ತಮಿಳುನಾಡು ಪಾಲಿಟಿಕ್ಸ್‌ನ ಗೇಮ್ ಚೇಂಜರ್ ಆಗೋಕೆ ಹೊರಟಿರೋ ದಳಪತಿ ವಿಜಯ್, ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಘೋಷಣೆ ಮಾಡಿದ್ದಾರೆ. ಸದ್ಯ ತಮಿಳುನಾಡು ಸಿಎಂ ಸ್ಟಾಲಿನ್‌ಗಿಂತ ಶ್ರೀಮಂತನಾಗಿರೋ ವಿಜಯ್ ಆಸ್ತಿ ವಿವರ ನೋಡಿ ಜನ ದಂಗಾಗಿದ್ದಾರೆ. ಇಷ್ಟಕ್ಕೂ ಎಷ್ಟು ಕೋಟಿ ಆಸ್ತಿಗೆ ಒಡೆಯನಾಗಿದ್ದಾರೆ ವಿಜಯ್..? ಆತನ ವರ್ಷದ ಗಳಿಕೆ ಎಷ್ಟು ಕೋಟಿ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ದಳಪತಿ ವಿಜಯ್.. ಇಷ್ಟು ದಿನ ಇವ್ರನ್ನ ಸೂಪರ್ ಸ್ಟಾರ್ ಅಂತಿದ್ರು. ಇನ್ಮೇಲೆ ಡೈನಾಮಿಕ್ ಪೊಲಿಟಿಕಲ್ ಲೀಡರ್ ಅಂತ ಕರೆಯಬೇಕಾಗುತ್ತೆ. ಒಂದು ವೇಳೆ ಸದ್ಯ ಇದೇ ಏಪ್ರಿಲ್ 23ಕ್ಕೆ ನಡೆಯಲಿರೋ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ರೆ, ಎಂಎಲ್‌ಎ ಅಥ್ವಾ ಸಿಎಂ, ಡಿಸಿಎಂ ಆದ್ರೂ ಅಚ್ಚರಿಯಿಲ್ಲ. ಟಿವಿಕೆ ಪಕ್ಷ ಕಟ್ಟಿ, ಈ ಬಾರಿಯ ಚುನಾವಣಾ ಕಣಕ್ಕೆ ಇಳಿದಿರೋ ವಿಜಯ್, ಚೆನ್ನೈನ ಪೆರಂಬೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
TVK ವಿಜಯ್ ಎಷ್ಟು ಕೋಟಿ ಒಡೆಯ..? ಬಯಲಾಯ್ತು ಸತ್ಯ
625 ಕೋಟಿ ಆಸ್ತಿ.. CM ಸ್ಟಾಲಿನ್‌ಗಿಂತ ಶ್ರೀಮಂತ ವಿಜಯ್..!
ಇದೇ ವೇಳೆ ತಮ್ಮ ಒಟ್ಟು ಆಸ್ತಿ ಮೊತ್ತವನ್ನ ಘೋಷಿಸಿಕೊಂಡಿರೋ ವಿಜಯ್, ಸಿಎಂ ಸ್ಟಾಲಿನ್‌ಗಿಂತ ದಳಪತಿ ಶ್ರೀಮಂತ ಅನ್ನೋದು ಇಂಟರೆಸ್ಟಿಂಗ್. ದಳಪತಿ ವಿಜಯ್ ಬರೋಬ್ಬರಿ 624.7 ಕೋಟಿ ರೂಪಾಯಿ ಆಸ್ತಿಯ ಒಡೆಯ ಅನ್ನೋದು ಜಗಜ್ಜಾಹೀರಾಗಿದೆ. ಡಿಎಂಕೆ ಮುಖ್ಯಸ್ಥ ಹಾಗೂ ಸಿಎಂ ಸ್ಟಾಲಿನ್ ಕೂಡ ಆಸ್ತಿ ವಿವರ ಘೋಷಿಸಿಕೊಂಡಿದ್ದು, ಅದು ಕೇವಲ 9 ಕೋಟಿ ಅನ್ನೋದು ಶಾಕಿಂಗ್ ನ್ಯೂಸ್.
ವಿಜಯ್‌ರ 624.7 ಕೋಟಿ ಆಸ್ತಿಯಲ್ಲಿ 404.5 ಕೋಟಿ ಚರಾಸ್ತಿ ಹಾಗೂ 220.2 ಕೋಟಿ ಸ್ಥಿರಾಸ್ತಿ ಇರೋದಾಗಿ ಘೋಷಣೆಯಾಗಿದೆ. ಅಲ್ಲದೆ ಅಫಿಡವಿಟ್‌ನಲ್ಲಿ ಎರಡು BMW ಐಷಾರಾಮಿ ಕಾರ್‌ಗಳು, ಟೊಯೊಟಾ ಲೆಕ್ಸಸ್ ಕಾರ್, ಟೊಯೊಟಾ ವೆಲ್‌ಫೈರ್, TVS XL ಸೂಪರ್ ಮೊಪೆಡ್, ಮಾರುತಿ ಸ್ವಿಫ್ಟ್, 883 ಗ್ರಾಂ ಚಿನ್ನ, ಬ್ಯಾಂಕ್ ಠೇವಣಿಗಳಿ ಇರೋದಾಗಿ ತಿಳಿಸಿದ್ದಾರೆ ಟಿವಿಕೆ ಮುಖ್ಯಸ್ಥ ವಿಜಯ್.
ಚರಾಸ್ತಿ, ಸ್ಥಿರಾಸ್ತಿ ಜೊತೆ ಗೋಲ್ಡ್, ಡೈಮಂಡ್ ಎಷ್ಟಿದೆ ಗೊತ್ತಾ..?
ಯಾವ್ಯಾವ ದುಬಾರಿ ಕಾರ್‌ಗಳಿವೆ..? ವಾರ್ಷಿಕ ಆದಾಯ ಎಷ್ಟು?
2024-25ನೇ ಫೈನಾನ್ಸಿಯಲ್ ಇಯರ್‌ನಲ್ಲಿ 184.5 ಕೋಟಿ ಆದಾಯ ಗಳಿಸಿರೋದಾಗಿ ಹೇಳಿಕೊಂಡಿರೋ ವಿಜಯ್, ಪತ್ನಿ ಸಂಗೀತಾ ಬಳಿ 15.76 ಕೋಟಿ ಆಸ್ತಿ ಇರೋದಾಗಿಯೂ ಉಲ್ಲೇಖಿಸಿದ್ದಾರೆ. ಕೊಡೈಕೆನಾಲ್‌ನಲ್ಲಿ ಎರಡು ಎಸ್ಟೇಟ್ ಕೂಡ ಹೊಂದಿರೋ ವಿಜಯ್, ತನ್ನ ಮಗ ಹಾಗೂ ಮಗಳ ಹೆಸರಿನಲ್ಲೂ ಸಣ್ಣ ಪ್ರಮಾಣದ ಆಸ್ತಿ, ಹೂಡಿಕೆಗಳಿವೆ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೆ ವಿಜಯ್ ಈ ಬಾರಿಯ ಚುನಾವಣಾ ಖರ್ಚು ವೆಚ್ಚಗಳಿಗಾಗಿ ಚೆನ್ನೈನ ಅನ್ನಾ ನಗರ್‌ನಲ್ಲಿರೋ ತಮ್ಮ ಒಂದು ಪ್ರಾಪರ್ಟಿಯನ್ನ ಸುಮಾರು 35 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಅಲ್ಲದೆ ವಡಪಳನಿಯಲ್ಲಿರೋ ಜೆಎಸ್ ವೆಡ್ಡಿಂಗ್ ಹಾಲ್‌ನ ಕೂಡ ಮಾರಾಟ ಮಾಡಿದ್ದಾರಂತೆ. ಇದೆಲ್ಲವೂ ಓಕೆ.. ಆದ್ರೆ ಪತ್ನಿ ಸಂಗೀತಾ ಸದ್ಯ ವಿಜಯ್‌ರಿಂದ ವಿಚ್ಚೇದನದ ನಿರೀಕ್ಷೆಯಲ್ಲಿದ್ದು, ಜೀವನಾಂಶದ ರೂಪದಲ್ಲಿ ದೊಡ್ಡ ಮೊತ್ತದ ಆಸ್ತಿ ಪಾಲು ಕೇಳುವ ಸಾಧ್ಯತೆಯಿದೆ. ಯಾಕಂದ್ರೆ ಇಲ್ಲಿಯವರೆಗೂ ಪತ್ನಿಗೂ ಗೊತ್ತಿಲ್ಲದೆ ಇದ್ದಂತಹ ವಿಜಯ್ ಆಸ್ತಿ ವಿವರಗಳು ಈಗ ಬಯಲಾಗಿವೆ. ಹೀಗಾಗಿ ಇದು ಸಂಗೀತಾಗೆ ಜೀವನಾಂಶ ಕೇಳಲು ಪ್ಲಸ್ ಆಗಲಿದೆ.
ಇದೆಲ್ಲಾ ಏನೇ ಇರಲಿ.. ಚುನಾವಣೆಗಾಗಿ ಕೋಟಿ ಕೋಟಿ ರೂಪಾಯಿಗಳನ್ನ ಸುರಿಯುವ ಇವರುಗಳು, ಗೆದ್ದ ಬಳಿಕ ಅದನ್ನ ಮತ್ತೆ ಗಂಟು ಮಾಡಿಕೊಳ್ಳೋದು ಹೇಗೆ ಅನ್ನೋದನ್ನೇ ಯೋಚಿಸ್ತಾರೆ. ಆದ್ರೆ ಜನ ಸೇವೆ, ಸಮಾಜ ಸೇವೆಯನ್ನ ಮುಕ್ತವಾಗಿ ಮಾಡಲು ಸಾಧ್ಯವೇ ಅನ್ನೋ ಪ್ರಶ್ನೆ ಮೂಡದೆ ಇರದು.
