ಯೂಟ್ಯೂಬ್‌ನಲ್ಲಿ ಸುನಾಮಿ ಸುಂಟರಗಾಳಿಯಾಗಿ ಅಬ್ಬರಿಸಿ, ಆರ್ಭಟಿಸುತ್ತಿದೆ ಯಶ್ ತಬಾಹಿ ಸಾಂಗ್. ಯೆಸ್.. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ ಅಕ್ಷರಶಃ ಯೂಟ್ಯೂಬ್‌ನ ಹೈಜಾಕ್ ಮಾಡಿದೆ. ಹಾಗಾದ್ರೆ ಎಷ್ಟು ಕೋಟಿ ವೀವ್ಸ್ ಆಗಿದೆ..? ರೆಕಾರ್ಡ್ ಕಾ ಬಾಪ್ ರಾಕಿಂಗ್ ಸ್ಟಾರ್ ಬರೆದ ಆ ನ್ಯೂ ರೆಕಾರ್ಡ್ ಆದ್ರೂ ಏನು..? ಜಸ್ಟ್ ಹ್ಯಾವ್ ಎ ಲುಕ್.
ತಬಾಹಿ ಯೂಟ್ಯೂಬ್ ಹೈಜಾಕ್.. ಎಷ್ಟು ಕೋಟಿ ವೀವ್ಸ್ ಗೊತ್ತಾ?
ಫಾಸ್ಟೆಸ್ಟ್ 5Cr ವೀವ್ಸ್ ರೆಕಾರ್ಡ್.. ಮಾನ್‌ಸ್ಟರ್ ಯಶ್ ರಾಕ್ಸ್..!!
ಗ್ಲೋಬಲ್ ಆಡಿಯೆನ್ಸ್ ಕಣ್ಮನ ತಣಿಸಿದ ಸರಸ, ಸಮರ, ಸಲ್ಲಾಪ
ಇದು ಜಸ್ಟ್ ಒಂದೇ ಒಂದು ಝಲಕ್.. ಪಿಕ್ಚರ್ ಅಭಿ ಬಾಕಿ ಹೈ..!!
ಸದ್ಯ ಸಿನಿದುನಿಯಾದ ಲೇಟೆಸ್ಟ್ ಸೆನ್ಸೇಷನ್. ಟ್ರೆಂಡಿಂಗ್ ನಂ.1 ಎಲ್ಲವೂ ತಬಾಹಿ ತಬಾಹಿ ತಬಾಹಿ. ಯೆಸ್.. ನಮ್ಮ ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರದ ತಬಾಹಿ ಸಾಂಗ್ ಚಿತ್ರಪ್ರೇಮಿಗಳ ಕೌತುಕತೆ ಹತ್ತು ಪಟ್ಟು ಹೆಚ್ಚಿಸಿದೆ. ನೋಡುಗರ ಕಣ್ಮನ ತಣಿಸುತ್ತಿರೋ ಈ ಸರಸ, ಸಮರ, ಸಲ್ಲಾಪಗಳ ತಬಾಹಿ ಗೀತೆ ಪ್ರಣಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿದೆ. ಯಶ್‌ನ ಎಲ್ರೂ ಮಾಡ್ರನ್ ಪ್ರಣಯರಾಜ ಅಂತಿದ್ದಾರೆ.
ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಈ ತಬಾಹಿ ಗೀತೆ ಬಿಡುಗಡೆ ಆಗಿದ್ದು, ಪ್ಯಾನ್ ಇಂಡಿಯಾದಾದ್ಯಂತ ಅದ್ಭುತ, ಅಮೋಘ, ಅದ್ವಿತೀಯ ಅನ್ನೋ ಬೊಂಬಾಟ್ ರೆಸ್ಪಾನ್ಸ್ ವ್ಯಕ್ತವಾಗಿದೆ. ಬರೀ ಆಡಿಯೋ ಸಾಂಗ್ ರಿಲೀಸ್ ಆದಾಗ ಅದು ಅಷ್ಟಾಗಿ ಇಂಪ್ಯಾಕ್ಟ್ ಆಗಿರಲಿಲ್ಲ. ಆದ್ರೀಗ ವಿಡಿಯೋ ಸಾಂಗ್ ಒಂಥರಾ ಡಬಲ್ ಡೋಸ್ ನೀಡಿದೆ. ಎಲ್ಲರೂ ಕಣ್ಣು, ಬಾಯಿ ಬಿಟ್ಕೊಂಡು ನೋಡ್ತಿರೋದು ಇಂಟರೆಸ್ಟಿಂಗ್.
ಯಶ್ ಏನೇ ಮಾಡಿದ್ರೂ ಅದು ರೆಕಾರ್ಡ್ ಆಗಲಿದೆ. ಕೆಜಿಎಫ್ ಮೂಲಕ ಅಂತಹ ಹತ್ತಾರು ದಾಖಲೆಗಳನ್ನ ಬರೆದು ರೆಕಾರ್ಡ್ ಕಾ ಬಾಪ್ ಅನಿಸಿಕೊಂಡಿದ್ದ ಮಾನ್‌ಸ್ಟರ್, ಇದೀಗ ತಬಾಹಿಯಿಂದ ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಫಾಸ್ಟೆಸ್ಟ್ 5 ಕ್ರೋರ್ ವೀವ್ಸ್ ಕಂಡ ಸಾಂಗ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ತಬಾಹಿ. ಹೌದು.. ರಿಲೀಸ್ ಆದ ದಿನವೇ ಸಂಜೆ ವೇಳೆಗೆ ಮೂರೂವರೆ ಕೋಟಿ ವೀವ್ಸ್ ಪಡೆದಿದ್ದ ಈ ಗೀತೆ ಇಂದು ಬೆಳಗ್ಗೆ ವೇಳೆಗೆ 5 ಕೋಟಿ ಕ್ಲಬ್ ಸೇರಿದೆ.
ಅದ್ರ ಸಿಂಹಪಾಲು ಆಡಿಯೆನ್ಸ್ ಕನ್ನಡಿಗರೇ. ನಂತ್ರ ಎರಡನೇ ಅತಿಹೆಚ್ಚು ವೀವ್ಸ್ ಹಿಂದಿ ಆಗಿದ್ದು, ತೆಲುಗು, ತಮಿಳು ಹಾಗೂ ಮಲಯಾಳಂ ಮೂರು, ನಾಲ್ಕು ಹಾಗೂ ಐದನೇ ಸ್ಥಾನ ಅಲಂಕರಿಸಿವೆ. 2 ಮಿಲಿಯನ್‌ಗೂ ಅಧಿಕ ಲೈಕ್ಸ್ ಸಿಕ್ಕಿದ್ದು, ಇದು ಒಬ್ಬ ಗ್ಲೋಬಲ್ ಸ್ಟಾರ್‌ಗೆ ವಿಶ್ವದಾದ್ಯಂತ ಇರೋ ಕ್ರೇಜ್‌ನ ಕೈಗನ್ನಡಿ ಅಂದ್ರೆ ತಪ್ಪಾಗಲ್ಲ.
ಟಾಕ್ಸಿಕ್ ರಿಲೀಸ್‌ಗೆ 48 ದಿನಗಳು ಬಾಕಿ ಇದ್ದು, ಯಶ್ ಈ ಸಿನಿಮಾನ ಗ್ಲೋಬಲ್ ಆಡಿಯೆನ್ಸ್‌ಗೆ ರೀಚ್ ಮಾಡಿಸಲು ಮಾಸ್ಟರ್‌ಪ್ಲ್ಯಾನ್ ಮಾಡ್ತಿದ್ದಾರೆ. ಪ್ಯಾನ್ ಇಂಡಿಯಾ 4 ಮೆಗಾ ಇವೆಂಟ್ಸ್ ಜರುಗಲಿದ್ದು, ಬೆಂಗಳೂರಲ್ಲಿ ಒಂದು ಪ್ಯಾನ್ ವರ್ಲ್ಡ್ ಇವೆಂಟ್ ನಡೆಯಲಿದೆ. ಆ ಮೂಲಕ ಟಾಕ್ಸಿಕ್ ಮೆಗಾ ಪ್ರಮೋಷನ್ಸ್ ನಡೆಯಲಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಹಾಗೂ ಕೆವಿಎನ್-ಯಶ್ ನಿರ್ಮಾಣದ ಟಾಕ್ಸಿಕ್, ಆಗಸ್ಟ್ 26ರ ನಂತ್ರ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.
