ಬಾಲಿವುಡ್‌ನ ಸ್ಟಾರ್ ಅನುರಾಗ್ ಕಶ್ಯಪ್ ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗೆ ಸೌತ್ ದಿನಿದುನಿಯಾದಲ್ಲಿ ಫುಲ್ ಬ್ಯುಸಿ ಆಗಿರೋ ಅನುರಾಗ್, ಇದೇ ಮೊದಲ ಬಾರಿಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಡಕಾಯಿತ್ ಹಾಗೂ ಧುರಂಧರ್ ಸಕ್ಸಸ್ ಸೇರಿದಂತೆ, ಬೆಂಗಳೂರು ವೆದರ್, ತಮ್ಮ ನಿರ್ದೇಶನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಬಾಲಿವುಡ್ ಅಂದ್ರೆ ಅಲ್ಲಿ ಗ್ಲಾಮರ್ ಮಾತ್ರವಲ್ಲ. ಅಲ್ಲಿ ಗ್ಯಾಂಗ್‌ಸ್ಟರ್ ಕಥೆಗಳಿಗೂ ಒಂದು ತೂಕವಿದೆ. ಅಂತಹ ರಾ & ರಗಡ್ ಸಿನಿಮಾಗಳ ಸೃಷ್ಟಿಕರ್ತ, ‘ಗ್ಯಾಂಗ್ಸ್ ಆಫ್ ವಾಸೇಪುರ್’ ಖ್ಯಾತಿಯ ಅನುರಾಗ್ ಕಶ್ಯಪ್ ಈಗ ಸಖತ್ ಸುದ್ದಿಯಲ್ಲಿದ್ದಾರೆ. ಆದ್ರೆ ಈ ಬಾರಿ ಅವ್ರು ಆ್ಯಕ್ಷನ್ ಕಟ್ ಹೇಳ್ತಿಲ್ಲ, ಬದಲಿಗೆ ತಾವೇ ಅಖಾಡಕ್ಕಿಳಿದು ಅಬ್ಬರಿಸುತ್ತಿದ್ದಾರೆ. ಯೆಸ್.. ತೆಲುಗು, ಕನ್ನಡ, ತಮಿಳಲ್ಲಿ ಅನುರಾಗ್ ಫುಲ್ ಬ್ಯುಸಿ. ಸದ್ಯ ಡಕಾಯಿತ್ ಬಿಗ್ ಹಿಟ್ ಆಗಿದ್ದು, ಇದೇ ಮೊದಲ ಬಾರಿಗೆ ಥಿಯೇಟರ್‌ಗೆ ತೆರಳಿ, ಆಡಿಯೆನ್ಸ್ ರೆಸ್ಪಾನ್ಸ್ ನೋಡಿದ್ದಾರೆ.
ಸಿಲಿಕಾನ್ ಸಿಟಿಗೆ ಅನುರಾಗ್ ಕಶ್ಯಪ್ ಫುಲ್ ಫಿದಾ..!
ಬಿಟೌನ್ ತೊರೆದವರೇ ಧುರಂಧರ್‌ಗೆ ಭೇಷ್ ಅಂದ್ರು
ಕಳೆದ 30 ವರ್ಷಗಳಿಂದ ಸತತವಾಗಿ ನಿರ್ದೇಶನದಲ್ಲಿ ತೊಡಗಿಸಿಕೊಂಡಿರೋ ಅನುರಾಗ್ ಕಶ್ಯಪ್, ಸದ್ಯ ಡೈರೆಕ್ಷನ್‌ಗೆ ಬ್ರೇಕ್ ನೀಡಿ, ನಟನೆಯನ್ನ ಎಂಜಾಯ್ ಮಾಡ್ತಿದ್ದಾರಂತೆ. ನಿರ್ದೇಶನ ಅವರಿಗೆ ಒಂದು ಹಾಲಿಡೇ ಇದ್ದಂತೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆಯಾದರೂ, ಕ್ಯಾಮೆರಾ ಮುಂದೆ ನಿಲ್ಲುವುದು ಅವರಿಗೆ ಹೆಚ್ಚು ಖುಷಿ ಕೊಡ್ತಿದೆ. ಈ ಬಗ್ಗೆ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ ಅನುರಾಗ್ ಕಶ್ಯಪ್.
ಇತ್ತೀಚೆಗೆ ಯಶಸ್ಸು ಕಂಡ ರಣ್ವೀರ್ ಸಿಂಗ್ ನಟನೆಯ ಧುರಂಧರ್ ಹಾಗೂ ಧುರಂಧರ್-2 ಸರಣಿ ಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನುರಾಗ್, ಚಿತ್ರತಂಡದ ಧೈರ್ಯವೇ ಸಿನಿಮಾದ ಗೆಲುವಿಗೆ ಕಾರಣ ಎಂದಿದ್ದಾರೆ. ನಾನು ಅಭಿನಯ ಮಾಡಿದ್ರೆ ದುಡ್ಡಿಗಾಗಿ ಮಾಡ್ತೀನಿ ಅಂತಿದ್ರು. ಇದೀಗ ಅವರು ಕೇವಲ ದುಡ್ಡಿಗಾಗಿ ಈ ಸಿನಿಮಾ ಮಾಡಿಲ್ಲವಂತೆ, ಅಲ್ಲಿನ ಖಡಕ್ ಪಾತ್ರಕ್ಕಾಗಿ ಕ್ಯಾಮರಾ ಮುಂದೆ ನಿಂತಿದ್ದಾರಂತೆ.
ನಟನೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.. ಡೈರೆಕ್ಷನ್‌ಗೆ ಬ್ರೇಕ್..!
ಗ್ಯಾರಂಟಿ ನ್ಯೂಸ್ ಜೊತೆ ಸೆನ್ಸೇಷನಲ್ ಡೈರೆಕ್ಟರ್ ಕಥೆ
ಕನ್ನಡ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಬಾಲಿವುಡ್ ಮಂದಿ ಹುಬ್ಬೇರಿಸುತ್ತಿದ್ದಾರೆ. ಇದಕ್ಕೆ ಅನುರಾಗ್ ಕೂಡ ಭೇಷ್ ಅಂದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಅನುರಾಗ್, ಯಶ್ ಕೇವಲ ಒಬ್ಬ ಮಾಸ್ ಹೀರೋ ಮಾತ್ರವಲ್ಲ. ಅವರೊಬ್ಬ ಅದ್ಭುತ ರೈಟರ್ ಕೂಡ ಹೌದು ಎಂದಿದ್ದಾರೆ. ಗೀತು ಮೋಹನ್ ದಾಸ್ ಮೇಲೆ ನಂಬಿಕೆ ಇಟ್ಟಿರುವ ಅನುರಾಗ್ ಸಿನಿಮಾ ನೋಡೋಕೆ ಕಾತರರಾಗಿದ್ದಾರಂತೆ. ರಾಜ್ ಬಿ ಶೆಟ್ಟಿ ಕ್ರಿಯೇಟಿವಿಟಿಗೆ ಮಾರುಹೋಗಿದ್ದು, ಅವ್ರ ಜೊತೆ ಕೆಲಸ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರಂತೆ.
ಬಾಲಿವುಡ್‌ನ ಗದ್ದಲ ಬಿಟ್ಟು ಅನುರಾಗ್ ಕಶ್ಯಪ್ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಇತ್ತೀಚೆಗೆ ಬಾಲಿವುಡ್ ಮೇಲೆ ಅವರಿಗಿರೋ ಅಸಮಾಧಾನ, ಬೇಸರವನ್ನ ನೇರವಾಗಿಯೇ ಹೊರಹಾಕಿದ್ದ ಅವರು ಮುಂಬೈನಲ್ಲಿ ಇರಲ್ಲ ಎಂದಿದ್ರು. ಸೌತ್‌ಗೆ ಶಿಫ್ಟ್ ಆಗ್ತೀನಿ ಅಂದಿದ್ರು. ಅದರಂತೆ ನಮ್ಮ ಸಿಲಿಕಾನ್ ಸಿಟಿಗೆ ಫ್ಯಾಮಿಲಿ ಸಮೇತ ಶಿಫ್ಟ್ ಆಗಿದ್ದಾರೆ. ಗರುಡ ಮಾಲ್ ಬಳಿ ಇರೋ ಉದಯ ವಾಹಿನಿ ಬಳಿ ಸ್ವಂತ ಮನೆ ಖರೀದಿಸಿದ್ದಾರೆ. ಬೆಂಗಳೂರಿನ ವೆದರ್ ಹಾಗೂ ಇಲ್ಲಿನ ಸುಂದರವಾದ ಗಾರ್ಡನ್‌ಗಳಿಗೆ ಕ್ಲೀನ್ ಬೋಲ್ಡ್ ಆಗಿರೋ ಅವರು, ಇಲ್ಲಿನ ಪ್ರತಿ ಜಾಗವೂ ಅದ್ಭುತವಾಗಿದೆ ಎಂದಿದ್ದಾರೆ.
