ಆಕಾಶದಲ್ಲಿ ಟೀಂ 45 ಸಂದರ್ಶನ.. ಶಿವಣ್ಣ- ಉಪ್ಪಿ ಅನುಕ್ಷಣ

ನಟಸಾರ್ವಭೌಮ ಅಪ್ಪು ಸ್ಟೈಲ್‌‌ನಲ್ಲಿ ಫ್ಲೈಟ್ ಇಂಟರ್‌‌ವ್ಯೂ..!

Befunky collage 2025 05 17t132549.768

3.45ಗೆ ಎದ್ದು 4.45ಗೆ ಏರ್‌ಪೋರ್ಟ್‌ಗೆ ಬಂದು 5.45ಗೆ ಫ್ಲೈಟ್ ಏರಿದ ಸ್ಟಾರ್ ಆ್ಯಂಕರ್ ಅನುಶ್ರೀ ಮಾಡಿದ್ದೇನು ಅನ್ನೋ ಕ್ಯೂರಿಯಾಸಿಟಿ ನಿಮಗಿದೆಯಾ..? ನಟಸಾರ್ವಭೌಮದಲ್ಲಿ ಅಪ್ಪು ಮಾಡಿದ ಫ್ಲೈಟ್ ಸಂದರ್ಶನ ನೆನಪಿದೆಯಾ..? ಶಿವಣ್ಣ-ಉಪೇಂದ್ರ ಮತ್ತೊಂದು ವಿನೂತನ ದಾಖಲೆಗೆ ಓಂಕಾರ ಹಾಡಿದ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ನೋಡಿ.

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸೋಲ್ ಸ್ಟಾರ್ ರಾಜ್ ಬಿ ಶೆಟ್ಟಿ. ಒಬ್ಬರಿಗಿಂತ ಒಬ್ಬರು ಡಿಫರೆಂಟ್. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ, ಗಾಯನ ಹೀಗೆ ಚಿತ್ರರಂಗದ ಆಳ, ಅಗಲ ಅರಿತಿರೋ ಅತ್ಯದ್ಭುತ ಕಲಾವಿದರು. ಈ ಮೂವರೂ ಒಟ್ಟಿಗೆ ಒಂದೇ ಸ್ಕ್ರೀನ್‌‌ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅದೂ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಸಿನಿಮಾ 45ಗಾಗಿ ಅನ್ನೋದು ಇಂಟರೆಸ್ಟಿಂಗ್.

ADVERTISEMENT
ADVERTISEMENT

ಟೈಟಲ್ ಜೊತೆ ಮೇಕಿಂಗ್ ಹಂತದಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದ 45 ಸಿನಿಮಾ, ಟೀಸರ್‌ನಿಂದ ಸಂಥಿಂಗ್ ಸ್ಪೆಷಲ್ ಅನಿಸಿತ್ತು. ಅದಕ್ಕೆ ಕಾರಣ ಪಾತ್ರಗಳು, ಡೈಲಾಗ್ಸ್, ಕಥೆ ಮತ್ತು ವ್ಹಾವ್ ಫೀಲ್ ತರಿಸೋ ಮೇಕಿಂಗ್. ಹೌದು.. ಪ್ಯಾಷನೇಟ್ ಪ್ರೊಡ್ಯೂಸರ್ ರಮೇಶ್ ರೆಡ್ಡಿ ನಿರ್ಮಾಣದ 45 ಚಿತ್ರದ ಮೇಕಿಂಗ್ ಸಖತ್ ರಿಚ್ ಇದೆ. ಕಥೆಗೆ ಪೂರಕವಾಗಿ ಎಲ್ಲೂ ಕಾಂಪ್ರಮೈಸ್ ಆಗದೆ ಸಿನಿಮಾನ ಕಟ್ಟಿಕೊಡಲಾಗಿದೆ.

ಟೀಸರ್ ಲಾಂಚ್ ಬಳಿಕ ಪ್ರಮೋಷನ್ಸ್‌ಗಾಗಿ ಪರಭಾಷೆಗಳಿಗೂ ಲಗ್ಗೆ ಇಟ್ಟ ಟೀಂ 45, ಬಹಳ ವಿನೂತನವಾಗಿ ಪ್ರಚಾರ ಕಾರ್ಯಗಳನ್ನ ಮಾಡಿತು. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಸಮಯದಲ್ಲಿ ಎಲ್ಲರೂ ಹೈದ್ರಾಬಾದ್, ಚೆನ್ನೈ, ಮುಂಬೈ ಹಾಗೂ ಕೊಚ್ಚಿಗೆ ಹೋಗಿ ಬರ್ತಾರೆ. ಆದ್ರೆ ಇಲ್ಲಿ 45 ಟೀಂ, ಟೀಸರ್ ಬಿಡುಗಡೆ ಬಳಿಕ ಬೊಂಬಾಟ್ ರೆಸ್ಪಾನ್ಸ್ ವ್ಯಕ್ರವಾದ ಹಿನ್ನೆಲೆ ಹೋಗಿಬಂದರು. ಅದೂ ಪ್ರೈವೇಟ್ ಜೆಟ್ ಮೂಲಕ ಅನ್ನೋದು ಇಂಟರೆಸ್ಟಿಂಗ್.

ನೀವೆಲ್ಲಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ರ ನಟಸಾರ್ವಭೌಮ ಸಿನಿಮಾನ ನೋಡೇ ಇರ್ತೀರಾ. ಅದರಲ್ಲಿ ಪೊಲಿಟಿಷಿಯನ್ ಅಗಿದ್ದ ಅರ್ಮುಗಂ ರವಿಶಂಕರ್‌ನ ಫ್ಲೈಟ್‌‌ನಲ್ಲಿ ಸಂದರ್ಶನ ಮಾಡ್ತಾರೆ ಪುನೀತ್ ರಾಜ್‌ಕುಮಾರ್. ಅದರಂತೆ 45 ಸಿನಿಮಾ ಟೀಂನ ಖ್ಯಾತ ನಿರೂಪಕಿ ಅನುಶ್ರೀ ಪ್ರೈವೇಟ್ ಜೆಟ್‌‌ನಲ್ಲಿ ಸಂದರ್ಶನ ಮಾಡಿದ್ದಾರೆ. ಅದ್ರ ಝಲಕ್ ಇಲ್ಲಿದೆ ನೋಡಿ.

ಶೂಟಿಂಗ್ ಡೇಟ್ಸ್‌‌ನಲ್ಲಿ ಲಾಕ್ ಆಗಿದ್ದ ರಾಜ್ ಬಿ ಶೆಟ್ಟಿ ಈ ಪ್ರಮೋಷನ್ಸ್‌ಗೆ ಗೈರಾಗಿದ್ರು. ಆದ್ರೆ ಶಿವಣ್ಣ- ಉಪ್ಪಿ ತುಂಬಾ ಲೈವ್ಲಿಯಾಗಿ ಲವ್ಲಿಯಾಗಿ ನಡೆಸಿಕೊಟ್ಟ ಅನುಶ್ರೀ ಜೊತೆ ಮಾತುಕತೆ ಮಾಡಿದ್ರು. ಆ ಜಾಲಿ, ಫನ್ ರೈಡ್ ಇಂಟರ್‌‌ವ್ಯೂ ಇದೀಗ ಆನಂದ್ ಆಡಿಯೋ ರಿವೀಲ್ ಮಾಡಿದೆ. ಶಿವಣ್ಣ-ಉಪ್ಪಿಗೆ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ರಮೇಶ್ ರೆಡ್ಡಿ ಕೂಡ ಸಾಥ್ ನೀಡಿದ್ದಾರೆ.

ಅಂದಹಾಗೆ 45 ಸಿನಿಮಾ ಹೆವಿ ಗ್ರಾಫಿಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್‌‌‌ನಿಂದ ಕೂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿವೆ. ಇನ್ನು ಇಂಡಿಪೆಂಡೆನ್ಸ್ ಡೇ ವಿಶೇಷ 45 ಸಿನಿಮಾ ಇದೇ ಆಗಸ್ಟ್ 15ಕ್ಕೆ ವರ್ಲ್ಡ್‌‌ವೈಡ್ ಪಂಚಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.

Exit mobile version