ದಚ್ಚುನ ಬಿಟ್ಟು ಸುದೀಪ್ ಕ್ಯಾಂಪ್ ಸೇರಿದ್ರಾ ತರುಣ್ ಸುಧೀರ್..?

Untitled design 2025 09 27t180314.921

ರಾಬರ್ಟ್‌ ಹಾಗೂ ಕಾಟೇರ ಚಿತ್ರಗಳ ಬಳಿಕ ತರುಣ್ ಸುಧೀರ್ ನೆಕ್ಸ್ಟ್ ವೆಂಚರ್ ಸಿಂಧೂರ ಲಕ್ಷ್ಮಣ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ದಾಸ ದರ್ಶನ್ ಜೈಲು ಹಕ್ಕಿ ಆಗಿರೋ ಹಿನ್ನೆಲೆ ಆ ಸಿನಿಮಾಗೆ ಸುದೀಪ್ ನಾಯಕನಟ ಆಗ್ತಾರೆ ಎನ್ನಲಾಗ್ತಿದೆ. ಅದಕ್ಕೆ ಪೂರಕವಾಗಿ ತರುಣ್ ಕೂಡ ಬಾದ್‌ಷಾ ಕಿಚ್ಚನ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಕಂಪ್ಲೀಟ್‌ ಸ್ಟೋರಿ ನಿಮ್ಮ ಮುಂದಿದೆ ನೋಡಿ.

ತರುಣ್ ಸುಧೀರ್ ಸದ್ಯ ಕನ್ನಡ ಚಿತ್ರರಂಗದ ಸೆನ್ಸೇಷನಲ್ ಡೈರೆಕ್ಟರ್. ಅದ್ಭುತ ಕ್ರಿಯೇಟಿವ್ ಹೆಡ್. ಗಟ್ಟಿ ಕಥೆಗಳನ್ನ ತೆರೆಗೆ ತರುವಂತಹ ನಿರ್ಮಾಪಕರೂ ಹೌದು. ಎಲ್ಲಕ್ಕಿಂತ ಮಿಗಿಲಾಗಿ ಸ್ಯಾಂಡಲ್‌ವುಡ್‌ನ ಎಲ್ಲಾ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರೋ ಅಜಾತಶತ್ರು.

ಕಿಚ್ಚನ ಮನೆಯಲ್ಲಿ ತರುಣ್.. ಸಿಂಧೂರ ಲಕ್ಷ್ಮಣ ಕಿಕ್‌‌ಸ್ಟಾರ್ಟ್‌..?

ದಚ್ಚುನ ಬಿಟ್ಟು ಸುದೀಪ್ ಕ್ಯಾಂಪ್ ಸೇರಿದ್ರಾ ತರುಣ್ ಸುಧೀರ್?

ಚೌಕ, ರಾಬರ್ಟ್‌, ಕಾಟೇರ.. ಹೀಗೆ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನ ನೀಡಿ, ನಿರಂತರವಾಗಿ ದರ್ಶನ್ ಜೊತೆ ಕೆಲಸ ಮಾಡಿರೋ ತರುಣ್ ಸುಧೀರ್‌‌ಗೆ ಕಿಚ್ಚ ಸುದೀಪ್ ಅಂದ್ರೆ ಪಂಚಪ್ರಾಣ. ಅದಕ್ಕೆ ಕಾರಣ ಕಷ್ಟದಲ್ಲಿದ್ದಾಗ ಅವ್ರನ್ನ ಕೈ ಹಿಡಿದಿದ್ದೇ ಬಾದ್‌ಷಾ ಸುದೀಪ್. ನಂದಕಿಶೋರ್‌ರನ್ನ ಕರೆದು ಕೆಲಸ ನೀಡಿದ್ದಲ್ಲದೆ, ತಂದೆ ಸ್ಥಾನದಲ್ಲಿ ನಿಂತು ಬೆಳೆಸಿದ ರನ್ನ ಸುದೀಪ್. ಅದನ್ನ ಸ್ವತಃ ತರುಣ್ ಅವರೇ ಒಮ್ಮೆ ಹೇಳಿದ್ದರು.

ಅಂದಹಾಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರೋ ವಿಷಯ ಏನಪ್ಪಾ ಅಂದ್ರೆ, ಡಿಬಾಸ್ ದರ್ಶನ್ ಕ್ಯಾಂಪ್ ಬಿಟ್ಟು ಕಿಚ್ಚನ ಕ್ಯಾಂಪ್ ಸೇರಿದ್ದಾರಂತೆ ತರುಣ್ ಸುಧೀರ್ ಅನ್ನೋದು. ಅದಕ್ಕೆ ಪುಷ್ಠಿ ನೀಡುವಂತೆ ಅಭಿನಯ ಚಕ್ರವರ್ತಿ ಸುದೀಪ್ ಮನೆಯಲ್ಲಿ ತರುಣ್ ಸುಧೀರ್ ಕಾಣಿಸಿಕೊಂಡಿರೋದು. ಹೌದು.. ತರುಣ್ ಸುಧೀರ್ ನಟ ಕಿಚ್ಚನ ಮನೆಗೆ ಹೋಗಿರೋದು ನಿಜ. ಆದ್ರೆ ಅದು ತಮ್ಮ ಇತ್ತೀಚಿನ ರಿಲೀಸ್ ಏಳುಮಲೆ ಸಿನಿಮಾನ ತೋರಿಸೋಕೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಇಲ್ಲಿದೆ ಅಂತೆ ಕಂತೆಗಳ ಅಸಲಿ ಕಹಾನಿ.. ಕಿಚ್ಚನೇ ಗಾಡ್ ಫಾದರ್

‘ಏಳುಮಲೆ’ ನೋಡಿ ಭೇಷ್ ಎಂದ ಬಾದ್‌ಷಾ ಮಾಡಿದ್ದೇನು..?!

ಸಿನಿಮಾ ನೋಡಿದ ಸುದೀಪ್ ಇಡೀ ತಂಡವನ್ನು ಪ್ರಶಂಸಿಸಿದ್ದಾರೆ. ಗೆಳತಿ ರಕ್ಷಿತಾ ಸಹೋದರ ರಾಣಾ ನಟನೆ, ತರುಣ್ ಪ್ರೊಡಕ್ಷನ್ ವ್ಯಾಲ್ಯೂಸ್ ಹಾಗೂ ಪುನೀತ್ ರಂಗಸ್ವಾಮಿ ನಿರ್ದೇಶನ ಕೌಶಲ್ಯಗಳನ್ನ ಕೊಂಡಾಡಿದ್ದಾರೆ ಕಿಚ್ಚ. ಅಲ್ಲದೆ, ಗಿಫ್ಟ್ ನೀಡಲು ಹೋದ ರಾಣಾರಿಂದ ಅದನ್ನ ಸ್ವೀಕರಿಸದೆ, ಪ್ರೀತಿಯಿಂದಲೇ ತಿರಸ್ಕರಿಸಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ.

ಇವೆಲ್ಲವುಗಳ ನಡುವೆ ತರುಣ್ ಸುಧೀರ್ ನೆಕ್ಸ್ಟ್ ವೆಂಚರ್ ಸಿಂಧೂರ ಲಕ್ಷ್ಮಣ ಸಿನಿಮಾನ ದರ್ಶನ್‌ಗೆ ಬಿಟ್ಟು ಸುದೀಪ್‌ಗೆ ಮಾಡ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಇತ್ತೀಚೆಗೆ ಸ್ವತಃ ತರುಣ್ ಅವರೇ ಏಳುಮಲೆ ಸಕ್ಸಸ್ ಮೀಟ್‌‌ನಲ್ಲಿ ನನ್ನ ಕಡೆಯಿಂದ ಕಥೆ ರೆಡಿ ಇದೆ. ಪ್ರೊಡಕ್ಷನ್ ಹೌಸ್ ಶೂಟಿಂಗ್‌ಗೆ ಹೋಗೋಣ ಅಂದ್ರೆ ನಾನು ರೆಡಿ ಅಂದಿದ್ರು ತರುಣ್ ಸುಧೀರ್. ಆದ್ರೆ ದರ್ಶನ್ ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಯಾವಾಗ ಹೊರಗೆ ಬರ್ತಾರೋ ಆ ದೇವರೇ ಬಲ್ಲ. ಹಾಗಾಗಿ ಅದೇ ಕಥೆಯನ್ನ ಸುದೀಪ್‌ಗೆ ಡೈರೆಕ್ಟ್ ಮಾಡ್ತಾರೆ ಅನ್ನೋದು ಸದ್ಯದ ಟಾಕ್.

ಈ ಹಿಂದೆ ರಾಜ ವೀರ ಮದಕರಿ ನಾಯಕ ಸಿನಿಮಾ ವಿಚಾರದಲ್ಲೂ ಹೀಗೆಯೇ ಆಗಿತ್ತು. ಮೊದಲು ಸುದೀಪ್ ಎನ್ನಲಾಗಿತ್ತು. ನಂತರ ಅದು ದರ್ಶನ್ ಪಾಲಾಗಿತ್ತು. ಕೇರಳದಲ್ಲಿ ಒಂದು ಶೆಡ್ಯೂಲ್ ಚಿತ್ರೀಕರಿಸಿ, ಡೈರೆಕ್ಟರ್ ಎಸ್ ವಿ ರಾಜೇಂದ್ರಸಿಂಗ್ ಬಾಬು ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅದನ್ನ ಅಲ್ಲಿಗೇ ಕೈ ಬಿಟ್ಟಿದ್ದರು. ಇದೀಗ ಸಿಂಧೂರ ಲಕ್ಷ್ಮಣ ಚಿತ್ರದ ವಿಷಯದಲ್ಲೂ ಹಾಗೆಯೇ ಆಗ್ತಿದೆ. ಆದ್ರೆ ಈ ಟೈಟಲ್ ಈಗಾಗ್ಲೇ ಹೆಬ್ಬುಲಿ ಫೇಮ್ ಉಮಾಪತಿ ಶ್ರೀನಿವಾಸ್ ಗೌಡರ ಬಳಿ ಇದೆ. ಹಾಗಾಗಿ ತರುಣ್ ಯಾರನ್ನ ಇಟ್ಕೊಂಡು ಚಿತ್ರೀಕರಣಕ್ಕೆ ಹೋಗ್ತಾರೆ ಅನ್ನೋದಕ್ಕೆ ಸ್ವತಃ ಅವರೇ ಉತ್ತರಿಸಬೇಕಿದೆ.

 

 

Exit mobile version