ಸುಧಾರಾಣಿ ನಿರ್ಮಾಣ ಹಾಗೂ ನಟನೆಯ ಕಿರು ಚಿತ್ರ

Web 2025 06 01t231938.594

1978 ರಲ್ಲಿ ಬಂದಂತಹ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ನಾಯಕತ್ವದ ಕಿಲಾಡಿ ಕಿಟ್ಟು ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡಿದ್ದ ಸುಧಾರಾಣಿ, ನಂತರದ ದಿನಗಳಲ್ಲಿ 1986 ರಲ್ಲಿ ಶಿವರಾಜ್ ಕುಮಾರ್ ಜೊತೆಗೆ ನಾಯಕಿಯಾಗಿ ಆನಂದ್ ಚಿತ್ರದಲ್ಲಿ ನಟಿಸುವುದರ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿ, ಇಲ್ಲಿಯ ತನಕ ಬಹಳಷ್ಟು ಚಿತ್ರಗಳಲ್ಲಿ ಕನ್ನಡದ ಎಲ್ಲಾ ಸೂಪರ್ ಸ್ಟಾರ್ಸ್ ಗಳ ಜೊತೆಗೆ ನಾಯಕಿಯಾಗಿ ನಟಿಸಿ, ಸೈ ಎನಿಸಿ ಕೊಂಡಿದ್ದಲ್ಲದೆ, ಕಾಲ ಕ್ರಮೇಣ ಪೋಷಕ ಪಾತ್ರಗಳಲ್ಲಿಯೂ ಸಹ ನಟಿಸಿ ಬ್ಯುಸಿಯಾಗಿದ್ದರು,

ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಸುಧಾರಾಣಿ ಇಲ್ಲಿಯೂ ಕೂಡಾ ಸಕ್ಸಸ್ ಕಂಡಿದ್ದು ವಿಶೇಷ.

ADVERTISEMENT
ADVERTISEMENT

ಸುಧಾರಾಣಿಯವರೆ ನಿರ್ಮಿಸಿ, ನಟಿಸಿದ ಘೋಸ್ಟ್ ಕಿರು ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆ ಕೆಟ್ಟದ್ದು ಇದೆ. ದೇವರು ಇದ್ದಾನೆ. ದೆವ್ವವು ಇದೆ. ಇದೆಲ್ಲವೂ ನಮ್ಮ ನಮ್ಮ ಕಲ್ಪನೆಗೆ ಬಿಟ್ಟದ್ದು. ಈ ವಿಚಾರದ ಮೇಲೆ ಬಂದಂತಹ ಒಂದು ಎಳೆಯನ್ನಿಟ್ಟುಕೊಂಡು ಕಿರು ಚಿತ್ರ ಮಾಡಿದ್ದೇನೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಿರ್ದೇಶಕರು ಈ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು ನಟಿ ಸುಧಾರಾಣಿ.

ಇನ್ನೂ ಚಿತ್ರದಲ್ಲಿ ಸುಧಾರಾಣಿ ಯವರ ಜೊತೆಗೆ ನಟಿಸುವುದರ ಜೊತೆಗೆ ,ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಸುದೇಶ್ ಕೆ ರಾವ್ ಮಾತನಾಡಿ ತಾವು ಇಲ್ಲಿಯ ತನಕ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಬಗ್ಗೆ ಮತ್ತು ನಿರ್ದೇಶನ ಮಾಡಿರುವ ಕುರಿತು ಅನುಭವ ಹಂಚಿಕೊಂಡರು. ಘೋಸ್ಟ್ ಸ್ಪೆಷಲ್ ಕಥೆಯಾಗಿ ನಿಲ್ಲುತ್ತದೆ.

ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ‌. ಅಂತಹ ಎಲ್ಲರಿಗೂ ಈ ಶಾರ್ಟ್ ಫಿಲ್ಮ್ ಪರಿಹಾರ ನೀಡಬಹುದು ಎಂದು ಹೇಳಿದರು. “ಘೋಸ್ಟ್” ಕಿರುಚಿತ್ರಕ್ಕೆ “ದಿ ದೆವ್ವ” ಎಂಬ ಅಡಿಬರಹವಿದೆ‌.

Exit mobile version