ಸೂತ್ರಧಾರಿ ಬೆನ್ನಿಗೆ ಶಿವಣ್ಣ- ಕ್ರೇಜಿಸ್ಟಾರ್.. ಸಂಜು ಬ್ಯಾನ್..?

ಶಿವಣ್ಣ ನನ್ನ ಮಧ್ಯೆ ಸ್ಟಾರ್ ವಾರ್ ಇಲ್ಲ ಎಂದ ರವಿಚಂದ್ರನ್

Untitled design 2025 05 05t211905.606

ಱಪರ್ ಚಂದನ್ ಶೆಟ್ಟಿಯ ಸೂತ್ರಧಾರಿ ಹಾಗೂ ಅದರ ಪಾತ್ರಧಾರಿಗಳ ಬೆನ್ನಿಗೆ ಲಿವಿಂಗ್ ಲೆಜೆಂಡ್ ಶಿವಣ್ಣ ಹಾಗೂ ಟ್ರೆಂಡ್ ಸೆಟ್ಟರ್ ರವಿಚಂದ್ರನ್ ನಿಂತಿದ್ದಾರೆ. ಆದ್ರೆ ಪ್ರೊಡ್ಯೂಸರ್ ನವರಸನ್ ನಾಯಕಿಯನ್ನ ಬ್ಯಾನ್ ಮಾಡ್ಬೇಕು ಅಂತ ಚಕಾರ ಎತ್ತಿದ್ದಾರೆ. ಇಷ್ಟಕ್ಕೂ ಅಂಥದ್ದೇನಾಯ್ತು ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ.

ಸೂತ್ರಧಾರಿ.. ಇದೇ ಮೇ 9ರ ಶುಕ್ರವಾರದಂದು ಪ್ರೇಕ್ಷಕರ ಮುಂದೆ ಬರ್ತಿರೋ ಸಿನಿಮಾ. ಕನ್ನಡ ಱಪರ್ ಚಂದನ್ ಶೆಟ್ಟಿ, ಸಂಗೀತ ಸಂಯೋಜನೆ ಜೊತೆಗೆ ತಾವೇ ನಾಯಕನಟನಾಗಿ ಬಣ್ಣ ಹಚ್ಚಿರೋ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾ. ಅಪೂರ್ವ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಕಾಣಸಿಗಲಿದ್ದು, ಸದ್ಯ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ನೋಡುಗರ ನಾಡಿಮಿಡಿತ ಹೆಚ್ಚಿಸಿವೆ.

ಇತ್ತೀಚೆಗೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಜೋರಾಗಿ ನಡೆಯಿತು. ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಹಾಗೂ ರವಿಚಂದ್ರನ್ ಆಗಮಿಸಿ, ಸಿನಿಮಾದ ಸ್ಟ್ರೆಂಥ್ ಹೆಚ್ಚಿಸಿದರು. ಕಿರಣ್ ನಿರ್ದೇಶನದ ಹಾಗೂ ನವರಸನ್ ನಿರ್ಮಾಣದ ಈ ಸಿನಿಮಾದ ಫಂಕ್ಷನ್‌ಗೆ ಸ್ಟಾರ್‌ವಾರ್ ಬಿಟ್ಟು ನಾನು ಶಿವಣ್ಣ ಜೊತೆ ಬಂದಿದ್ದೀನಿ ಅಂದ್ರು ರವಿಮಾಮ. ಅಷ್ಟೇ ಅಲ್ಲ, ಮಾತಾಡಿದ್ರೆ ತಲೆ ತೂತ ಮಾಡ್ತೀಯಾ ಚಂದನ್ ಅಂತ ಱಪರ್ ಕಾಲೆಳೆದರು ಕ್ರೇಜಿಸ್ಟಾರ್.

ಇನ್ನು ಡ್ಯಾಶ್ ಸಾಂಗ್‌ನ ನಾನು ಸದಾ ಗುನುಗ್ತಿರ್ತೀನಿ ಎಂದ ಶಿವಣ್ಣ, ಟಗರು ಸಿನಿಮಾದಿಂದ ನನಗೆ ಚಂದನ್ ಇಷ್ಟ ಅಂತ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.

ಲೈಫ್‌‌ನಲ್ಲಿ ಶಿವಣ್ಣ-ರವಿ ಸರ್ ಇಬ್ಬರೂ ನನ್ನ ಸಿನಿಮಾಗೆ ಗೆಸ್ಟ್ ಆಗಿ ಬರ್ತಾರೆ ಅಂತ ಊಹಿಸಿರಲಿಲ್ಲ ಅಂತ ಖುಷಿ ವ್ಯಕ್ತಪಿಡಿಸಿದ ಚಂದನ್ ಶೆಟ್ಟಿ, ನಿಮ್ಮ ಹಾದಿಯಲ್ಲಿ ನಾವು ನಡೀತೀವಿ ಅಂತ ಭರವಸೆ ಕೊಟ್ಟರು. 45 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಚಿತ್ರತಂಡಕ್ಕೆ ಶುಭ ಕೋರಿದರು.

ಇನ್ನು ನಟಿ ಸಂಜನಾ ಆನಂದ್‌ರನ್ನ ಚಿತ್ರರಂಗದಿಂದ ಬ್ಯಾನ್ ಮಾಡ್ಬೇಕು. ಆಕೆ ಸಹನಟ ಚಂದನ್ ಶೆಟ್ಟಿಯನ್ನ ಅಣ್ಣ ಅಂತ ಕರೆದಿದ್ದು ನನಗೆ ಇಷ್ಟವಾಗಲಿಲ್ಲ ಅಂತ ಒಂದಷ್ಟು ಕಡೆ ಮಾತಾಡಿದ್ದ ನವರಸನ್ ಅವರಿಗೆ ಅವರ ತಪ್ಪಿನ ಅರಿವಾಗಿದೆ. ಇದೀಗ ಸಂಜನಾ ಆನಂದ್‌ ತಾಯಿ ಜೊತೆ ಮಾತನಾಡಿರೋ ಅವರು, ಆಖೆ ಜೊತೆ ಮತ್ತೊಂದು ಸಿನಿಮಾ ಮಾಡೋ ಯೋಜನೆಯಲ್ಲಿದ್ದಾರೆ.

ಅದೇನೇ ಇರಲಿ ಒಂದು ಹಾಡಿಗಾಗಿ ಗೆಸ್ಟ್ ಅಪಿಯರೆನ್ಸ್ ನೀಡಿರೋ ನಟಿಯನ್ನ ಸಿನಿಮಾದ ಕಂಪ್ಲೀಟ್ ಪ್ರಮೋಷನ್ಸ್‌ಗೆ ಇರಲೇ ಬೇಕು ಅಂತ ನಿರ್ಮಾಪಕರು ನಿರೀಕ್ಷಿಸುವುದು ತಪ್ಪು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

Exit mobile version