ದಿ ವೆಯ್ಟ್ ಈಸ್ ಓವರ್.. ಬಹುನಿರೀಕ್ಷಿತ ಸೂಪರ್ ಸ್ಟಾರ್-ಯೂನಿವರ್ಸಲ್ ಸ್ಟಾರ್‌ಗಳ ಸಿನಿಮಾ ರಜನೀಕಾಂತ್-ಕಮಲ್ ಹಾಸನ್ ಮಹಾಸಂಗಮಕ್ಕೆ ಮುನ್ನುಡಿ ಬರೆದೇ ಬಿಟ್ಟಿದೆ. ರಜನಿ-ಕಮಲ್ ರೀ ಯೂನಿಯನ್ ಟೀಸರ್ ರಿಲೀಸ್ ಆಗಿದ್ದು, ಇಬ್ಬರ ಲುಕ್ಸ್ ಸಖತ್ ಕಿಕ್ ಕೊಡ್ತಿವೆ. ಇಷ್ಟಕ್ಕೂ ಡೈರೆಕ್ಟರ್ ಯಾರು..? ಕಾನ್ಸೆಪ್ಟ್ ಏನು..? ಇಬ್ಬರಲ್ಲಿ ಹೀರೋ ಯಾರು ವಿಲನ್ ಯಾರು ಅಂತೀರಾ..? ಈ ಸ್ಪೆಷಲ್ ಸ್ಟೋರಿ ಒಮ್ಮೆ ನೋಡಿ.
- ರಜನೀಕಾಂತ್-ಕಮಲ್ ರೀ ಯೂನಿಯನ್ ಟೀಸರ್ ಔಟ್
- ಹೀರೋ ಯಾರು..? ವಿಲನ್ ಯಾರು..? ನೆಲ್ಸನ್‌ಗೆ ತಲೆನೋವು
- ಕೆಲವರು ರೂಲ್ಸ್ ಸೆಟ್ ಮಾಡ್ತಾರೆ.. ಇವ್ರು ರೂಲ್ ಮಾಡ್ತಾರೆ
- ಜೈಲರ್ ಡೈರೆಕ್ಟರ್ ಜೊತೆ ಲೆಜೆಂಡ್ಸ್.. ಫಸ್ಟ್ ಲುಕ್ ಸೂಪರ್
ಸೂಪರ್ ಸ್ಟಾರ್ ರಜನೀಕಾಂತ್.. ಚಿತ್ರರಂಗದಲ್ಲಿ ಯಶಸ್ವಿ 50 ವರ್ಷ ಪೂರೈಸಿರೋ ಸಿನಿಸಂತ. 74ರ ಹರೆಯದಲ್ಲೂ ಯಂಗ್‌ಸ್ಟರ್ಸ್‌ನ ನಾಚಿಸೋ ಎನರ್ಜಿ ಹೌಸ್. 171 ಸಿನಿಮಾಗಳಲ್ಲಿ ನಟಿಸಿರೋ ತಲೈವಾ, ಕೂಲಿ ಚಿತ್ರದ ಮೂಲಕ ವಿಶ್ವ ಸಿನಿದುನಿಯಾದಲ್ಲಿ ಇಂದಿಗೂ ಅದೇ ಗತ್ತು, ಗೈರತ್ತು ಪ್ರದರ್ಶಿಸಿ, ಜೈಲರ್-2 ಕೊಡೋ ಧಾವಂತದಲ್ಲಿರೋ ಸ್ಟೈಲ್ ಕಾ ಬಾಪ್.
ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್.. ಎಕ್ಸ್‌ಪೆರಿಮೆಂಟ್ಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿರೋ ಕಮಲ್, ಮೂಕಿ ಟು ಟಾಕಿ ವರೆಗೆ ಬರೋಬ್ಬರಿ 234 ಚಿತ್ರಗಳನ್ನ ಮಾಡಿ, ಇಂದಿಗೂ ಅದೇ ಡಿಮ್ಯಾಂಡ್ ಉಳಿಸಿಕೊಂಡಿರೋ ಮೋಸ್ಟ್ ಸ್ಟೈಲಿಶ್ ಸ್ಟಾರ್. 70 ವರ್ಷ ಹರೆಯದ ಕಮಲ್, ಇಂದಿನ ಸ್ಟಾರ್ಸ್ ಕೂಡ ಕಾಪಿ ಮಾಡುವಂತಹ ಸ್ಟೈಲಿಶ್ ಲುಕ್ಸ್‌ನಲ್ಲಿ ಕಮಾಲ್ ಮಾಡ್ತಿದ್ದಾರೆ. ಥಗ್ ಲೈಫ್ ಸಿನಿಮಾ ಅಟ್ಟರ್ ಫ್ಲಾಪ್ ಆದ್ರೂ, ವಿಕ್ರಮ್ ಚಿತ್ರದ ಸಕ್ಸಸ್ ಅವ್ರ ಸ್ಟಾರ್ಡಮ್‌ನ ಜೀವಂತವಾಗಿಟ್ಟಿದೆ.
ದಳಪತಿ ವಿಜಯ್‌ಗೆ ಬೀಸ್ಟ್ ಹಾಗೂ ತಲೈವಾ ರಜನೀಕಾಂತ್‌ಗೆ ಜೈಲರ್ ಸಿನಿಮಾಗಳನ್ನ ನಿರ್ದೇಶಿಸಿ, ಜೈಲರ್-2ಗೆ ಆ್ಯಕ್ಷನ್ ಕಟ್ ಹೇಳ್ತಿರೋ ನೆಲ್ಸನ್ ದಿಲೀಪ್ ಕುಮಾರ್ ಅವರೇ ಈ ಹೆಸರಿಡದ ರಜಿನಿ-ಕಮಲ್ ರೀ ಯೂನಿಯನ್ ಚಿತ್ರ ಮಾಡ್ತಿದ್ದಾರೆ. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಅನಿರುದ್ದ್ ರವಿಚಂದರ್ ಒನ್ಸ್ ಅಗೈನ್ ನೆಲ್ಸನ್‌ಗೆ ಸಾಥ್ ನೀಡಿದ್ದು, ಅನೌನ್ಸ್‌ಮೆಂಟ್ ಟೀಸರ್ ಮಸ್ತ್ ಮಜಾ ಕೊಡ್ತಿದೆ.
46 ವರ್ಷಗಳ ನಂತ್ರ ತಲೈವಾ ರಜನೀಕಾಂತ್ ಹಾಗೂ ಕಮಲ್ ಹಾಸನ್ ಒಂದೇ ಚಿತ್ರದಲ್ಲಿ ನಟಿಸ್ತಿರೋದು ಇಂಟರೆಸ್ಟಿಂಗ್. ಈ ಹಿಂದೆ 1975ರ ಅಪೂರ್ವ ರಾಗಂಗಳ್ ಚಿತ್ರದಲ್ಲೇ ರಜನಿ-ಕಮಲ್ ಒಟ್ಟಿಗೆ ಕಮಾಲ್ ಮಾಡಿದ್ರು. ಅದರಲ್ಲಿ ಕಮಲ್ ಹಾಸನ್ ಹೀರೋ ಆದ್ರೆ ರಜನೀಕಾಂತ್ ವಿಲನ್. ಆ ಬಳಿಕ ಒಂದಷ್ಟು ಚಿತ್ರಗಳಲ್ಲಿ ಇವರಿಬ್ಬರೂ ತೆರೆ ಹಂಚಿಕೊಂಡರಾದ್ರೂ 1979ರ ಅಲಾವುದ್ದೀನುಮ್ ಅರ್ಪುತ ವಿಲಕ್ಕುಂ ಚಿತ್ರವೇ ಕೊನೆ. ಅದಾದ ಬಳಿಕ ಒಂದೇ ಒಂದು ಚಿತ್ರದಲ್ಲಿ ಕೂಡ ಒಟ್ಟಿಗೆ ನಟಿಸಿಲ್ಲ. ಇದೀಗ ಮತ್ತೆ ಇವ್ರ ಸಮಾಗಮಕ್ಕೆ ವೇದಿಕೆ ಸಜ್ಜಾಗಿದೆ.
ಕಾನ್ಸೆಪ್ಟ್ ಟೀಸರ್ ಶೂಟ್ ಮಾಡಿ, ಎರಡು ಮಹಾ ಪರ್ವತಗಳನ್ನ ಒಟ್ಟಿಗೆ ಸೇರಿಸಿರೋ ಡೈರೆಕ್ಟರ್ ನೆಲ್ಸನ್, ಅದಕ್ಕಾಗಿ ಎಷ್ಟು ಒದ್ದಾಡಿದ್ರು ಅನ್ನೋದನ್ನ ಕೂಡ ತೋರಿಸಿದ್ದಾರೆ. ಇಬ್ಬರ ರೂಮ್ಸ್ ಪೈಕಿ ಮೊದಲು ಯಾರ ರೂಮ್‌ಗೆ ಹೋಗಬೇಕು ಅನ್ನೋ ಕನ್ಫ್ಯೂಷನ್‌ನಿಂದ ಹಿಡಿದು, ಮ್ಯೂಸಿಕ್ ಬಗ್ಗೆ ಹೇಳೋಕೆ ಹೋದಾಗ, ಅದೆಲ್ಲಾ ಇರಲಿ ಮೊದಲಿಗೆ ಹೀರೋ ಯಾರು ಅನ್ನೋ ಕಮಲ್ ಹಾಸನ್ ಪ್ರಶ್ನೆವರೆಗೆ ಎಲ್ಲವೂ ಥ್ರಿಲ್ಲಿಂಗ್ ಆಗಿದೆ.
ಇಬ್ಬರೂ ಸೂಪರ್ ಸ್ಟಾರ್‌ಗಳು ಸಖತ್ ಸ್ಟೈಲಿಶ್ ಆಗಿ ಕಾಣ್ತಿದ್ದು, ಗ್ಯಾಂಗ್‌ಸ್ಟರ್‌ಗಳ ಮಾನ್‌ಸ್ಟರ್ಸ್ ರೀತಿ ಮಿಂಚುತ್ತಿದ್ದಾರೆ. ಸ್ಟೈಲಿಶ್ ಶೇಡ್ಸ್, ವಾಚ್, ಬೆಲ್ಟ್, ಬೂಟ್ಸ್ ಹಾಗೂ ಕಾಸ್ಟ್ಯೂಮ್ಸ್‌ನಂದ ಕಿಕ್ಕೇರಿಸಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಕಿಕ್‌ಸ್ಟಾರ್ಟ್ ಆಗಲಿದ್ದು, ಬಹುಶಃ ಜೈಲರ್-2 ರಿಲೀಸ್ ಆಗ್ತಿದ್ದಂತೆ ಬಿಗ್ ಬ್ರೇಕಿಂಗ್ ನ್ಯೂಸ್ ಹೊರಬೀಳಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್
