ಇಸ್ಲಾಂಗೆ ಮತಾಂತರಗೊಂಡ ತಮಿಳು ನಟ ಜೈ ಹೇಳಿದ್ದೇನು?

ದೇವಸ್ಥಾನಗಳಲ್ಲಿ ನಟನಿಗೆ ಆಗಿದ್ದೇನು? ಧರ್ಮ ಬಿಟ್ಟಿದ್ಯಾಕೆ..?!

Untitled design 2026 05 22T171857.829

ತಮಿಳು ನಟ ಜೈ ಇಸ್ಲಾಂಗೆ ಮತಾಂತರ ಆಗಿರೋ ವಿಷಯ ಬಹಳ ಹಳೆಯದು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸ್ತಿದೆ ಆ ಮತಾಂತರ ನ್ಯೂಸ್. ಇಷ್ಟಕ್ಕೂ ಆತನಿಗೆ ಹಿಂದೂ ದೇವಾಲಯಗಳಿಂದ ಆಗಿರೋ ಅವಮಾನ ಅಥ್ವಾ ಅಪಮಾನ ಆದ್ರೂ ಏನು..? ಖುದ್ದು ಜೈ ನೀಡಿರೋ ಸ್ಟೇಟ್ಮೆಂಟ್‌‌ನಲ್ಲಿ ಅಂಥದ್ದೇನಿದೆ..? ಇದರ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

ಕಾಲಿವುಡ್‌ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವ ಸೋದರಳಿಯ, ನಟ ಜೈ, ಆರಂಭದಲ್ಲಿ ಮ್ಯೂಸಿಷಿಯನ್ ಆಗಬೇಕಿದ್ದವರು. ಆದರೆ  ದಳಪತಿ ವಿಜಯ್ ನಟನೆಯ ಭಗವತಿ ಚಿತ್ರದಲ್ಲಿ ಸಣ್ಣ ರೋಲ್ ಮಾಡಿ, ನಂತರ ಸುಬ್ರಮಣ್ಯಪುರಂ ಸಿನಿಮಾ ಮೂಲಕ ಓವರ್‌ನೈಟ್ ಸ್ಟಾರ್ ಆಗಿಬಿಟ್ಟರು. ರಾಜಾ ರಾಣಿ, ಜರ್ನಿಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸಖತ್ ಫೇಮಸ್ ಕೂಡ ಆದ್ರು. ಈ ಹ್ಯಾಂಡ್ಸಮ್ ಹೀರೋ ಕೆರಿಯರ್, ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಫ್ಲಾಪ್‌ಗಳಿಂದ ಕೊಂಚ ಡಲ್ ಆಗಿದೆ. ಅದಕ್ಕೆ ಅವ್ರ ಮತಾಂತರವೇ ಕಾರಣ ಎನ್ನಲಾಗ್ತಿದೆ.

ಜೈ ಸಿನಿಮಾ ಜರ್ನಿಗಿಂತ, ಅವರ ಲೈಫ್‌ನಲ್ಲಾದ ಒಂದು ಸೀಕ್ರೆಟ್ ಟ್ವಿಸ್ಟ್ ಇಡೀ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಯೆಸ್.. ಇಷ್ಟು ದಿನ ಸೈಲೆಂಟ್ ಆಗಿದ್ದ ಜೈ ಹೇಳಿಕೆಯೊಂದು ಇದ್ದಕ್ಕಿದ್ದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಸಂಚಲನ ಮೂಡಿಸುತ್ತಿದೆ. ತಮ್ಮ ಲೈಫ್‌ನ ಬಿಗ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿರೋ ವಿಡಿಯೋ ಈಗ ವೈರಲ್ ಆಗ್ತಿದೆ. ಎಸ್ 2019ರಲ್ಲಿ ಮಾತನಾಡಿರೋ ಜೈ ವಿಡಿಯೋ ಈಗ ವೈರಲ್ ಆಗ್ತಿದೆ. ಅದೇನಂದ್ರೆ, ಅವರು ಈಗಲ್ಲ, ಬರೋಬ್ಬರಿ 2011 ರಲ್ಲೇ ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಿದ್ದರಂತೆ. ಈ ಹಿಂದೆ ಶಬರಿಮಲೆಗೆ ಮಾಲೆ ಧರಿಸಿ, ಬಳಿಕ ಜೀಸಸ್ ರೋಸರಿ ಸರ ಹಾಕಿಕೊಂಡು ಉಪವಾಸ ಮಾಡುತ್ತಾ, ಎಲ್ಲಾ ದೇವರು ಒಂದೇ ಅಂದುಕೊಂಡಿದ್ದ ಜೈ ಬದುಕಿನಲ್ಲಿ ಒಂದು ಕಹಿ ಘಟನೆ ನಡೆದಿತ್ತು. ಕೆಲವು ದೇವಸ್ಥಾನಗಳಿಗೆ ಹೋದಾಗ ಅವರಿಗೆ ನಿರೀಕ್ಷಿಸದ ರೀತಿಯಲ್ಲಿ ಅವಮಾನಕಾರಿ ಅನುಭವಗಳಾಗಿದ್ದವಂತೆ. ಈ ಇನ್ಸಲ್ಟ್‌ಗಳನ್ನು ಸಹಿಸಲಾರದೆ ಬೇಸತ್ತ ಜೈ, ಮನಸ್ಸಿನ ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು.

ಆಗಲೇ ನೋಡಿ ಅವರ ಲೈಫ್‌ಗೆ ಆ ಮಸೀದಿಯ ಟ್ವಿಸ್ಟ್ ಸಿಕ್ಕಿದ್ದು. ಮೊದಲ ಬಾರಿಗೆ ಮಸೀದಿಯೊಳಗೆ ಕಾಲಿಟ್ಟಾಗ ಜೈಗೆ ಅಲ್ಲಿನ ವಾತಾವರಣವೇ ಮ್ಯಾಜಿಕ್ ತರಹ ಕಂಡಿದೆ. ಅಲ್ಲಿ ಸ್ಟಾರ್ ನಟ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದೇ ಲೈನ್‌‌‌ನಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದರು. ಮಸೀದಿಯ ಒಳಗಿದ್ದ ಜನ ಜೈ ಅವರನ್ನು ಗುರುತಿಸಿದರೂ, ಸೆಲ್ಫಿ-ಫೋಟೋ ಅಂತ ಮುಗಿ ಬೀಳದೆ ಅವರ ಪ್ರಾರ್ಥನೆಗೆ ಪ್ರೈವಸಿ ಹಾಗೂ ರೆಸ್ಪೆಕ್ಟ್ ಕೊಟ್ಟಿದ್ದಾರೆ. ಈ ‘ಅಸಲಿ ಸಮಾನತೆ’ ನೋಡಿ ಫಿದಾ ಆದ ಜೈ, ತಕ್ಷಣವೇ ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಲು ನಿರ್ಧರಿಸಿದ್ದರಂತೆ. ಸದ್ಯಕ್ಕೆ ತಮ್ಮ ಹೆಸರನ್ನು ‘ಅಜೀಜ್ ಜೈ’ ಎಂದು ಬದಲಾಯಿಸಿಕೊಳ್ಳುವ ಆಲೋಚನೆಯಲ್ಲಿರುವ ನಟ, ನನ್ನ ಸಿನಿಮಾಗಳು ಫ್ಲಾಪ್ ಆಗಿದ್ದಕ್ಕೂ, ನಾನು ಧರ್ಮ ಬದಲಾಯಿಸಿದ್ದಕ್ಕೂ ಯಾವುದೇ ಕನೆಕ್ಷನ್ ಇಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಸಾಕಷ್ಟು ಮಂದಿ ಹಿಂದೂ ಧರ್ಮದ ಸ್ಟಾರ್‌‌ಗಳು ಇಸ್ಲಾಂಗೆ ಮತಾಂತರಗೊಂಡಿದ್ದು, ಅವರು ನೀಡುವ ಕಾರಣಗಳು ಮಾತ್ರ ಚಿತ್ರ ವಿಚಿತ್ರ ಅನಿಸಲಿವೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

Exit mobile version