ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ಕೊನೆಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ 173ನೇ ಸಿನಿಮಾವನ್ನು ನಿರ್ದೇಶನ ಮಾಡೋದಕ್ಕೆ ಕಮಲ್ ಹಾಸನ್ ಯಂಗ್ ಡೈರೆಕಕ್ಟರ್ಗೆ ಅವಕಾಶ ಕೊಟ್ಟಿದ್ದಾರೆ. ರಜನಿಗೆ ಆ್ಯಕ್ಷನ್ ಕಟ್ ಹೇಳಲು ಸಾಲುಗಟ್ಟಿ ನಿಂತಿದ್ದ ಸೀನಿಯರ್ ಡೈರೆಕ್ಟರ್ಗಳಿಗೆ ಕಮಲ್ ಹಾಸನ್ ಕೋಕ್ ಕೊಟ್ಟು ಯುವ ನಿರ್ದೇಶಕನಿಗೆ ಚಾನ್ಸ್ ಕೊಟ್ಟಿದ್ಯಾಕೆ..? ಆ ನಿರ್ದೇಶಕ ಯಾರು..? ಈ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ಆ್ಯಕ್ಟ್ ಮಾಡ್ತಾರಾ ಇಲ್ವಾ..? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ಸಿನಿಮಾ ಘೋಷಣೆ ಆಗಿತ್ತು. ಸುಂದರ್ ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಆದರೆ ಸಿನಿಮಾ ಘೋಷಣೆಯಾದ ಒಂದೇ ವಾರಕ್ಕೆ ಭಿನ್ನಾಭಿಪ್ರಾಯಗಳಿಂದ ನಿರ್ದೇಶಕ ಹೊರ ಬಂದಿದ್ದರು. ಅಧಿಕೃತವಾಗಿ ಪತ್ರ ಬರೆದು ಸುಂದರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಒಂದಾದ ಲೆಜೆಂಡರಿ ರಜನಿಕಾಂತ್- ಕಮಲ್ ಹಾಸನ್ ..!
ರಜನಿ ಸಿನಿಮಾಗೆ ಡೈರೆಕ್ಟರ್ ಸೆಲೆಕ್ಟ್ ಮಾಡಿದ ಕಮಲ್ ಹಾಸನ್
ತಲೈವಾ 173ನೇ ಚಿತ್ರದಿಂದ ಸುಂದರ್ ಸಿ ಹೊರ ಬಂದ ಮೇಲೆ ಯಾರು ಚಿತ್ರ ಮುಂದುವರೆಸುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಕೆಲ ನಿರ್ದೇಶಕರು ಕಥೆ ಹೇಳಿ ಕಮಲ್ ಹಾಗೂ ರಜನಿಕಾಂತ್ ಇಬ್ಬರನ್ನು ಒಪ್ಪಿಸುವ ಪ್ರಯತ್ನ ಮಾಡಿದ್ದರು. ಅಂತೂ ಇಂತೂ ಯುವ ನಿರ್ದೇಶಕನಿಗೆ ಆ ಸುವರ್ಣಾವಕಾಶ ಸಿಕ್ಕಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ.
ರಜನಿಕಾಂತ್ ನಟನೆಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಅವಕಾಶ ಅಷ್ಟು ಸುಲಭವಾಗಿಲ್ಲ ಸಿಗಲ್ಲ. ಸಾಕಷ್ಟು ಫಿಲ್ಮ್ ಮೇಕರ್ಸ್ ಕನಸು ಇದು. ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸುವ ಚಿತ್ರವನ್ನು ಕಟ್ಟಿಕೊಡುವ ಅವಕಾಶ ಯಾರಿಗುಂಟು ಯಾರಿಗಿಲ್ಲ. ಯುವ ನಿರ್ದೇಶಕ ಶಿಬಿ ಚಕ್ರವರ್ತಿಗೆ ಆ ಅವಕಾಶ ಸಿಕ್ಕಿದೆ. ಕೆಲ ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದ ಶಿಬಿ 4 ವರ್ಷಗಳ ಹಿಂದೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು.
ತಲೈವಾ 173ನೇ ಸಿನಿಮಾಗೆ ಯಂಗ್ ಡೈರೆಕ್ಟರ್ ಆ್ಯಕ್ಷನ್ ಕಟ್
ಸ್ಟಾರ್ ಡೈರೆಕ್ಟರ್ಸ್ ಕೋಕ್ ಶಿಬಿ ಚಕ್ರವರ್ತಿಗೆ ಬಿಗ್ ಚಾನ್ಸ್..!
2022ರಲ್ಲಿ ಬಂದ ‘ಡಾನ್’ ಎಂಬ ತಮಿಳು ಚಿತ್ರಕ್ಕೆ ಶಿಬಿ ಚಕ್ರವರ್ತಿ ಆಕ್ಷನ್ ಕಟ್ ಹೇಳಿದ್ದರು. ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದರು. ಒಂದೇ ಒಂದು ಸಿನಿಮಾ ಕಟ್ಟಿಕೊಟ್ಟಿರುವ ನಿರ್ದೇಶಕನಿಗೆ ಇದೀಗ ತಲೈವಾ 173 ಸಿನಿಮಾ ಅವಕಾಶ ಸಿಕ್ಕಿದೆ. ರಾಮ್‌ಕುಮಾರ್ ಬಾಲಕೃಷ್ಣನ್, ಅಶ್ವಥ್ ಮಾರಿಮುತ್ತು, ನಿಥಿಲನ್ ಸಾಮಿನಾಥನ್, ಎಸ್‌ಯು ಅರುಣ್‌ಕುಮಾರ್ ಮತ್ತು ಆರ್‌ಜೆ ಬಾಲಾಜಿ ಹೀಗೆ ಕೆಲ ನಿರ್ದೇಶಕರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ರೇಸ್‌ನಲ್ಲಿದ್ದರು. ಅಂತಿಮವಾಗಿ ಶಿಬಿ ಚಕ್ರವರ್ತಿ ಜಾಕ್‌ಪಾಟ್ ಹೊಡೆದಿದ್ದಾರೆ. ‘ಕೂಲಿ’ ಸಿನಿಮಾ ಬಳಿಕ ‘ಜೈಲರ್’-2 ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ.
ನೆಲ್ಸನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಜೈಲರ್’-2 ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಶಿವರಾಜ್‌ಕುಮಾರ್ ಮತ್ತೊಮ್ಮೆ ನರಸಿಂಹ ಆಗಿ ಅಬ್ಬರಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ. ‘ಪಡೆಯಪ್ಪ’-2 ಸಿನಿಮಾ ಕೂಡ ಘೋಷಣೆಯಾಗಿದೆ. ಕೆ. ಎಸ್ ರವಿಕುಮಾರ್ ನಿರ್ದೇಶನದಲ್ಲಿ ರಜನಿಕಾಂತ್, ರಮ್ಯಾಕೃಷ್ಣ ಚಿತ್ರದಲ್ಲಿ ನಟಿಸಬೇಕಿದೆ. ಸದ್ಯ ಕಮಲ್ ಹಾಸನ್- ರಜನಿಕಾಂತ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸೋಕೆ ಒಪ್ಪಿದ್ದಾರೆ. ಅದಕ್ಕಾಗಿ ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶಿಬಿ ಚಕ್ರವರ್ತಿ ನಿರ್ದೇಶನದ ಚಿತ್ರದಲ್ಲೇ ಕಮಲ್ ಕೂಡ ನಟಿಸುತ್ತಾರಾ? ಎಂದು ಕಾದು ನೋಡಬೇಕಿದೆ.
