ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ಸ್ಟಾರ್ ಸುವರ್ಣ ವಾಹಿನಿಯ ಅತಿ ಜನಪ್ರಿಯ ಅಡುಗೆ ಕಾರ್ಯಕ್ರಮ ‘ಬೊಂಬಾಟ್ ಭೋಜನ’ ಇನ್ನೊಂದು ಸೀಸನ್‌ನೊಂದಿಗೆ ವೀಕ್ಷಕರ ಮುಂದೆ ಸಿದ್ಧವಾಗಿದೆ. 1500 ಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಐತಿಹಾಸಿಕ ಸಾಧನೆ ಮಾಡಿರುವ ಈ ಶೋ ಅಕ್ಟೋಬರ್ 27, ಸೋಮವಾರದಿಂದ ಸೀಸನ್ 6 ಅನ್ನು ಪ್ರಾರಂಭಿಸಲಿದೆ.
ಈ ಬಾರಿಯ ಸೀಸನ್‌ನ ವಿಶೇಷತೆ ಎಂದರೆ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯ ಆಶೀರ್ವಾದದೊಂದಿಗೆ ಮೊದಲ ಸಂಚಿಕೆ ಪ್ರಾರಂಭವಾಗಲಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಧ್ಯೇಯವಾಕ್ಯದೊಂದಿಗೆ ಈ ಸೀಸನ್ ಸಾಮಾನ್ಯ ಜನರಿಗೇ ಅರ್ಪಣೆಯಾಗಲಿದೆ.
ಸೀಸನ್ 6ರಲ್ಲಿ ವೀಕ್ಷಕರಿಗಾಗಿ 8 ವಿಭಿನ್ನ ವಿಭಾಗಗಳನ್ನು ತಯಾರು ಮಾಡಲಾಗಿದೆ:
-
ವಿಶೇಷ ಭೋಜನ: ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆ ತಯಾರಿಸುವುದಲ್ಲದೇ, ಅಭಿಮಾನಿಗಳ ಅಡುಗೆ ಕೋರಿಕೆಗಳನ್ನು ಪೂರೈಸುತ್ತಾರೆ.
-
ಆರೋಗ್ಯ ಭೋಜನ: ಡಾ. ಗೌರಿ ಸುಬ್ರಮಣ್ಯ ಅವರು ಉಪಯುಕ್ತ ಮನೆಮದ್ದುಗಳನ್ನು ಹಂಚಿಕೊಳ್ಳುತ್ತಾರೆ.
-
ಸ್ಪೆಷಲ್ ಭೋಜನ: ವಿವಿಧ ಜಿಲ್ಲೆಗಳ ಲೇಡೀಸ್ ಕ್ಲಬ್‌ಗಳಿಗೆ ಭೇಟಿ ನೀಡಿ ಸ್ಥಳೀಯರು ಜೊತೆಗೆ ಅಡುಗೆ ತಯಾರಿಸಲಾಗುತ್ತದೆ.
-
ಹಿತ ಭೋಜನ: ಸಾಮಾನ್ಯ ಜನರು ಮತ್ತು ಸೆಲೆಬ್ರಿಟಿಗಳು ತಮ್ಮ ವಿಶೇಷ ಕೈರುಚಿಗಳನ್ನು ಹಂಚಿಕೊಳ್ಳುವ ವಿಭಾಗ.
-
ಭೂರಿ ಭೋಜನ: ಕರ್ನಾಟಕದಾದ್ಯಂತ ಸಂಚರಿಸಿ ಹೋಟೆಲ್‌ಗಳ ಜನಪ್ರಿಯ ತಿನಿಸುಗಳನ್ನು ರುಚಿ ನೋಡಲಾಗುವುದು.
-
ಸಹ ಭೋಜನ: ಸರ್ಪ್ರೈಸ್ ಮನೆ ಭೇಟಿ ನೀಡಿ ಅಡುಗೆ ರುಚಿ ನೋಡಿ, ಸರ್ಟಿಫಿಕೇಟ್ ನೀಡುವ ವಿಭಾಗ.
-
ಗೃಹ ಭೋಜನ: ಸಿಹಿ ಕಹಿ ಚಂದ್ರು ಅವರು ವೀಕ್ಷಕರ ಮನೆಗೆ ಭೇಟಿ ನೀಡಿ ಅಡುಗೆ ಮಾಡಿ ಊಟ ಬಡಿಸುವ ವಿಭಾಗ.
-
ಬಾಲ ಭೋಜನ: ಪ್ರತಿ ಶುಕ್ರವಾರ ಮಕ್ಕಳಿಗಾಗಿ ನಿಗದಿ ಪಡಿಸಲಾದ ಹೊಸ ವಿಭಾಗ.
ಈ ಸೀಸನ್‌ನಲ್ಲಿ ‘ಸಿಹಿ-ಸಹಿ’ ಬೋರ್ಡ್ ಅನ್ನು ಪರಿಚಯಿಸಲಾಗಿದ್ದು, ಇದು ಸಾಮಾನ್ಯ ಜನರಿಗೆ ಸೆಲೆಬ್ರಿಟಿ ಅನುಭವ ನೀಡಲು ಸಜ್ಜಾಗಿದೆ. ಮಾಂಸಪ್ರಿಯರಿಗಾಗಿ ಪ್ರತಿ ಶನಿವಾರ ‘ಬೊಂಬಾಟ್ ಬಾಡೂಟ’ ಕಾರ್ಯಕ್ರಮವೂ ಪ್ರಸಾರವಾಗಲಿದೆ. ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ನಳ ಮಹಾರಾಜ ಈ ಶೋವನ್ನು ಮುನ್ನಡೆಸಲಿದ್ದಾರೆ.
ಬೊಂಬಾಟ್ ಭೋಜನ ಸೀಸನ್ 6 ಅಕ್ಟೋಬರ್ 27ರಿಂದ, ಪ್ರತಿ ದಿನ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.