ಬಿಟ್ಟಿದೆ. ಅದಕ್ಕೆ ಕಾರಣ ಸೆನ್ಸಾರ್ ಬೋರ್ಡ್ ಜೊತೆಗಿನ ತಿಕ್ಕಾಟ. ಯೆಸ್.. ಕಟ್ಸ್ ಅಂಡ್ ಮ್ಯೂಟ್ಸ್‌ಗೆ ಹೇಳಿದ್ದ ಸೆನ್ಸಾರ್ ವಿರುದ್ಧ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ರು ನಿರ್ಮಾಪಕರಾದ ಕೆ ವೆಂಕಟ್ ನಾರಾಯಣ್. ಅದು ಮದ್ರಾಸ್ ಹೈ ಕೋರ್ಟ್, ಸುಪ್ರೀಂ ಕೋರ್ಟ್ ವರೆಗೂ ಹೋಗಿ ನಾನಾ ನೀನಾ ಅನ್ನುವಂತೆ ದೊಡ್ಡ ಟಗ್ ಆಫ್ ವಾರ್‌ಗೆ ನಾಂದಿ ಹಾಡಿತ್ತು.

ಆದ್ರೀಗ ಸುಪ್ರೀಂ ಹೈಕೋರ್ಟ್‌‌ನಲ್ಲೇ ವಿವಾದ ಅತ್ಯರ್ಥ ಮಾಡಿಕೊಳ್ಳಲು ಸೂಚಿಸಿತ್ತು. ಇಷ್ಟು ದಿನ ತಡ ಆದ ಹಿನ್ನೆಲೆ ವಿಜಯ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಾಯಕನಟನ ಚಿತ್ರ ಇಷ್ಟು ದಿನ ವಿವಾದದ ಸುಳಿಗೆ ಸಿಲುಕಿದ್ದು ಸಾಕು. ಇನ್ಮೇಲೆ ಸಲೀಸಾಗಿ ರಿಲೀಸ್ ಆದ್ರೆ ಸಾಕು ಅಂತ ಕಾಯ್ತಿದ್ದಾರೆ. ಹಾಗಾಗಿ ನಿರ್ಮಾಪಕರು ಕೂಡ ಸೆನ್ಸಾರ್ ಬೋರ್ಡ್ ನಡೆಗೆ ನಾವು ಬದ್ಧ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಮಾಣ ಪತ್ರ ಪಡೆಯೋಕೆ ತರಾತುರಿ ಕೂಡ ಇಲ್ಲ. ಸಿಬಿಎಫ್‌‌ಸಿ ಹೇಳಿದಂತೆ ಕೆಳ್ತೀವಿ ಎಂದಿದ್ದಾರೆ ಪ್ರೊಡ್ಯೂಸರ್. ಹಾಗಾಗಿಯೇ ಜನನಾಯಗನ್ ರಿವೈಸಿಂಗ್ ಕಮಿಟಿಗೆ ಹೋಗ್ತಿದೆ.

ಮೂಲಗಳ ಪ್ರಕಾರ ಚಿತ್ರ ಇದೇ ಫೆಬ್ರವರಿ 19ಕ್ಕೆ ರಿಲೀಸ್ ಆಗಲಿದೆ. ಒಂದು ವೇಳೆ ರಿವೈಸಿಂಗ್ ಕಮಿಟಿ ಬೇಗ ಸೆನ್ಸಾರ್ ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರ. ಇಲ್ಲವಾದಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಚಿತ್ರತಂಡ. ಯಾಕಂದ್ರೆ ಡಿಎಂಕೆಯಿಂದ ಸೆನ್ಸಾರ್ ಪತ್ರ ನೀಡದಿರಲು ಒತ್ತಡವಿದೆ ಎನ್ನಲಾಗ್ತಿದೆ. ಅಲ್ಲದೆ, ಆಂಧ್ರ, ತಮಿಳುನಾಡು ಹಾಗೂ ಕೇರಳದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಾಗಿದ್ದು, ಅಲ್ಲಿ ರಂಜಾನ್ ಹಬ್ಬ ಬೇರೆ ಶುರು ಆಗ್ತಿದೆ. ಹಬ್ಬ ಶುರುವಾದ್ರೆ ಥಿಯೇಟರ್‌ಗೆ ಬರೋರ ಸಂಖ್ಯೆ ಗಣನೀಯವಾಗಿ ಕುಗ್ಗಲಿದೆ. ಅದು ಜನ ನಾಯಗನ್ ಡಿಸ್ಟ್ರಿಬ್ಯೂಟರ್ಸ್‌‌ಗೆ ಲಾಸ್ ಆಗಲಿದೆ. ಆಗ  ನಿರ್ಮಾಪಕರಿಗೂ ಅದು ಎಫೆಕ್ಟ್ ಆಗಲಿದೆ.

ಸದ್ಯದಲ್ಲೇ ಎಲೆಕ್ಷನ್ ಅನೌನ್ಸ್ ಆದ್ರೆ, ಕೋಡ್ ಆಫ್ ಕಂಡಕ್ಟ್ ಬರಲಿದ್ದು, ಜನ ನಾಯಗನ್ ರಿಲೀಸ್‌ಗೆ ಜೂನ್-ಜುಲೈವರೆಗೂ ನಿರ್ಬಂಧ ಇರಲಿದೆ. ಸೋ.. ವಿಜಯ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಗುತ್ತಾ ಅಥ್ವಾ ಈ ಚಿತ್ರದಿಂದ ನಟ, ನಿರ್ಮಾಪಕ ಇಬ್ಬರಿಗೂ ಲಾಸ್ ಆಗುತ್ತಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version