ಜನಪ್ರಿಯ ರಿಯಾಲಿಟಿ ಶೋ ‘ಸರಿಗಮಪ’ದ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡ ಗಾಯಕಿ ಸುಹಾನಾ ಸೈಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಹಾನಾ ಮುಸ್ಲಿಂ ಕುಟುಂಬದವರಾಗಿದ್ದರೆ, ನಿತಿನ್ ಹಿಂದೂ ಕುಟುಂಬದವರು. ಇಬ್ಬರೂ ಅಂತರ್ಧರ್ಮೀಯ ವಿವಾಹ ಮಾಡಿಕೊಂಡು, ಮಂತ್ರ ಮಾಂಗಲ್ಯದ ಆಶಯದಿಂದ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ.
ಸುಹಾನಾ ಸೈಯ್ಯದ್ ಅವರು ಹಿಜಾಬ್ ಧರಿಸಿ ಹಿಂದೂ ಭಜನೆಗಳನ್ನು ಹಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು ಹೀಗಾಗಿ ಕಳೆದ ಕೆಲವು ಸಾರಿ ಸುಹಾನಾ ಅವರ ಕಾರ್ಯಕ್ರಮಗಳಿಗೆ ಬೆದರಿಕೆಗಳು ಬಂದಿದ್ದು, ಅಹಿತಕರ ಘಟನೆಗಳು ನಡೆಯಬಾರದೆಂಬ ಕಾರಣದಿಂದ ಪೊಲೀಸ್ ಸುರಕ್ಷತೆಯ ಜೊತೆಗೆ ಅವರ ಕಾರ್ಯಕ್ರಮಗಳು ನಡೆದಿದ್ದವು. ಇದೇ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಈ ದಂಪತಿಗಳ ವಿವಾಹವೂ ಪೊಲೀಸ್ ಸುರಕ್ಷತೆಯಲ್ಲಿ ನೆರವೇರಿದೆ.