ಚಿತ್ರರಸಿಕರ ಹೃದಯದಲ್ಲಿ ಅಮರನಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಲು ಸಿದ್ಧರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಇತ್ತೀಚೆಗೆ ಚರ್ಚೆಯ ವಿಷಯವಾಗಿದೆ.
ರಜನಿಕಾಂತ್ 2026ರ ಅಂತ್ಯದ ವೇಳೆಗೆ ಅಥವಾ 2027ರ ಆರಂಭದಲ್ಲಿ ನಿವೃತ್ತಿಯನ್ನು ಘೋಷಿಸಬಹುದು. ಇತ್ತೀಚೆಗೆ ಅವರ ‘ಕೂಲಿ’ ಚಿತ್ರದಲ್ಲಿ ಡೂಪ್ ಬಳಕೆಯ ವಿವಾದವು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಸದ್ಯ ರಜನಿಕಾಂತ್ ಅವರ ಕೈಯಲ್ಲಿ ಮೂರು ಮಹತ್ವದ ಚಿತ್ರಯೋಜನೆಗಳಿವೆ, ಅವುಗಳ ಪೂರ್ಣಗೊಂಡ ನಂತರ ನಿವೃತ್ತಿ ಘೊಷಿಸಬಹುದು ಎಂದು ಮೂಲಗಳು ತಿಳಿಸಿವೆ.ಮೊದಲನೆಯದಾಗಿ, ಜೈಲರ್ 2 ಇದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ‘ಜೈಲರ್’ ಚಿತ್ರದ ಯಶಸ್ಸಿನ ನಂತರ ಬೃಹತ್ ಅಪೇಕ್ಷೆಯನ್ನು ಸೃಷ್ಟಿಸಿದೆ. ಎರಡನೆಯದಾಗಿ, ಅವರು ಪ್ರಸಿದ್ಧ ನಿರ್ದೇಶಕ ಸಿ. ಸುಂದರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
ಮೂರನೆಯದು ರಜನಿಕಾಂತ್ ಮತ್ತು ಕಮಲ್ ಹಾಸನ್ ಜೊತೆಗೂಡಿ ಮಾಡುವ ಸಿನಿಮಾ. ಇಬ್ಬರು ದಿಗ್ಗಜರ ನಡುವಿನ ಈ ಚಿತ್ರವನ್ನು ಅಭಿಮಾನಿಗಳು ದಶಕಗಳಿಂದ ಎದುರುನೋಡುತ್ತಿದ್ದಾರೆ. ಈ ಮೂರು ಚಿತ್ರಗಳ ಚಿತ್ರೀಕರಣ ಮತ್ತು ನಂತರದ ಕಾರ್ಯಗಳು 2026ರ ಅಂತ್ಯದ ವೇಳೆಗೆ ಅಥವಾ 2027ರ ಆರಂಭದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.





